

ಶ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ ನೋಡಿದ ಯಾರೂ ಉಪೇಂದ್ರ ಬಗ್ಗೆ ಹಗುರವಾಗಿ ಮಾತನಾಡುವಂತಿರಲಿಲ್ಲ ಯಾಕೆಂದರೆ ಹಾಗಿತ್ತು ಎ.
ನಾವೆಲ್ಲಾ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತಿದ್ದ ವೇಳೆ ಬಂದ ಸಿನೆಮಾ ಅದು. ಆ ಕಾಲದ ಹೊಸ ಅಲೆಯ ಚಿತ್ರ.
ನಿರೀಕ್ಷೆಯಂತೆ ಉಪೇಂದ್ರ ಗೆದ್ದಿದ್ದರು. ಅವರ ಪ್ಲ್ಯಾಶ್ ಬ್ಯಾಕ್ ಕತೆ, ಚುರುಕಾದ ನಿರೂಪಣೆ, ಸೊಗಸಾದ ಸಂಭಾಷಣೆ! ಪ್ರತಿ ತಿರುವಿನಲ್ಲೂ ಬರುವ ಹೊಸ ರೋಚಕತೆ, ಉಪಮೆ!
ನಾಯಕ ತನ್ನ ಸ್ನೇಹಿತನಿಗೆ ಮಾಡಿದ ಮೋಸಕ್ಕೆ ನಾಯಕಿ ಸೇಡು ತೀರಿಸಿಕೊಳ್ಳುವ ಕತೆ! ಚಾಂದನಿ ಹೀಗೇಕೆ ಮಾಡಿದಳು ಎನ್ನುವುದೇ ಕತೆಯ ರೋಚಕ ಭಾಗ. ಉಪೇಂದ್ರ ನಟ, ನಿರ್ಧೇಶಕನಾಗಿ ಒಮ್ಮೆಲೆ ಗೆದ್ದ ಚಿತ್ರ. ಈ ಚಿತ್ರ ನನ್ನ ನೆಚ್ಚಿನ ಚಿತ್ರಗಳಲ್ಲೊಂದು. ಇದೇ ನನ್ನ ನೆಚ್ಚಿನ ಸಿನಿಮಾಗಳಲ್ಲೊಂದಾಗಲು ಕಾರಣ ಅದರ ವೈಶಿಷ್ಟ್ಯ. ಹಾಡುಗಳು ತುಂಬಾ ಚೆನ್ನಾಗಿದ್ದ ಚಿತ್ರಕ್ಕೆ ಪೂರಕ ಅಂಶಗಳೆಲ್ಲಾ ಅತ್ಯುತ್ತಮ ಎನ್ನುವಂತಿದ್ದರೆ ಮಾತ್ರ ಉಪೇಂದ್ರರ ಎ ಚಿತ್ರವಾಗುತ್ತದೆ.
ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ!
ಉಪೇಂದ್ರರ ಕೆಲವು ಚಿತ್ರಗಳಲ್ಲಿ ಹೆಣ್ಣಿನ ಮೋಸ, ಸೇಡುಗಳೆಲ್ಲಾ ಉತ್ಕೃಷ್ಟವಾಗಿ ಬಳಕೆಯಾಗಿವೆ. ನಾನು ಮೆಚ್ಚಿದ ಉಪೇಂದ್ರರ ನಟನೆ, ನಿರ್ಧೇಶನಗಳ ಚಿತ್ರಗಳಲ್ಲಿ ಎ. ಓಂ, ಬುದ್ಧಿವಂತ ಗಳೆಲ್ಲಾ ಸೇರುತ್ತವೆ.
ಕನ್ನಡ ಚಿತ್ರರಂಗದಲ್ಲಿ ನಿರ್ಧೇಶಕನಾಗಿ ಉಪೇಂದ್ರ ಎ೧, (ಎ) ನಟನಾಗಿ ಕೂಡಾ ಉಪೇಂದ್ರ (ಬಿ) ಹಾಗಾಗಿ ಕನ್ನಡ ಸಿನಿಲೋಕದಲ್ಲಿ ಎ ಉಪೇಂದ್ರ, ಬಿ ಕೂಡಾ ಅವರೇ! ಉಪೇಂದ್ರ ನಿರ್ಧೇಶನದ ೨೬ ವರ್ಷಗಳ ಹಿಂದಿನ ಚಿತ್ರ ಎ ಇಂದು ರಿಲೀಜ್ ಆಗಿದೆ ಹಾಗಾಗಿ ಈ ಮೆಚ್ಚುಗೆಯ ಬರಹ.
-ಕನ್ನೇಶ್.
