

ಸಿದ್ದಾಪುರ
ತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ ೨.೩೦ಕ್ಕೆ ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಉದ್ಘಾಟಿಸಲಿದ್ದು ಸ್ಥಳೀಯ ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಭ್ಯಾಗತರಾಗಿ ಪಾಲ್ಗೊಳ್ಳುವರು.ನಂತರ ನಡೆಯುವ ಸಾಹಿತ್ಯ ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ವಿ|ಉಮಾಕಾಂತ ಭಟ್ಟ ಕೆರೆಕೈ ವಹಿಸಲಿದ್ದು ಹಿರಿಯ ಕವಿ ಪ್ರೊ|ಧರಣೇಂದ್ರ ಕುರಕುರಿ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಡಾ|ವಿಜಯನಳಿನಿ ರಮೇಶ,ಸುಬ್ರಾಯ ಮತ್ತಿಹಳ್ಳಿ ವಿಷಯ ಮಂಡಿಸುವರು.
ನಂತರ ಪತ್ರಿಕಾ ಸಂವಾದ ಗೋಷ್ಠಿ ನಡೆಯಲಿದ್ದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಅಧ್ಯಕ್ಷತೆವಹಿಸಲಿದ್ದು ಡಾ|ಶಶಿಭೂಷಣ ಹೆಗಡೆ ಅಭ್ಯಾಗತರಾಗಿ, ಮುಖ್ಯ ವಕ್ತಾರರಾಗಿ ಗಂಗಾಧರ ಹಿರೇಗುತ್ತಿ, ಕೃಷ್ಣಮೂರ್ತಿ ಹೆಬ್ಬಾರ ಪಾಲ್ಗೊಳ್ಳುವರು. ಕಲಾಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ|ಜಿ.ಎಲ್.ಹೆಗಡೆ ವಹಿಸಲಿದ್ದು ಅಭ್ಯಾಗತರಾಗಿ ಅಶೋಕ ಹಾಸ್ಯಗಾರ,ಮುಖ್ಯ ವಕ್ತಾರರಾಗಿ ದಿವಾಕರ ಹೆಗಡೆ ಕೆರೆಹೊಂಡ, ರಮಾನಂದ ಐನಕೈ ಪಾಲ್ಗೊಳ್ಳುವರು.
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಅವರಿಗೆ ವಿದ್ವತ್ ಸಂಮಾನ ನಡೆಯಲಿದ್ದು ದೊಡ್ಮನೆ ವಿಜಯ ಹೆಗಡೆ ಸಮಾರೋಪ ಮಾತುಗಳನ್ನಾಡುವರು.ವಿ|ದತ್ತಮೂರ್ತಿ ಭಟ್ ಅಭಿನಂದನಾ ನುಡಿಗಳನ್ನಾಡುವರು.ಸಂವಾದ ಕಾರ್ಯಕ್ರಮಗಳಲ್ಲಿ ಟಿ.ಎಂ.ರಮೇಶ,ಕನ್ನೇಶ ಕೋಲಸಿರ್ಸಿ, ಎಂ.ಕೆ.ನಾಯ್ಕ, ಜಿ.ಜಿ.ಹೆಗಡೆ,ನಾಗರಾಜ ಭಟ್ ಕೆಕ್ಕಾರ,ಟಿ.ಶಂಕರಭಟ್, ಜಯರಾಮ ತಲವಾಟ, ಗಣಪತಿ ಹಿತ್ಲಕೈ,ಗಣಪತಿ ಹುಲಿಮನೆ, ಶೇಷಗಿರಿ ಭಟ್, ಜಯರಾಮ ಭಟ್ ಮುಂತಾದವರು ಪಾಲ್ಗೊಳ್ಳುವರು.
