



ಮುಸ್ಲಿಂ ರು ಒಗ್ಗಟ್ಟಾಗಿ ಒಂದೆಡೆ ಮತ ಚಲಾಯಿಸಿದಂತೆ ಹಿಂದೂಗಳೂ ಒಂದೆಡೆ ಮತದಾನ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸರ್ಕಾರದ ಫಲಾನುಭವಿಗಳು ಬಿ.ಜೆ.ಪಿ.ಗೆ ಮತಚಲಾಯಿಸಿ ಅದರಲ್ಲಿ ಜಾತಿ-ಧರ್ಮದ ಭೇದ ಬೇಡ ಎಂದಿದ್ದಾರೆ.
ಕಾವಂಚೂರಿನಲ್ಲಿ ಬಿ.ಜೆ.ಪಿ. ಚುನಾವಣಾ ಪ್ರಚಾರ ಮಾಡಿದ ಅವರು ಕಾಂಗ್ರೆಸ್ ಗ್ಯಾರಂಟಿಗಳು ಅರ್ಧಜನಸಂಖ್ಯೆಯನ್ನೂ ತಲುಪಿಲ್ಲ ಕಾಂಗ್ರೆಸ್ ಮೂಲೆಗುಂಪಾಗುವುದರಿಂದ ಮೋದಿ ಪ್ರಧಾನಿ ಮಾಡಲು ಕಮಲಕ್ಕೆ ಮತ ಚಲಾಯಿಸಿ ಮುಸ್ಲಿಂ ಬಾಹುಳ್ಯವಿರುವಲ್ಲಿ ಅವರೆಲ್ಲ ಒಂದೆಡೆ ಮತಚಲಾಯಿಸುವುದಾದರೆ ಹಿಂದೂಗಳು ಯಾಕೆ ಒಂಡೆದೆ ಮತದಾನ ಮಾಡಬಾರದು ಎಂದು ಪ್ರಶ್ನಿಸಿದ ಕಾಗೇರಿ ೫೦೦ ಸಾವಿರ ರೂಪಾಯಿಗೆ ಮತ ಮಾರಿಕೊಳ್ಳದೆ ದೇಶಕ್ಕಾಗಿ ಮತದಾನ ಮಾಡಿ ಎಂದರು.
ಜೆ.ಡಿ.ಎಸ್. ಮುಖಂಡ ಉಪೇಂದ್ರ ಪೈ ಮತ್ತು ಬಿ.ಜೆ.ಪಿ. ಮುಖಂಡ ಕೆ.ಜಿ. ನಾಯ್ಕ ಮಾತನಾಡಿ ಕಾಂಗ್ರೆಸ್ ಮುಸ್ಲಿಂರನ್ನು ಒಲೈಸುತ್ತಿದೆ ಎಂದು ಆರೋಪಿಸಿದರು. ಬಿ.ಜೆ.ಪಿ. ತಾಲೂಕಾ ಮಂಡಳದ ಮುಖಂಡ ತಿಮ್ಮಪ್ಪ ಮಡಿವಾಳ ಸ್ವಾಗತಿಸಿದರು.
