


ಸಿದ್ದಾಪುರ
ಪಟ್ಟಣದ ಕೊಂಡ್ಲಿಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಪ್ರತಿ ೭ ವರ್ಷಗಳಿಗೊಮ್ಮೆ ಜರುಗುವ ಶ್ರೀ ರಾಮ ಸಪ್ತಾಹ ಏ.೧೬ರಿಂದ ೨೩ರವರೆಗೆ ನಡೆಯಲಿದೆ. ಸಮಸ್ತ ಗ್ರಾಮದ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ನಂದಾದೀಪ ಪ್ರತಿಷ್ಠಾಪಿತ ಪರಿವಾರ ಶ್ರೀ ರಾಮದೇವರ ಪೂಜೆ ಹಾಗೂ ಶ್ರೀರಾಮ ಅಖಂಡ ಭಜನಾ ಸಪ್ತಾಹ ನಡೆಯಲಿದೆ ಎಂದು ಕೊಂಡ್ಲಿ ಶ್ರೀ ರಾಮ ಸಪ್ತಾಹ ಸೇವಾ ಸಮಿತಿ ಅಧ್ಯಕ್ಷ ವಕೀಲ ಬಿ.ಎಲ್.ನಾಯ್ಕ ತಿಳಿಸಿದರು.
ಏ.೧೬ರಂದು ಮುಂಜಾನೆ ಹಾಳದಕಟ್ಟಾದಿಂದ ಶ್ರೀರಾಮ ಹಾಗೂ ಪರಿವಾರ ದೇವರುಗಳ ಮೆರವಣಿಗೆ ಆರಂಭಗೊಂಡು ಕೊಂಡ್ಲಿ ಶ್ರೀ ಹನುಮಂತ ದೇವಸ್ಥಾನಕ್ಕೆ ಆಗಮಿಸಲಿದೆ. ನಂತರ ಸಪ್ತಾಹ ನಿಮಿತ್ತಗಣಪತಿ ಪೂಜೆ,ಪುಣ್ಯಾಹ,ಮಹಾಸಂಕಲ್ಪ, ಹಾಗೂ ಪರಿವಾರ ಸಹಿತ ಶ್ರೀ ರಾಮ ದೇವರ ಪ್ರತಿ ಷ್ಠಾಪನೆ ನಂತರ ಮಧ್ಯಾಹ್ನ ೧೨.೦೫ರಿಂದ ಅಖಂಡ ಭಜನಾ ಕಾರ್ಯಕ್ರಮ ಆರಂಭಗೊಳ್ಳುವದು ಎಂದರು.
ಪ್ರತಿದಿನ ಶ್ರೀ ದೇವರ ಸನ್ನಿಧಿಯಲ್ಲಿ ಕುಂಕುಮಾರ್ಚನೆ,ಮಂಗಳಾರತಿ,ಸರ್ವಸೇವಾ ಸಪ್ತಪೂಜೆ.ವಿಶೇಷ ಸಪ್ತ ಸೇವಾ ಸೇವೆ ನಡೆಯಲಿದೆ. ಏ.೨೩ರಂದು ಹನುಮಂತ ಜಯಂತಿ, ಹನುಮಂತ ದೇವರ ಅಷ್ಟಬಂದ ಕಾರ್ಯಕ್ರಮದ ೧೧ನೇ ವರ್ಷದ ವಾರ್ಷಿಕೋತ್ಸವ,ಶ್ರೀರಾಮ ತಾರಕ ಹೋಮ ಹಾಗೂ ಮಹಾಮಂಗಳಾರತಿ ನಡೆಯಲಿದ್ದು ಮಧ್ಯಾಹ್ನ ೨ ಗಂಟೆಯಿಂದ ಅನ್ನ ಸಂತರ್ಪಣೆ ಆರಂಭಗೊಳ್ಳಲಿದೆ. ರಾತ್ರಿ ೯ ಗಂಟೆಯಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಅಖಂಡ ಭಜನಾ ಸಪ್ತಾಹ:
ಕೊಂಡ್ಲಿ ಶ್ರೀ ಹನುಮಂತ ದೇವಾಲಯದಲ್ಲಿ ಅನಾದಿಯಿಂದ ಪ್ರತಿ ೭ ವರ್ಷಕ್ಕೊಮ್ಮೆ ಭಜನಾ ಸಪ್ತಾಹ ಆಯೋಜಿಸಿಕೊಂಡು ಬರುತ್ತಿದ್ದು ೭ ದಿನಗಳ ಕಾಲ ನಿರಂತರವಾಗಿ ಭಜನೆ ಮಾಡಲಾಗುತ್ತದೆ. ಈ ಬಾರಿಯೂ ಸಪ್ತಾಹ ನಡೆಯಲಿದ್ದು ಊರಿನ ೧೩ ಭಜನಾ ತಂಡಗಳು ೨ ತಾಸಿಗೆ ಒಂದು ತಂಡದಂತೆ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಸಲಿವೆ. ಕೆಲವು ಹೊರಗಿನ ತಂಡಗಳಿಗೂ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿಯೇ ಇದೊಂದು ಮಹತ್ವದ ಕಾರ್ಯ ಎಂದು ಬಿ.ಎಲ್.ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಪ್ತಾಹ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರುತಿ ಕೆ.ಕಿಂದ್ರಿ, ಮತ್ತು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಬಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ನೀಲಕಂಠ ಕಿಂದ್ರಿ. ಸಪ್ತಾಹ ಸಮಿತಿ,ಆಡಳಿತ ಕಮಿಟಿ ಪದಾಧಿಕಾರಿಗಳಾದ ಚಂದ್ರಹಾಸ ನಾಯ್ಕ,ನಾರಾಯಣ ಕೆ.ಮಡಿವಾಳ,ದೇವಪ್ಪ ಚಲುವಾದಿ,ರಾಮಕೃಷ್ಣ ನಾಯ್ಕ,ವಾಸುದೇವ ಕೊಂಡ್ಲಿ, ಸುಧೀರ ಕೊಂಡ್ಲಿ ಮುಂತಾದವರಿದ್ದರು.
ಸಿದ್ದಾಪುರ
ಪಟ್ಟಣದ ಉಮಾ ಚನ್ನಬಸಪ್ಪ ದೊಶೆಟ್ಟಿ(೬೨) ನಿಧನರಾಗಿದ್ದಾರೆ. ಅವರು ಓರ್ವ ಪುತ್ರ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಳೆದ ವಾರ ಇವರ ಪತಿ ಚನ್ನಬಸಪ್ಪ ದೊಶೆಟ್ಟಿಯವರು ನಿಧನಹೊಂದಿದ್ದರು.
