ಸಿದ್ಧಾಪುರ ತಾಲೂಕಿನಲ್ಲಿ ಕಳೆದ ವಾರದಿಂದ ಬಿದ್ದ ಮುಂಗಾರು ಮಳೆ ಕೆಲವು ಅನಾಹುತಗಳನ್ನು ಮಾಡಿದೆ. ಮಳೆ ಅವಾಂತರದ ಸುದ್ದಿ-ಸಾವು ನೋವುಗಳ ನಡುವೆ ಇಲ್ಲಿಯ ಕೋಲಶಿರಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣ ಗೋಡೆ ಕುಸಿತ ಹೆಚ್ಚು ಚರ್ಚೆಯಾಗಿದ್ದು ನಿರ್ಮಾಣ ಮಾಡಿ ವರ್ಷ ಒಪ್ಪೊತ್ತಿನೊಳಗೆ ಇಡೀ ಗೋಡೆ ಕುಸಿಯಲು ಕಾರಣವೇನು? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಯುವ ಘಟಕದ ಸದಸ್ಯ ಪ್ರಶಾಂತ್ ನಾಯ್ಕ ಕತ್ತಿ ಸರ್ಕಾರ, ಸಾರ್ವಜನಿಕ ಕೆಲಸಗಳು ಕಳಪೆಯಾದರೆ ಸಾರ್ವಜನಿಕರು ಸಹಿಸಿಕೊಳ್ಳುವುದಿಲ್ಲ ಕೋಲಶಿರ್ಸಿಯ ಕಾಂಪೌಂಡ್ ಗೋಡೆ ಬುಡ ಸಹಿತ ಬಿದ್ದಿರುವುದು ಕಳಪೆ ಕಾಮಗಾರಿಯ ನಿದರ್ಶನದಂತಿದೆ. ಇದಕ್ಕೆ ಆಡಳಿತ ಮಂಡಳಿಯಲ್ಲದೆ ಬೇರೆ ಯಾರನ್ನು ಹೊಣೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಅನೇಕ ಗ್ರಾಮಗಳ ಕೃಷಿಕರ ವ್ಯವಹಾರದ ತಾಣವಾಗಿರುವ ಕೋಲಶಿರ್ಸಿ ವಿ.ಎಸ್. ಎಸ್. ವ್ಯವಹಾರ, ಕೆಲವು ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದು ಆವರಣ ಗೋಡೆ ಸಂಪೂರ್ಣ ಕುಸಿದಿರುವುದು ಇಲ್ಲಿಯ ಕಳಪೆ ಕೆಸಗಳಿಗೆ ಒಂದು ಉದಾಹರಣೆ.ಇಲ್ಲಿಯ ಆಡಳಿತ ವ್ಯವಸ್ಥೆ, ಕರ್ಚು-ವೆಚ್ಚ ನಿರ್ವಹಣೆ, ಆಡಳಿತ ಜವಾಬ್ಧಾರಿಗಳ ಬಗ್ಗೆ ಕೇಳುವ, ಮಾಹಿತಿ ಪಡೆಯುವ ಹಕ್ಕು ಸಾರ್ವಜಿನಿಕರಿಗಿದೆ. ನಿರ್ಮಾಣವಾಗಿ ಒಂದು ವರ್ಷದೊಳಗೆ ಬುಡಸಹಿತ ಬಿದ್ದಿರುವ ಗೋಡೆ ಇಲ್ಲಿಯ ನಿರ್ಮಾಣ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾಕ್ಷಿ ನೀಡಿದಂತಿದೆ. ಈ ಆವರಣ ಗೋಡೆ ಜೊತೆಗೆ ಇಲ್ಲಿ ನಡೆದ ಕಟ್ಟಡ ನಿರ್ಮಾಣ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆ ನಡೆಯಬೇಕಿದ್ದು ಸಹಕಾರಿ ಇಲಾಖೆ ಇಲ್ಲಿಯ ವಿದ್ಯಮಾನಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳದಿದ್ದರೆ ಮುಂದಿನ ತೊಂದರೆಗಳಿಗೆ ಇಲಾಖೆ ಉತ್ತರದಾಯಿಯಾಗಬೇಕು ಎಂದು ಪ್ರಶಾಂತ ಸಂಘಡಿಗರು ಆಗ್ರಹಿಸಿದ್ದಾರೆ.