ಬಿಜೆಪಿಯದ್ದು ಚುನಾವಣಾ ಪ್ರಣಾಳಿಕೆ ಅಲ್ಲ, ಅದೊಂದು ಸುಳ್ಳಿನ ಘೋಷಣಾ ಪತ್ರ: ಬಿ.ಕೆ ಹರಿಪ್ರಸಾದ್

ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ.

ಬಿ.ಕೆ ಹರಿಪ್ರಸಾದ್

ಬಿ.ಕೆ ಹರಿಪ್ರಸಾದ್

ಬೆಂಗಳೂರು: ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ. ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವುದು ಚುನಾವಣಾ ಪ್ರಣಾಳಿಕೆ ಅಲ್ಲ,ಅದೊಂದು “ಸುಳ್ಳಿನ ಘೋಷಣಾ” ಪತ್ರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಕ್ಷ ಇತಿಹಾಸದಲ್ಲೇ ಕ್ರಾಂತಿಕಾರಿ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್ ಪ್ರಣಾಳಿಕೆ ಎದುರು ಬಿಜೆಪಿಯ ಪ್ರಣಾಳಿಕೆ ಸರಿಸಾಟಿಯೇ ಇಲ್ಲ ಎಂಬುದನ್ನು ತಜ್ಞರು ಮಾತ್ರವಲ್ಲ, ದೇಶದ ಸಾಮಾನ್ಯ ಜನರೇ ಮಾತಾಡುವಂತಾಗಿದೆ. ಅದಕ್ಕೆ ಈ ಹತ್ತು ಕಾರಣಗಳೇ ಸಾಕು ಎಂದಿದ್ದಾರೆ.

ಬಿ.ಕೆ ಹರಿಪ್ರಸಾದ್

1. ಜನರ ಧ್ವನಿಯಾಗಲು

ಕಾಂಗ್ರೆಸ್:- ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ನಂತರ, ದೇಶದ ಜನರ ಸಮಸ್ಯೆಗಳ ಅಂಶಗಳನ್ನೇ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬಿಜೆಪಿ:- ಪ್ರಣಾಳಿಕೆಯನ್ನು ಮೋದಿಯವರ ಹೊಗಳಿಕೆಗೆ ಮೀಸಲಿಟ್ಟಿರುವುದು ದುರಂತ. 69, ಬಾರಿ ಮೋದಿಯ ಜಪ, 53 ಬಾರಿ ಮೋದಿಯ ವರ್ಣನೆ ಮಾಡಲಾಗಿದೆ.

2. ದೇಶದ ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿ

ಕಾಂಗ್ರೆಸ್:- ದೇಶದ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರದ ಬಗ್ಗೆ ಗಮನ ಹರಿಸಿದೆ.

ಬಿಜೆಪಿ:- ನಿರುದ್ಯೋಗ ಹಾಗೂ ಬೆಲೆ ಏರಿಕೆಯ ಬಗ್ಗೆ ಚಕಾರ ಎತ್ತಿಲ್ಲ.

3. ನೈಜ ಪರಿಹಾರ

ಕಾಂಗ್ರೆಸ್:- ಉದ್ಯೋಗ ಸೃಷ್ಟಿಗಾಗಿ ನಿರ್ಧಿಷ್ಟ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

ಬಿಜೆಪಿ:-ಹೊಸ ಯೋಜನೆಗಳಿಗೆ ಒತ್ತು ನೀಡದೆ, ಹಳೆಯ ಯೋಜನೆಗಳನ್ನೇ ಪುನರಾವರ್ತನೆ ಮಾಡಲಾಗಿದೆ.

4. ಉತ್ತಮ ಆಡಳಿತಕ್ಕಾಗಿ

ಕಾಂಗ್ರೆಸ್:- ಗ್ಯಾರೆಂಟಿಗಳ ಅನುಷ್ಠಾನ ಸೇರಿದಂತೆ ಪಾರದರ್ಶಕವಾಗಿ ಆಡಳಿತ ನಡೆಸಲು ಸ್ವಷ್ಟವಾದ ಮಾರ್ಗಸೂಚಿ ರೂಪಿಸಲಾಗಿದೆ.

ಬಿಜೆಪಿ:- ಯಾವ ಅಂಶಗಳನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬ ಕಣ್ಣೋಟವೇ ಇಲ್ಲ.

5. ರೈತರಿಗೆ ಬೆಂಬಲ ಬೆಲೆ

ಕಾಂಗ್ರೆಸ್:- ಸ್ವಾಮೀನಾಥನ್ ಆಯೋಗದ ಪ್ರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ.

