


ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯದ ಕೆಲವು ಸಂಸದರಿಗೆ ಅವರವರ ಕ್ಷೇತ್ರಗಳಲ್ಲಿ ಗೋಬ್ಯಾಕ್ ಸಿಂಹ, ಗೋಬ್ಯಾಕ್ ಹೆಗಡೆ,ತೊಲಗಿ ಕರಂದ್ಲಾಜೆ ಎನ್ನುವ ವಿರೋಧಿ ಅಭಿಯಾನ ಪ್ರಾರಂಭವಾಗಿದೆ.
ಹೆಗಡೆ, ಕರಂದ್ಲಾಜೆ, ಸಿಂಹ, ಜಿಗಜಿಣಗಿ,ಸದಾನಂದ ಗೌಡ ಸೇರಿದಂತೆ ಅನೇಕ ಸಂಸದರು ಜನರ ನಿರೀಕ್ಷೆ ತಲುಪುವುದು ಹಾಗಿರಲಿ, ಸಾರ್ವಜನಿಕ ವಲಯದಲ್ಲಿ ಸಮಾಧಾನಕರ ಅಥವಾ ಒ.ಕೆ. ಎನ್ನುವ ಗೌರವವನ್ನೂ ಇಟ್ಟುಕೊಂಡಿಲ್ಲ.

ಮೈಸೂರಿನ ಪ್ರತಾಪ್ ಸಿಂಹ, ಜಿಗಜಿಣಗಿ, ಅನಂತಕುಮಾರ ಹೆಗಡೆ, ಶೋಭಾ ಸೇರಿದ ಬಹುತೇಕರು ಸಂಸತ್ ನಲ್ಲಿ ಭಾಗವಹಿಸಿಲ್ಲ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ ನ ಗಮನ ಸೆಳೆದಿಲ್ಲ ಎನ್ನುವ ಆರೋಪಗಳಿವೆ.
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಮತ್ತು ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪ್ರಸ್ತಾಪ, ಚರ್ಚೆ ಸಂದರ್ಭದಲ್ಲಿ ಗೈರು ಹಾಜರಿರುವ ಬಗ್ಗೆ ಈಗ ದಾಖಲೆಗಳು ಬಿಡುಗಡೆ ಆಗುತ್ತಿವೆ.

ಮಲೆನಾಡು, ಕರಾವಳಿಯ ಅರಣ್ಯ ಅತಿಕ್ರಮಣದ ಬಗ್ಗೆ ಸಂಸತ್ ನಲ್ಲಿ ತುಟಿ ಬಿಚ್ಚದ ಈ ಸಂಸದರು. ಈಗ ಚುನಾವಣೆ ಎದುರಾಗುತ್ತಲೇ ತಮ್ಮ ಲಾಗಾಯ್ತಿನ ಹಿಂದುತ್ವ, ರಾಷ್ಟ್ರೀಯತೆ, ದೇಶಭಕ್ತಿಯ ಹಳೆ ಆಡಿಯೋ ರಿ ಪ್ಲೇ ಮಾಡತೊಡಗಿದ್ದಾರೆ.
ಭಾರತೀಯರಲ್ಲಿ ೯೯.೯೯ ಪ್ರತಿಶತ ದೇಶಪ್ರೇಮಿಗಳು, ದೇಶಪ್ರೇಮವೆಂದರೆ ಪ್ರಾಮಾಣಿಕ ದುಡಿಮೆ, ರಾಷ್ಟ್ರದ ಉನ್ನತಿಗೆ ಅವರವರ ಕ್ಷೇತ್ರಗಳಿಂದಲೇ ಶ್ರಮಿಸುವುದು. ಈ ವಿಚಾರದಲ್ಲಿ ಕಿಸಾನ್ (ರೈತ) ಜವಾನ್ (ಸೈನಿಕ) ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಒಳಗೊಳ್ಳುತ್ತವೆ.
ಜನರಿಂದ ಆಯ್ಕೆಯಾಗುವ ಪ್ರತಿನಿಧಿ, ಶಾಸಕ, ಸಂಸದ ಮಂತ್ರಿ, ಮುಖ್ಯಮಂತ್ರಿ-ಪ್ರಧಾನಿ ಯಾರೂ ಜವಾಬ್ಧಾರಿಯಿಂದ ನಡೆದುಕೊಳ್ಳದಿದ್ದರೆ ಅದು ಕರ್ತವ್ಯ ಲೋಪದ ಜೊತೆಗೆ ದೇಶದ್ರೋಹ.
ಕರ್ನಾಟಕದಿಂದ ಸಂಸತ್ ಗೆ ಆಯ್ಕೆಯಾಗಿದ್ದ ೨೮ ಜನ ಸಂಸದರಲ್ಲಿ ಕೆಲವರನ್ನು ಬಿಟ್ಟರೆ ಬಹುತೇಕರು ತಮ್ಮ ಕರ್ತವ್ಯ ನಿರ್ವಹಿಸದ ದೇಶದ್ರೋಹಿಗಳು. ಇಂಥ ಜನವಿರೋಧಿ ಬೇಜವಾಬ್ಧಾರಿಗಳಿಗೆ ಯಾವುದೇ ಪಕ್ಷ ಅವಕಾಶ ಕೊಡುವುದು, ಅವರಿಗೆ ಜನ ಮತದಾನ ಮಾಡುವುದು ದೇಶದ್ರೋಹದ ಕೆಲಸ.
ಈಗ ರಾಜ್ಯದ ಬಹುತೇಕ ಸಂಸದರಿಗೆ ಬಿ.ಜೆ.ಪಿ. ಮತ್ತೆ ಟಿಕೇಟ್ ನೀಡುತ್ತಿದೆ! ಇಂಥ ಸಂಸದರಿಗೆ ಟಿಕೇಟ್ ಕೊಡಿ ಎಂದು ಬಿ.ಜೆ.ಪಿ. ನಿಯಂತ್ರಿಸುತ್ತಿರುವ ಪರಿವಾರ ಫರ್ಮಾನು ಮಾಡುತ್ತಿದೆಯಂತೆ! ಈ ದುಷ್ಟ ಪರಿವಾರ ಸಂವಿಧಾನ ವಿರೋಧಿ, ಬಹುಸಂಖ್ಯಾತರ ವಿರೋಧಿ ಜನವಿರೋಧಿ ಪರಿವಾರ. ಈ ಪರಿವಾರದ ಗುಲಾಮರ ಪಕ್ಷ ಭಾರತಕ್ಕೇ ಶಾಪ. ಇಂಥ ಪಾಪ, ಶಾಪಗಳಿಂದ ಉತ್ತರ ಕನ್ನಡ,ಉಡುಪಿ ಸೇರಿದಂತೆ ರಾಜ್ಯ, ದೇಶಗಳ ಅನೇಕ ಕ್ಷೇತ್ರಗಳಲ್ಲಿ ಜನವಿರೋಧಿಗಳನ್ನು ಬಿ.ಜೆ.ಪಿ. ಅಭ್ಯರ್ಥಿಗಳನ್ನಾಗಿಸಲು ಸಂಘ ಪರಿವಾರ ಸೂಚಿಸಿದೆಯಂತೆ! ಸಾಂವಿಧಾನಿಕ ಮಾನ್ಯತೆ ಇಲ್ಲದ ಬಹುಜನವಿರೋಧಿಗಳ ದುಷ್ಟ ಸಂಘ ತನ್ನ ಸ್ವಾರ್ಥಕ್ಕೆ ಜನವಿರೋಧಿ ಮತಾಂಧ ದುಷ್ಟರನ್ನು ಜನಪ್ರತಿನಿಧಿಗಳನ್ನಾಗಿಸಿ ದುಷ್ಟ ಕೈಗೆ ಅಧಿಕಾರ ಕೊಡಿಸುವ ಹುನ್ನಾರಗಳ ಹಿಂದೆ ಅವರ ಲಾಗಾಯ್ತಿನ ವಿದ್ರೋಹಿತನವಿದೆ.
ಭಾರತದ ಬಹುಸಂಖ್ಯಾತ ಮೂಲನಿವಾಸಿಗಳ ವಿರೋಧಿ ಸಂಘ ಪರಿವಾರ ಇಂಥ ಸಮಯಸಾಧಕ ಕೆಲಸಗಳಿಂದ ಭಾರತದ ನಾಶಕ್ಕೆ ಪಣತೊಟ್ಟಂತಿದೆ. ಜನಸಾಮಾನ್ಯರ ಮೇಲೆ ಜನದ್ರೋಹಿಗಳನ್ನು ಹೇರುವ ಸಂಘ ಪರಿವಾರ ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜನವಿರೋಧಿಯಲ್ಲವೆ? ಇಂಥ ಸಂಘ, ಪರಿವಾರ ನಿಯಂತ್ರಿತ ಪಕ್ಷ ಜನವಿರೋಧಿತನದ ದೇಶದ್ರೋಹಿ ಸಂಘಟನೆಯಾಗುವುದಿಲ್ಲವೆ? ಇಂಥವರಿಗೆ ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ ಸಿಂಹ, ಕರಂದ್ಲಾಜೆಯಂಥವರೇ ಇಷ್ಟವಾಗುವುದು ಸ್ವಾಭಾವಿಕವಲ್ಲವೆ?
