


ಸಿದ್ದಾಪುರ
ತಾಲೂಕಿನ ದಂಟಕಲ್ಲಿನ ಯಕ್ಷಚಂದನ ಸಂಸ್ಥೆಯ ದಶಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ಯಕ್ಷಸಂಜೆ ಕಾರ್ಯಕ್ರಮ ಏ.೭ರಂದು ಸಂಜೆ ೬ಕ್ಕೆ ಗಾಳೀಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಜರುಗಲಿದೆ.
ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆವಹಿಸುವರು. ಡಾ.ಕೃಷ್ಣಮೂರ್ತಿ ರಾಯ್ಸದ್ ಶಿರಸಿ,ಶ್ರೀಕಾಂತ ಹೆಗಡೆ ಶಿರಸಿ, ಅನಂತಮೂರ್ತಿ ಹೆಗಡೆ, ಮಹಾಬಲೇಶ್ವರ ಹೆಗಡೆ ತೀರ್ಥಹಳ್ಳಿ, ರವೀಂದ್ರ ಹೆಗಡೆ ಹಿರೇಕೈ, ರಾಘವೇಂದ್ರ ಬೆಟ್ಟಕೊಪ್ಪ, ಅಶೋಕ ಹೆಗಡೆ ಹಿರೇಕೈ, ಲಕ್ಷಿö್ಮನಾರಾಯಣ ಹೆಗಡೆ ಉಪಸ್ಥಿತರಿರುತ್ತಾರೆ.
ಗುರುವಂದನೆ: ಯಕ್ಷಗಾನ ಕಲಾವಿದ ಸತೀಶ ಉಪಾಧ್ಯ ಅಂಬಲಪಾಡಿ ಉಡುಪಿ ಅವರಿಗೆ ಗುರುವಂದನೆ ಸತೀಶ ಉಪಾಧ್ಯ ಶಿಷ್ಯಬಳಗದವರಿಂದ ಜರುಗಲಿದೆ.
ನಂತರ ಯಕ್ಷಸಂಜೆ ಕಾರ್ಯಕ್ರಮದ ಅಂಗವಾಗಿ ಕಂಸವಧೆ ಯಕ್ಷಗಾನ ಜರುಗಲಿದ್ದು ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್, ನಂದನ ದಂಟಕಲ್, ಶಂಕರ ಭಾಗವತ, ಶರತ ಹೆಗಡೆ ಜಾನಕೈ,ಗಣೇಶ ಗಾಂವಕರ್, ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸುವರು. ಮುಮ್ಮೇಳದಲ್ಲಿ ಸತೀಶ ಉಪಾಧ್ಯ, ಅಶೋಕ ಭಟ್ಟ ಸಿದ್ದಾಪುರ,ನರೇಂದ್ರ ಅತ್ತಿಮುರುಡು, ವೆಂಕಟೇಶ ಬೊಗರಿಮಕ್ಕಿ, ನಿತಿನ್ ಹೆಗಡೆ, ಕಾರ್ತಿಕ್ ಹೆಗಡೆ, ಕು.ಧನಶ್ರೀ ಹೆಗಡೆ, ಕು. ಮೈತ್ರಿ ಸಂಪೇಸರ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸ(ಹೊನ್ನೆಹದ್ದ)ದ ನವೋದಯ ಕಲಾ ನಾಟ್ಯ ಸಂಘದಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ(ಅಪ್ಪು) ಸವಿನೆನಪಿಗಾಗಿ ಏ.೬ರಂದು ರಾತ್ರಿ ೯ರಿಂದ ದೇವಾಸ ಶಾಲಾ ಆವರಣದಲ್ಲಿ ತಿಮ್ಮಪ್ಪ ಎಂ.ಸಂಪೇಸರ ನಿರ್ಧೇ ಶನದ ಸುವೇಗ ಕಲಾ ವೃಂದ ಕೊಂಡ್ಲಿ ಇವರ ಸಂಗೀತ ಇರುವ ಕುರುಬ ಹಚ್ಚಿದ ಕುಂಕುಮ ಅರ್ಥಾತ್ ಮರಳಿ ಮಿಂಚಿದ ಮಾಗಲ್ಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
