ಪ್ರೀತಮ್ ಪಾಲನಕರ್ ಆತ್ಮಹತ್ಯೆಗೆ ಕಾರಣ ಮೊಬೈಲ್ ಕರೆಯೆ?
ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್ ನ ಮಾಲಿಕ ಪ್ರಕಾಶ್ ಪಾಲನಕರ್ ರ ಹಿರಿಯ ಪುತ್ರ ಪ್ರೀತಮ್ ಆತ್ಮಹತ್ಯೆಗೆ ಕಾರಣವೇನು? ಎನ್ನುವ ಚರ್ಚೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.
ಶ್ರೀಮಂತ ಕುಟುಂಬದ ೨೮ ವರ್ಷಗಳ ಹರೆಯದ ವಿವಾಹಿತ ಪ್ರೀತಮ್ ಆತ್ಮಹತ್ಯೆ ಹಿಂದೆ ಕಾಣದ ಕೈ ಇದೆಯೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಪ್ರೀತಮ್ ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಎಳೆಮಗುವಿನ ಕಿಡ್ನಿ ತೊಂದರೆಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಸಿದ್ಧತೆಯಲ್ಲಿದ್ದ ಪ್ರೀತಮ್ ಮಗುವಿನ ನಾಮಕರಣದ ಮೊದಲೇ ಈ ಸಣ್ಣ ವಿಚಾರಕ್ಕೆ ಜೀವ ತೆತ್ತನೆ? ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಆದರೆ ಅವರ ಆಪ್ತರು ಹೇಳುವುದೇ ಬೇರೆ.
ಪ್ರೀತಮ್ ಸಂಭಾವಿತ ವಿವಾಹಿತ ಯುವಕನಾಗಿದ್ದ ಆತನ ಸಂಪರ್ಕದಲ್ಲಿದ್ದ ಅನೇಕ ಸ್ನೇಹಿತರು ನಾನಾ ಕಾರಣಗಳಿಗಾಗಿ ಆತನಿಗೆ ಮೊಬೈಲ್ ಕರೆ ಮಾಡಿ ಮಾತನಾಡುತಿದ್ದರು. ಆದರೆ ಇಂದಿನ ದುರ್ಘಟನೆ ಮೊದಲು ಪ್ರೀತಮ್ ತನ್ನ ಜೀವಮಾನದ ಕೊನೆಯ ಕರೆ ಸ್ವೀಕರಿಸಿದ್ದ ಆ ಕರೆ ಆತನ ಆತ್ಮಹತ್ಯೆಗೆ ಕಾರಣವಾಗಿರಬಹುದೆ? ಎನ್ನುವ ಶಂಕೆ ಅವರ ಆಪ್ತೇಷ್ಟರಿಂದಲೇ ವ್ಯಕ್ತವಾಗಿದೆ.
ಇಂದು ಕರೆಮಾಡಿ ಪ್ರೀತಮ್ ಜೊತೆಗೆ ಮಾತನಾಡಿದ ವ್ಯಕ್ತಿ ಪ್ರೀತಮ್ ಬಳಿ ಯಾವ ವಿಷಯ ಪ್ರಸ್ತಾಪಿಸಿದ್ದ, ಮಾಧ್ಯಮ ಕ್ಷೇತ್ರದಲ್ಲಿದ್ದ ಈ ವ್ಯಕ್ತಿಯ ಕರೆಯ ನಂತರ ಪ್ರೀತಮ್ ವಿಚಲಿತನಾದನೆ? ಮಾಧ್ಯಮದ ವ್ಯಕ್ತಿ ಚರ್ಚಿಸುವ ವಿಷಯ, ವಿಚಾರ ಪ್ರೀತಮ್ ಬಳಿ ಇತ್ತೆ? ಯಾವುದೇ ವಿಚಾರವಿರಲಿ ಒಂದು ಕರೆಯ ನಂತರ ಪ್ರೀತಮ್ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದರೆ… ಆ ಪ್ರಮುಖ ವಿಚಾರ ಯಾವುದು? ಈ ಬಗ್ಗೆ ಪೊಲೀಸರು ಕೂಲಂಕುಶ ಚರ್ಚೆ ಮಾಡಿ, ಸಮರ್ಪಕ ತನಿಖೆ ನಂತರ ನಿರ್ಧಾರಕ್ಕೆ ಬರಬೇಕು.
ಎಳೆ ಮಗು, ಪತ್ನಿಯನ್ನು ಬಿಟ್ಟು ಜೀವಕೊಟ್ಟಪ್ರೀತಮ್ ಸಾವು ಎಲ್ಲರಿಗೂ ದುಖ:ದ ವಿಚಾರ, ಆದರೆ ಉತ್ತರ ಇಲ್ಲದ, ಕಾರಣ ತಿಳಿಯದ ಸಾವಿನ ಕಾರಣಕ್ಕೆ ಅಮಾಯಕರಿಗೂ ಹಿಂಸೆಯಾಗಬಾರದು ಸತ್ಯಶೋಧದ ಮೂಲಕ ಪೊಲೀಸ್ ಇಲಾಖೆ ದುಖಿ:ತ ಕುಟುಂಬಕ್ಕೂ ನ್ಯಾಯ ಒದಗಿಸಬೇಕು.