


ಅಭಿಪ್ರಾಯ ಭೇದ ಮುಗಿದ ಅಧ್ಯಾಯವಾಗಿದ್ದು ಹಿಂದಿನಂತೆಯೇ ಈಗ ಕೂಡಾ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಮಾಜಿ ಸದಸ್ಯ ಕೆ.ಜಿ. ನಾಯ್ಕ ತಮ್ಮ ಅಂತ:ಕಲಹವನ್ನು ಮುಗಿಸುವ ಸೂಚನೆ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕಳೆದ ೪೦ ವರ್ಷಗಳಿಂದ ನಾವು ಬಿ.ಜೆ.ಪಿ.ಯಲ್ಲಿ ಕೆಲಸಮಾಡುತಿದ್ದೇವೆ ನಡುವೆ ಆದ ವ್ಯತ್ಯಾಸಗಳ ಬಗ್ಗೆ ಹಿರಿಯ ನಾಯಕರ ಸಮ್ಮುಖದಲ್ಲೇ ಚರ್ಚಿಸಿ ಹೊಂದಾಣಿಕೆ ಆಗಿದೆ. ಈಗ ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡುವ ಪಕ್ಷದ ನಿರ್ಧಾರದ ಪರವಾಗಿ ನಾವೆಲ್ಲಾ ಮುಕ್ತಮನಸ್ಸಿನಿಂದ ಕೆಲಸಮಾಡುತ್ತೇವೆ. ಆದ ಅನ್ಯಾಯಗಳಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ ಎಂದರು.

ಅನಂತಕುಮಾರ ಹೆಗಡೆಯವರೂ ಸೇರಿ ಅನೇಕರು ಬಿ.ಜೆ.ಪಿ. ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ. ನಾವೆಲ್ಲಾ ಒಂದಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ಆದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದ ಅವರು ರಾಜ್ಯದ ಪ್ರಮುಖ ನಾಯಕರು ಪಕ್ಷದ ಗೆಲುವಿಗಾಗಿ ಆಗಬೇಕಾದ ಕೆಲಸಗಳನ್ನು ಮಾಡುತಿದ್ದಾರೆ. ಅದರ ಅಂಗವಾಗಿ ಇಲ್ಲಿಯ ವ್ಯತ್ಯಾಸಗಳನ್ನೂ ಸರಿಪಡಿಸಿದ್ದಾರೆ ಈಗ ನಮ್ಮ ಮುಂದಿರುವ ಗುರಿ ಪಕ್ಷ ಗೆಲ್ಲಿಸುವುದು ಎನ್ನುವ ಮೂಲಕ ಹಿಂದಿನ ತೊಂದರೆ,ವ್ಯತ್ಯಾಸಗಳಿಗೆ ಹೈಕಮಾಂಡ್ ತೇಪೆ ಹಚ್ಚಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದಂತಾಗಿದೆ.
ನಾನು ೪೦ ವರ್ಷಗಳಿಂದ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತ ಇಲ್ಲಿಯ ಶಾಸಕ,ಸಂಸದ ಕ್ಷೇತ್ರಗಳಿಗೆ ಸ್ಫರ್ಧಿಸುವ ಅರ್ಹತೆ ನನಗಿದೆ. ನನ್ನನ್ನು ಬೇರೆ ಬೇರೆ ಹಂತಗಳಲ್ಲಿ ಪರಿಗಣಿಸಲು ಪಕ್ಷದ ಮುಖಂಡರು, ನಾಯಕರು ಸಹಕರಿಸಿದ್ದಾರೆ. ನಮ್ಮ ಪಕ್ಷದಲ್ಲಿ ಭರವಸೆ ಕೊಡುವ ಪದ್ಧತಿ ಇಲ್ಲ, ಪಕ್ಷ, ಸಂಘಟನೆಯ ಪ್ರಮುಖರು ನನಗೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಈಗ ನಮ್ಮ ಗುರಿ ಪಕ್ಷದ ಗೆಲುವು…
– ಕೆ.ಜಿ.ನಾಯ್ಕ ಹಣಜಿಬೈಲ್
