


ಕಳೆದ ಹತ್ತು ವರ್ಷಗಳಿಂದ ದೇಶದ ಜನರ ಸ್ಥಿತಿ ಭೀಕರವಾಗಿದ್ದು ಮೋದಿ ಸುಳ್ಳು ಮತ್ತು ಹಗಲುದರೋಡೆಯಿಂದ ದೇಶದ ಭವಿಷ್ಯ ಆತಂಕದಲ್ಲಿದೆ. ರಾಜ್ಯದ ಗ್ಯಾರಂಟಿಗಳ ಬಗ್ಗೆ ಜನರಿಗೆ ಸಮಾಧಾನವಿದೆ. ಆದರೆ ಮೋದಿ ಗ್ಯಾರಂಟಿ ಅಪ್ಪಟ ಸುಳ್ಳು ಮೋದಿ. ಎನ್.ಡಿ.ಎ. ಸುಳ್ಳುಗಳು ಜನರಿಗೆ ಅರ್ಥವಾಗುತ್ತಿದ್ದು ಇಂಡಿಯಾ ಒಕ್ಕೂಟ ದೇಶದ ಅಧಿಕಾರ ಹಿಡಿಯಲಿದೆ ಎಂದು ಸಿದ್ಧಾಪುರ ತಾಲೂಕಿನ ಕಾಂಗ್ರೆಸ್ ಉಸ್ತುವಾರಿ ರಾಮಾ ಮೋಗೇರ್ ತಿಳಿಸಿದ್ದಾರೆ.
ಸಿದ್ದಾಪುರದ ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಈ ದೇಶ ಕಟ್ಟಿದೆ ಬಿ.ಜೆ.ಪಿ. ಈ ದೇಶ ಮಾರುತ್ತಿದೆ. ಮಾರುವವರು ಬೇಕೋ? ಕಟ್ಟುವವರು ಬೇಕೋ ಎಂದು ಜನ ತೀರ್ಮಾನ ಮಾಡುತ್ತಾರೆ.
ಮೋದಿ, ಬಿ.ಜೆ.ಪಿ.ಗಳು ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ದೇಶದಲ್ಲಿ ಆದ ಮಹಿಳಾ ದೌರ್ಜನ್ಯ, ಮಣಿಪುರದ ಸ್ಥಿತಿ, ಉತ್ತರ ಪ್ರದೇಶದ ಅರಾಜಕತೆ ಗಳ ಬಗ್ಗೆ ಮಾತನಾಡದ ಮೋದಿ ಭೇಟಿ ಬಚಾವೋ ಭೇಟಿ ಪಡಾವೋ ಎಂದರೆ ಹೇಗೆ ನಂಬುವುದು ಎಂದು ಪ್ರಶ್ನಿಸಿದ ಅವರು ಬಿ.ಜೆ.ಪಿ.ಯವರಿಗೆ ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಕಸ್ತೂರಿ ರಂಗನ್ ವರದಿ, ಅರಣ್ಯ ಅತಿಕ್ರಮಣಗಳ ಬಗ್ಗೆ ಮಾತನಾಡದ ಕಾಗೇರಿ ಚುನಾವಣಾ ಸಮಯದಲ್ಲಿ ಒಂದು ಸಮೂದಾಯವನ್ನು ದೂಷಿಸುವುದು ಅವರಿಗೆ ಶೋಭೆ ತರುವುದಿಲ್ಲ. ರಾಜಕೀಯ ಕಾರಣಕ್ಕೆ ಮುಸ್ಲಿಂ ವಿರೋಧ, ಮಹಿಳೆಯರ ಪರ ಕಣ್ಣೀರು ಸುರಿಸುವ ಬಿ.ಜೆ.ಪಿ. ಅವರ ಹಗಲುದರೋಡೆ, ಸುಳ್ಳಿನಿಂದ ಸೋಲಲಿದ್ದು ಅವರ ಹಿಂದಿನ ಪ್ರಣಾಳಿಕೆ ನೋಡಿ,ಕೇಳಿದ ಜನರಿಗೆ ಕಾಂಗ್ರೆಸ್ ಬದ್ಧತೆ ಅರ್ಥವಾಗುತ್ತದೆ. ಜನಕಲ್ಯಾಣದ ಕಾರ್ಯಕ್ರಮಗಳಲ್ಲಿ ಜಾತಿ, ಭೇದ ನೋಡುವ ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿಯಷ್ಟೇ ಅಲ್ಲ ಬಹುಸಂಖ್ಯಾತ ಬಡವರ ವಿರೋಧಿ ಕೂಡಾ ಎಂದು ದೂರಿದರು.
