


ಸಿದ್ಧಾಪುರ. ತಾಲೂಕಿನ ಕೊಡ್ಲಿ ಕೊಪ್ಪದಲ್ಲಿ ಸಿಡಿಲಿಗೆ ೭ ಜಾನುವಾರುಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ನಡೆದಿದೆ. ಮೇವಿಗಾಗಿ ಹೊಲಕ್ಕೆ ಹೋಗಿದ್ದ ರಾಸುಗಳಿಗೆ ಮಳೆಯಿಂದ ರಕ್ಷಣೆ ಪಡೆಯಲು ಪೊದೆಯೊಳಗೆ ಸೇರಿದ್ದೇ ಮಾರಕವಾಗಿ ಸಿಡಿಲಿನ ಶಾಖಕ್ಕೆ ೭ ಜಾನುವಾರುಗಳೂ ಸಾಯುವಂತಾಯಿತು.
ಇದೇ ದಿನ ಬನವಾಸಿಯಲ್ಲಿ ಸಿಡಿಲಿಗೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿ ದ್ದಾನೆ. ಈ ಘಟನೆಗೆ ಸ್ಫಂದಿಸಿದ ಉತ್ತರ ಕನ್ನಡ ಜಲ್ಲಾಡಳಿತ ತುರ್ತು ಕ್ರಮಗಳನ್ನು ಜರುಗಿಸಿದೆ.
ಕೊಪ್ಪದ ರೈತರ ಸಶಕ್ತ ಆಕಳುಗಳಲ್ಲಿ ೫ ದನಗಳು ಎರಡು ಮಣಕ ಸೇರಿವೆ. ಇಂಥ ದನಕರುಗಳು ಬಿಸಿಲು, ಮಳೆಯಿಂದ
ರಕ್ಷಣೆಗಾಗಿ ಮರದ ನೆರಳು, ಪೊದೆ ಆಶ್ರಯಿಸುತ್ತವೆ ಇದರಿಂದ ತೊಂದರೆ ಆಗುವ ಸಾಧ್ಯತೆ ಇದ್ದು ರೈತರು ಜಾನುವಾರುಗಳ ಸುರಕ್ಷತೆಗಾಗಿ ಅವುಗಳನ್ನು ಮನೆಯಲ್ಲೇ ಉಳಿಸಿಕೊಂಡರೆ ಇಂಥ ಅಪಾಯಗಳಿಂದ ಪಾರುಮಾಡಬಹುದೆಂದು ಡಾ. ವಿವೇಕಾನಂದ ಹೆಗಡೆ ತಳಿಸಿದ್ದಾರೆ.