ಬಿಜೆಪಿ:-ಕಾಲ ಕಾಲಕ್ಕೆ ರೈತರಿಗೆ ಬೆಂಬಲ ಬೆಲೆ ನೀಡಲಾಗುವುದು.

6. ಮಹಿಳಾ ಸಬಲೀಕರಣ

ಕಾಂಗ್ರೆಸ್:- ಎಲ್ಲಾ ಮಹಿಳೆಯರ ಖಾತೆಗಳಿಗೆ ವರ್ಷಕ್ಕೆ ಒಂದು ಲಕ್ಷ ಹಣ ನೀಡುವುದು.

ಬಿಜೆಪಿ:- ಕುಟುಂಬದವ ಆದಾಯವನ್ನೇ ಪರಿಗಣಿಸಿ “ಲಕ್ಷಪತಿ ದೀದಿ” ಎಂದು ಘೋಷಿಸುತ್ತಾರೆ.

7. ಯುವಜನತೆಗೆ ಉದ್ಯೋಗ

ಕಾಂಗ್ರೆಸ್:- 30 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ. ವರ್ಷಕ್ಕೆ ಒಂದು ಲಕ್ಷ ಯುವಜನತೆಗೆ ನಿರುದ್ಯೋಗ ಭತ್ಯೆ. ಉದ್ಯೋಗ ಸೃಷ್ಟಿಸಲು ಒತ್ತು ನೀಡುವುದು.

ಬಿಜೆಪಿ:- ಉದ್ಯೋಗ ಸೃಷ್ಟಿಸಲು ಯಾವುದೇ ನೀತಿಯೂ ಇಲ್ಲ, ಯೊಜನೆಯೂ ಇಲ್ಲ.

ಬಿ.ಕೆ ಹರಿಪ್ರಸಾದ್

8. ಕಾರ್ಮಿಕರ ಆದಾಯ ಹೆಚ್ಚಳ

ಕಾಂಗ್ರೆಸ್:- ಕಾರ್ಮಿಕರ ದಿನದ ಆದಾಯ 400 ರೂಗೆ ಹೆಚ್ಚಳ, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಜಾರಿಗೆ ಕ್ರಮ.

ಬಿಜೆಪಿ:- ಕಾರ್ಮಿಕರ ಕನಿಷ್ಠ ವೇತನವನ್ನು ಕಾಲ ಕಾಲ ಪರಿಶೀಲನೆ ನಡೆಸಲಾಗುವುದು.

9. ಸಾಮಾಜಿಕ ನ್ಯಾಯ

ಕಾಂಗ್ರೆಸ್:- ಸಾಮಾಜಿಕ ನ್ಯಾಯವೇ ಕಾಂಗ್ರೆಸ್ ಪಕ್ಷದ ಬದ್ದತೆಯಾಗಿದ್ದು, ನಿರಂತರವಾಗಿ ಪಾಲಿಸಲಾಗುವುದು.

ಬಿಜೆಪಿ:-ಸಮಾನತೆಯ ಬಗ್ಗೆ ಚಕಾರವೇ ಎತ್ತಿಲ್ಲ.

10. ಭರವಸೆಯ ಯೋಜನೆಗಳ ಘೋಷಣೆ

ಕಾಂಗ್ರೆಸ್:- ತಿಂಗಳುಗಳ ಕಾಲ ಸುಧೀರ್ಘ ಚರ್ಚೆ ನಡೆಸಲಾಗಿದ್ದು, ಹಲವು ಸಂಶೋಧನೆಗಳು ಹಾಗೂ ತಜ್ಞರೊಂದಿಗಿನ ಮಹತ್ವದ ಚರ್ಚೆಗಳ ನಂತರ ಘೋಷಿಸಲಾಗಿದೆ.

ಬಿಜೆಪಿ:- ಕೇವಲ ಹದಿನೈದು ದಿನಗಳ ತರಾತುರಿಯಲ್ಲಿ ಪ್ರಣಾಳಿಕೆ ಸಮಿತಿ ರಚನೆ ಮಾಡಿ ಘೋಷಿಸಲಾಗಿದೆ.

ದೇಶದ ಜನರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸ್ವಾಗತಿಸುತ್ತಿದ್ದಾರೆ, ಚರ್ಚೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಪೂರ್ವಪರ ಇಲ್ಲದ, ದೂರದೃಷ್ಟಿಯೇ ಇಲ್ಲದ ಬಿಜೆಪಿಯ ಪ್ರಣಾಳಿಕೆಗೆ ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಬಿಜೆಪಿಯ ಮೇಲೆ ಜನರು ನಂಬಿಕೆ ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *