

ಭಟ್ಕಳ ದಲ್ಲಿ ಬಂದು ಗಲಾಟೆ ಮಾಡಿದರೆ ಮತ ಬರುತ್ತದೆ ಎಂದು ಅನಂತಕುಮಾರ ಹೆಗಡೆ ಹುಚ್ಚಾಟ ಮಾಡುತಿದ್ದಾರೆ. ಇಂಥ ಬುದ್ಧಿಗೇಡಿಗೆ ಆಗಲಿ ಯಾರಿಗೇ ಆಗಲಿ ಕಾನೂನುಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ಎಚ್ಚರಿಸಿದರು.
ಭಟ್ಕಳ ದಿಂದ ಬನವಾಸಿಗೆ ಹೋಗುವ ಮಾರ್ಗಮಧ್ಯೆ ಸಮಾಜಮುಖಿ ಡಾಟ್ ನೆಟ್ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ಅನಂತಕುಮಾರ ಹೆಗಡೆ ನಿನ್ನೆ ಭಟ್ಳದಲ್ಲಿ ಆಡಿದ್ದು ಮಾಡಿದ್ದು ನ್ಯಾಯ ಸಮ್ಮತವೆ? ಅವರ ಬಗ್ಗೆ ಜನ, ಮಾಧ್ಯಮಗಳು ಎನಂದುಕೊಂಡಿವೆ. ಬುದ್ಧಿ ಇಲ್ಲದವರಿಗೆ ಕ್ರಮ ಜರುಗಿಸಲು ತುಸು ಯೋಚಿಸಬೇಕಿದೆ. ಅವರ ಮೇಲೆ ಕಾನೂನು ಕ್ರಮ ಜರುಗಲಿದೆ ಎಂದರು.
ಮಂಗನ ಕಾಯಲೆ ಪರಿಹಾರ ವ್ಯತ್ಯಾಸದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೌದು ನೀವು ಹೇಳಿದಂತೆ ಕೆ.ಎಫ್.ಡಿ. ಸಾವಿನ ಪರಿಹಾರ ಮೊತ್ತ ಎರಡು ಲಕ್ಷ ಅಲ್ಪವೇ. ಹಾಗಾಗಿ ನಾವು ಅರಣ್ಯ ಕಾಯ್ದೆ ಅಡಿ ಹಾವು ಕಡಿತ,ಮಂಗನಕಾಯಿಲೆ ಸೇರಿದ ಅರಣ್ಯ ಸಂಬಂಧಿ ಸಾವುಗಳಿಗೆ ೧೫ ಲಕ್ಷ ಪರಿಹಾರ ಕೊಡಿಸಲು ಪ್ರಯತ್ನ ಮಾಡುತಿದ್ದೇವೆ ಎಂದರು.
