

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ.
ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪತಿ ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವವರ ಹೆಸರನ್ನು ಮುನ್ನೆಲೆಗೆ ತಂದು ಹಾಳು ಮಾಡಲು ಹೊರಟಿರುವ ಬಿಜೆಪಿ ಅಭ್ಯರ್ಥಿ ಕಾಗೇರಿ ಚುನಾವಣೆ ಗೆಲ್ಲಲು ಅತೀ ಕೆಳ ಮಟ್ಟದ ರಾಜಕಾರಣ ಮಾಡುತ್ತಿದ್ದು,ಅದು ಅವರಿಗೆ ಶೋಭೆ ತರುವುದಿಲ್ಲ, ಅವರಿಗೆ ದೈರ್ಯವಿದ್ದರೆ ಯಾವ ವೇದಿಕೆಯಲ್ಲಾದರು ಸರಿ ನಾನು ಚರ್ಚೆಗೆ ಸಿದ್ದನಿದ್ದೇನೆ, ಮುಖದಲ್ಲಿ ನಗುವಿರದ,ಮಾತನಾಡದ, ಅಭಿವೃದ್ಧಿ ಮಾಡದ ಕಾಗೇರಿ ಇಂದು ಕೀಳುಮಟ್ಟದ ರಾಜಕಾರಣಮಾಡಲು ಹೊರಟಿದ್ದಾರೆ -ಆರ್ ವಿ ದೇಶಪಾಂಡೆ.
(ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆಯ ಪ್ರಯುಕ್ತ ಹುಲೆಕಲ್ ಜಿಪಂ ಕ್ಷೇತ್ರದ ಶ್ರೀದೇವಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು)

