


ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮೂಲಕ ಬಹಿರಂಗಮಾಡುವುದರಿಂದ ಗೊಂದಲಗಳೇರ್ಪಡುತಿದ್ದು ಈ ಬೆಳವಣಿಗೆ ನಿಲ್ಲದಿದ್ದರೆ ಅಂತಹವರ ಮೇಲೆ ಪಕ್ಷದ ಶಿಸ್ತಿನ ಕ್ರಮ ಜರುಗಲಿದೆ ಎಂದು ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ಹಿರಿಯ ಉಪಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಎಚ್ಚರಿಸಿದ್ದಾರೆ.
ಸಿದ್ಧಾಪುರದ ಪಕ್ಷದ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು ಕೆಲವರು, ಕೆಲವು ವಿಚಾರಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸುವುದರಿಂದ ಗೊಂದಲ ಉಂಟಾಗಿದೆ. ಈ ಪ್ರವೃತ್ತಿ ನಿಲ್ಲದಿದ್ದರೆ ಶಿಸ್ತಿನ ಕ್ರಮ ಅನಿವಾರ್ಯ ಎಂದರು.
ಶಾಸಕ ಭೀಮಣ್ಣ ನಾಯ್ಕ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ೨೦೦ ಕೋಟಿ ಅನುದಾನ ತಂದಿದ್ದಾರೆ. ಅವರ ವಿರುದ್ಧ ಮಾತನಾಡುವ ವಿಪಕ್ಷ ನಾಯಕರಿಗೆ ಅವರ ವಿರುದ್ಧ ಅಸೂಯೆ, ಮತ್ಸರ ಅಂಥ ಟೀಕೆ, ಹೇಳಿಕೆಗಳಿಗೆ ಶಾಸಕರ ಕೆಲಸವೇ ಉತ್ತರ ಕೊಡಲಿದೆ ಎಂದರು.
