


ಬಿ.ಜೆ.ಪಿ. ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಪರವಾಗಿ ಸಂಸದ ಅನಂತಕುಮಾರ ಹೆಗಡೆ ಚಿತ್ರ ಮತ್ತು ಹೆಸರು ಬಳಸಿ ಬಿ.ಜೆ.ಪಿ. ಪರವಾಗಿ ಮತಕೇಳಿದ ಸಿದ್ಧಾಪುರದ ಅಣ್ಣಪ್ಪ ನಾಯ್ಕ ಕಡಕೇರಿ ವಿರುದ್ಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!
ಕಾಗೇರಿ ವಿಶ್ವೇಶ್ವರ ಹೆಗಡೆಯವರ ಪರವಾಗಿ ಸಾಮಾಜಿಕ ಜಾಲತಾಣ ಮತ್ತು ಇತರ ವೇದಿಕೆಗಳಲ್ಲಿ ಕೆಲಸ ಮಾಡುವ ಎ.ಜಿ.ನಾಯ್ಕ ಕಡಕೇರಿ ಇಂದು ಮಧ್ಯಾಹ್ನ ೨.೩೦ ರ ಸುಮಾರಿಗೆ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ ಶಕ್ತಿಗಳ ವಿರುದ್ಧ ಮತ ಚಲಾಯಿಸಿ ಮೋದಿ ಗೆಲ್ಲಿಸಿ ಎಂದು ಬರೆದುಕೊಂಡು ಆ ಪೋಸ್ಟ್ ಗೆ ಸಂಸದ ಅನಂತಕುಮಾರ ಹೆಸರು, ಚಿತ್ರ ಬಳಸಿದ್ದರು.!

ಈ ಬಗ್ಗೆ ದೂರು ನೀಡಿರುವ ಸಂಸದರ ಆಪ್ತ ಸುರೇಶ್ ಶೆಟ್ಟಿ ಸಂಸದ ಅನಂತಕುಮಾರ ಹೆಸರು-ಚಿತ್ರ ಬಳಸಿ ದುರುದ್ದೇಶದಿಂದ ಸಂಸದರ ಹೆಸರು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.!

ಈ ರೀತಿ ಮೋದಿ ಹೆಸರು ಅತಿರಂಜಿಸುವುದು, ದೇಶಪ್ರೇಮ ವೈಭವೀಕರಿಸುವುದು, ಅನ್ಯರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಮತಾಂಧ ಸಂಘಟನೆಗಳ ಮಾಮೂಲು ರೂಢಿ. ವಿಶೇಶವೆಂದರೆ ಪ್ರತಿಬಾರಿ ಇಂಥದ್ದೇ ಅವಿವೇಕಗಳಿಂದ ಗೆಲ್ಲುವ ಅವಕಾಶ ಹೆಚ್ಚಿಸಿಕೊಳ್ಳುತಿದ್ದ ಅನಂತಕುಮಾರ ಹೆಗಡೆ ಈ ಬಾರಿ ಇದೇ ಕೆಲಸ ಮಾಡಿದ ತಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆಯವರ ಹಿಂಬಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.!
ಇದರಿಂದ ಸ್ವಪಕ್ಷದ ಪ್ರಮುಖರು, ಮುಖಂಡರೇ ಬಿ.ಜೆ.ಪಿ. ಅಭ್ಯರ್ಥಿ ಕಾಗೇರಿ ವಿಶ್ವೇಶ್ವರ ಹೆಗಡೆ ವಿರುದ್ಧ ಕೆಲಸಮಾಡುತ್ತಿರುವುದಕ್ಕೆ ಸೂಕ್ತ ದಾಖಲೆ ಸಿಕ್ಕಂತಾಗಿದೆ. ಅನಂತಕುಮಾರ ಹೆಗಡೆ ಬಿ.ಜೆ.ಪಿ. ಪರವಾಗಿ ಪ್ರಚಾರ ಮಾಡದಿರುವುದು ತಮ್ಮ ಮನೆಯ ಕೂಗಳತೆಯ ದೂರದಲ್ಲಿ ಪ್ರಧಾನಿ ಮೋದಿ ಬಂದಿದ್ದರೂ ಡೋಂಟ್ ಕೇರ್ ಎಂದು ಉಪೇಕ್ಷೆ ಮಾಡಿರುವುದು ಕಾಂಗ್ರೆಸ್ ಗೆಲುವಿನ ತಟ್ಟೆಗೆ ಬಿ.ಜೆ.ಪಿ.ಗರೇ ತುಪ್ಪ-ಹೋಳಿಗೆ ಸುರಿದಂತಾಗಿದೆ.!!
