


ಮುಸ್ಲಿಂ ವಿರೋಧದ ಮೂಲಕ ಚುನಾವಣೆ ಮಾಡುವ ಬಿ.ಜೆ.ಪಿ. ಎನ್ನುವ ಆರೋಪಕ್ಕೆ ಪುಷ್ಠಿ ನೀಡುವಂತೆ ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ನಾಯಕರು ಮುಸ್ಲಿಂ ವಿರೋಧದ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆಯವರ ಚುನಾವಣಾ ಭಾಷಣದ ಕಾರ್ಯಕ್ರಮಗಳು ಸಿದ್ಧಾಪುರದಲ್ಲಿ ನಡೆದವು. ಕಾವಂಚೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುಸ್ಲಿಂರು ಒಂಡೆದೆ ಸೇರಿ ಒಂದೇ ಕಡೆ ಮತಚಲಾಯಿಸುವಂತೆ ಹಿಂದೂ ಗಳೂ ಒಂದೇ ಕಡೆ ಮತ ಚಲಾಯಿಸಿದರೆ ಏನಾಗಬಹುದು ಎಂದು ಯೋಚಿಸಿ ಎಂದು ಎಚ್ಚರಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಜೆ.ಪಿ. ಇತರ ನಾಯಕರು ಮತ್ತು ಇವರಿಗೆ ಸಾಥ್ ನೀಡಿದ್ದ ಜೆ.ಡಿ.ಎಸ್. ಮುಖಂಡರು ಮುಸ್ಲಿಂ ವಿರೋಧದ ಮಾತನಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರು.
ಬಿ.ಜೆ.ಪಿ. ಪ್ರಚಾರ ಕಾರ್ಯಕ್ರಮದ ಈ ಮಾತುಗಳು ವಿವಾದ ಸೃಷ್ಟಿಸಿದ್ದು ಬಿ.ಜೆ.ಪಿ.ಯ ಹಿರಿಯ ನಾಯಕ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸಹಚರರೊಂದಿಗೆ ಸೇರಿ ಇದೇ ಮೊದಲ ಬಾರಿ ವಿವಾದಾತ್ಮಕ ಮಾತನಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
