೫೦೦ ರೂಪಾಯಿ ಪತ್ರಕರ್ತರ ಬಗ್ಗೆ….!

ನಾನೊಬ್ಬ ಈ ಕಾಲದಲ್ಲಿ ಬದುಕಿರದಿದ್ದರೆ…..ಬ್ರಷ್ಟರು,ದುಷ್ಟರು ಇನ್ನಷ್ಟು ಊಳಿಡುತಿದ್ದರು. ಸಭ್ಯತೆ, ನೇರತನ, ಸಾಚಾತನ ಇಲ್ಲದವರು ಇನ್ನಷ್ಟು ಎದೆಸೆಟೆದುಕೊಂಡು ತಿರುಗಾಡುತಿದ್ದರು, ಅಂಥವರ ಅಂತರಂಗ ಸಿಗ್ಗಿನಿಂದ ಮುದುಡಲಾದರೂ ನನ್ನಂಥವನಿದ್ದುದು ಸಾರ್ಥಕ ಎಂಬರ್ಥದಲ್ಲಿ ಎಲ್ಲೋ ಬ್ರೆಕ್ಟ್‌ ಬರೆಯುತ್ತಾರೆ.

ಇದು ಬ್ರೆಕ್ಟ್‌, ನೀಷೆ, ಫೈಜ್‌ ಅಹಮ್ಮದ್‌, ಬುದ್ಧ, ಬಸವಣ್ಣನ ಕಾಲವಲ್ಲ ಆದರೆ.. ಇಲ್ಲೇ ಡಾ. ಅಂಬೇಡ್ಕರ್‌ ಹೋರಾಡಿದ್ದು, ಕುವೆಂಪು ಬಡಿದಾಡಿದ್ದು, ಗೋಪಾಲಗೌಡ, ಎಚ್.‌ ಗಣಪತಿಯಪ್ಪ, ಧಾರೇಶ್ವರ ವಕೀಲರು, ವಿಡಂಬಾರಿ ಆಗಿಹೋಗಿದ್ದು.

ವಿಷಯಕ್ಕೆ ಬರೋಣ…. ಟೀ ಕುಡಿಯಲೆಂದು ಪೈ ಅಂಕಲ್‌ ಗಳ ಹೋಟೆಲ್‌ ಗೆ ಹೋಗಿದ್ದೆ, ನಾನು ಬಲುಅಪರೂಪಕ್ಕೆ ಧರಿಸುವ ಪ್ರೆಸ್‌ ಟೀಶರ್ಟ್‌ ತೊಟ್ಟಿದ್ದರಿಂದಲೇ ಅಪರಿಚಿತನೊಬ್ಬ ನೀವು ಮಾಧ್ಯಮದವರಲ್ಲ ಎಂದ. ಹೌದು, ಅವತ್ತು ನಾನ್‌ ಹೇಳಿದ್ದು ಟಿ.ವಿ.ಯಲ್ಲೇ ಬರಲೇ ಇಲ್ಲ, ಸರಿಹಾಕ್ರಿ ಮಾರ್ರೆ ಅಂದ.

ನಾನು ಹೌಹಾರುವವನಿದ್ದೆ ಯಾಕೆಂದರೆ, ನಾನು ಟಿವಿಗಳಲ್ಲಿ ಠೀವಿಯಲ್ಲಿದ್ದ ಕಾಲದಿಂದ ಈ ವರೆಗೆ ನಮ್ಮದು ಪಾರದರ್ಶಕ ಬದುಕು. ಕಂಡದ್ದು ಕಂಡಂತೆ.. ಕಾಣದ್ದು ಅದರಷ್ಟೇ ಸ್ವಲ್ಪ ಹೌಹಾರಿದಂತಾದೆ. ಈ ಮುಖವನ್ನು ನಾನೆಂದೂ ಕಂಡಿದ್ದಿಲ್ಲ, ನನ್ನೊಂದಿಗೆ ಆತ ಮಾತನಾಡಿದ್ದರೆ… ಅಥವಾ ನಮ್ಮ ಮಾಧ್ಯಮಗಳಿಗೆ ಆತ ಪ್ರತಿಕ್ರೀಯಿಸಿದ್ದರೆ ನಮ್ಮಮೂರ್ನಾಲ್ಕು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತಿದ್ದ…. ( samajamukhi news portal, samaajamukhi fb page, samaajamukhi & samajamukhinews youtube channels)

ಯಾರಿಗೋ? ಯಾವುದೋ ಪಾಪಕ್ಕೆ ನಾನ್ಯಾಕೆ ಮರುಗಬೇಕು ಎಂದು ಆ ವಿಚಾರ ಬಿಟ್ಟೆ ಬಟ್‌ ಆ ಸಂಗತಿ ನನ್ನನ್ನು ಬಿಡಲಿಲ್ಲ.

ಯಾರೋ ನಮ್ಮ ಥರದವರೇ ಈತನ ಮೂತಿಗೆ ಮೈಕ್‌ ಹಿಡಿದು ಪ್ರತಿಕ್ರೀಯೆ ಕೇಳಿರಬೇಕು. ಪಾಪ ಆತ ಗಲಿಬಿಲಿಯಾಗಿ ನನಗೆ ತಗಲ್ಹಾಕಿಕೊಂಡನೋ? ಎಂದು ಯೋಚಿಸತೊಡಗಿದೆ.

