ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಇಂದು ವಿದ್ಯುಕ್ತವಾಗಿ ಪ್ರಾರಂಭವಾಯಿತು. ಈ ಮಂಗಳವಾರದಿಂದ ಮುಂದಿನ ಮಂಗಳವಾರದ ವರೆಗೆ ನಡೆಯುವ ವಾರದ ಜಾತ್ರೆಗೆ ವಿಶಿಷ್ಟ ರೂಢಿ-ಸಂಪ್ರದಾಯದ ಮೂಲಕ ಚಾಲನೆ ನೀಡಲಾಯಿತು. ಇಂದಿನ ಆರಂಭಿಕ ಶಾಸ್ತ್ರ ಸಂಪ್ರದಾಯಗಳ ನಂತರ ನಗರದ ಕೇಂದ್ರಸ್ಥಳ ಬಿಡಕಿಬೈಲಿನ ಗದ್ದುಗೆಗೆ ಬರುವ ಶ್ರೀ ಮಾರಿಕಾಂಬಾ ದೇವಿ ಮುಂದಿನ ಮಂಗಳವಾರದ ರಾತ್ರಿಯ ವರೆಗೂ ಇಲ್ಲೇ ನೆಲಸಿ ಪೂಜೆ, ಪುನಸ್ಕಾರ ಪಡೆಯುತ್ತಾಳೆ ನಂತರ ಬುಧವಾರದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ನಡೆಯುವ ವಿಸರ್ಜನಾ ಮೆರವಣಿಗೆ ನಂತರ ಮಾರಿಕಾಂಬೆಯನ್ನು ವಿಸರ್ಜಿಸಲಾಗುತ್ತದೆ. ನಂತರ ಯುಗಾದಿ ನಂತರ ಮೊದಲಿನಂತೇ ಮಾರಿಕಾಂಬೆಗೆ ನಿತ್ಯ ಪೂಜೆ ಪ್ರಾರಂಭವಾಗುತ್ತದೆ.
ಶಿರಸಿಯ ಮಾರಿಕಾಂಬಾ ಜಾತ್ರೆಗೆ ರಾಜ್ಯ-ದೇಶದಾದ್ಯಂತ ಜನಸಾಗರ ಹರಿದು ಬರುತ್ತದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಈ ಜಾತ್ರೆ ಕರಾವಳಿ, ಮಲೆನಾಡು ಎನ್ನದೆ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಇಂದು ಧ್ವಜ ಏರಿಸುವ ಸಂಪ್ರದಾಯದಲ್ಲಿ ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ನಗರದ ಪ್ರಮುಖರು ಧ್ವಜ ಏರಿಸಿದರು.
ಒಂದು ವಾರದ ಈ ಜಾತ್ರೆಯಲ್ಲಿ ಮೋಜು-ಮಜಾ ಗಳ ಜೊತೆ ಖರೀದಿ,ಮಾರಾಟಗಳ ಭರಾಟೆ ಜೋರಾಗೇ ನಡೆಯುತ್ತದೆ. ಮಾಂಸಾಹಾರಿಗಳು ಮಾಶದ ಅಡಿಗೆ ತಯಾರಿಸಿ ಆಪ್ತರು, ಹಿತೈಶಿಗಳಿಗೆ ಆಥಿತ್ಯ ನೀಡುವುದು ಈ ಜಾತ್ರೆಯ ಭಾಗ.