


ಮತದಾನ ಪವಿತ್ರದಾನ ಎಂದು ತಿಳಿದ ಸಿದ್ಧಾಪುರದ ಅನಾರೋಗ್ಯ ಪೀಡಿತರೊಬ್ಬರು ಋಗ್ಣವಾಹನದ ಮೇಲೆ ಬಂದು ಸ್ಟ್ರೆಚರ್ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ ಪ್ರಸಂಗ ನಡೆದಿದೆ. ಸಿದ್ಧಾಪುರ ನಗರದ ಹೊಸಪೇಟೆಯ ಮುಕುಂದ ಪೈ ಅನಾರೋಗ್ಯ ಪೀಡಿತರಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಮತದಾನ ಮಾಡಲೇಬೇಕೆಂದು ಆತ್ಮೀಯರಲ್ಲಿ ತಿಳಿಸಿದ ಮುಕುಂದರಿಗೆ ನೆರವಾದ ಸ್ಥಳೀಯರು ಮುಕುಂದರ ಆಸೆ ಪೂರೈಸಿದ್ದಾರೆ.