ಕೆಲವು ಅನಿವಾರ್ಯತೆ, ಖಯ್ಯಾಲಿ, ಅವಿವೇಕಗಳು ಹೇಗಿರುತ್ತವೆಂದರೆ…. ಮಾಧ್ಯಮವೆಂದರೆ ಏನೋ ಎಂದುಕೊಂಡವರು ಯಾರ್ಯಾರನ್ನೋ ಯಾವುದೋ ವಿಷಯಕ್ಕೆ ಲಗತ್ತಿಸಿ ಸುದ್ದಿ ಮಾಡಿಬಿಡುತ್ತವೆ. ಆ ಸುದ್ದಿ ಅರಿತವರ ನಡುವೆ ಗೇಲಿ, ಲೇವಡಿಗಳಿಗೆ ಒಳಗಾಗಿಬಿಡುತ್ತವೆ. ಇಂಥ ಕೆಲವು ಅಸಭ್ಯ ವಿಚಾರಗಳು ನಮ್ಮ ಎದುರೇ ನಡೆದುಹೋಗುತ್ತಿರುವುದರಿಂದ ಜನಸಾಮಾನ್ಯರು, ಶ್ರೀಸಾಮಾನ್ಯರಿಗೂ ಗೊಂದಲಗಳಾಗುವ ಸಾಧ್ಯತೆಗಳಿರುತ್ತವಲ್ವೆ?

ಈ ಬಗ್ಗೆ ಯೋಚಿಸುವಂತಾಗುವ ಮೊದಲೇ ನನ್ನ ಪರಿಚಿತ ಅಧಿಕಾರಿಯೊಬ್ಬರು ಅವರ ಕಚೇರಿಗೆ ಪತ್ರಕರ್ತರೆಂದುಕೊಂಡು ಯಾವುದೋ ಪತ್ರಿಕೆ ಹಿಡಿದು ಬಂದಿದ್ದ ಮೂವರು ನೇರವಾಗಿ ಹಣ ಕೇಳಿದ ಬಗ್ಗೆ ನನಗೆ ತಿಳಿಸಿದ್ದರು.

ʼನೀವು ಅವರನ್ನು ನಿಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ನಮಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದ್ದರೆ ವಾಸ್ತವ ಏನು ಎನ್ನುವುದು ಗೊತ್ತಾಗುತಿತ್ತು ಎಂದು ಹೇಳುತ್ತಲೇ ಇಲ್ಲ ಅವರು ಹೆಚ್ಚು ಅವಕಾಶವನ್ನೂ ಕೊಡಲಿಲ್ಲ ದೇಣಿಗೆ ಕೇಳುವವರಂತೆ ಬೇಡಿಕೆ ಸಲ್ಲಿಸಿ ಹೊರಟು ಹೋದರು ಎಂದು ಹೇಳಿದ ಆ ಅಧಿಕಾರಿ ಅವರು ಮುಂಡಗೋಡೋ? ಹಾನಗಲ್‌ ಕಡೆಯವರೋ ಇರಬಹುದಾದ ಸತ್ಯ ವನ್ನು ತಿಳಿಸಿದರು!.

ಹೀಗೆ ಕೆಲವು ಮಾಧ್ಯಮಗಳ ಜನರು, ಕೆಲವು ಅಸಹಾಯಕರು ಮಾಧ್ಯಮಗಳ ಹೆಸರಿನಲ್ಲಿ ಜೀವನೋಪಾಯ ಹುಡುಕುತ್ತಿರುತ್ತಾರೆ. ಅಂಥವರನ್ನು ಮಾಧ್ಯಮದವರೆಂದುಕೊಳ್ಳುವ ಅಧಿಕಾರಿಗಳು, ಕೆಲವು ಬುದ್ಧಿವಂತ ಜನಸಾಮಾನ್ಯ, ಶ್ರೀಸಾಮಾನ್ಯರೂ ಇರುತ್ತಾರೆ!.

ಈ ವಿಷಯ ನಾವಿರುವ ಪ್ರದೇಶಕ್ಕೆ ಹೊಸತಲ್ಲ. ನಿತ್ಯ ವರದಿ ಮಾಡುತ್ತಾ ಮಾಧ್ಯಮದ ಕೆಲಸ ಮಾಡುವ ನಮಗೆ ಇಲ್ಲಿಯ ಅಧಿಕಾರಿ, ಸಿಬ್ಬಂದಿಗಳ ಪರಿಚಯ ಇರುವುದೂ ವಿರಳ, ಆದರೆ ಮಾಧ್ಯಮದ ಸೋಗಿನಲ್ಲಿರುವವರು, ೫೦೦ ರೂಪಾಯಿ ಪತ್ರಕರ್ತರು ಕೆಲವೊಮ್ಮ ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯ ಎಂದು ಬಿಂಬಿಸುತ್ತಲೂ ಇರುತ್ತಾರೆ. ಯಾಕೆಂದರೆ ಇದು ಬುದ್ಧ, ಬಸವಣ್ಣ, ಲಂಕೇಶ್‌, ಅಂಬೇಡ್ಕರ್‌, ಕುವೆಂಪು ನೆಲವಾದರೂ ಅವರ್ಯಾರೂ ಈಗಿಲ್ಲ, ಅವರ ಬಗ್ಗೆ ಅರಿತವರೂ ಈಗ ವಿರಳ. ವಿಚಿತ್ರವೆಂದರೆ ಈಗಲೂ ಜಾತಿ, ಸಂಬಂಧ, ಸಂಪರ್ಕಗಳ ಕಾರಣಕ್ಕೆ ಪತ್ರಕರ್ತರೆಂದು ಗುರುತಿನ ಚೀಟಿ ಹಿಡಿದುಕೊಂಡವರೂ ಇದ್ದಾರೆ. ಈ ವಿದ್ಯಮಾನಗಳ ಮಧ್ಯೆ ನಮಗೆ ಕೆಲವು ಬಾರಿ ಅನಿಸುವುದು ಹೀಗೂ ಉಂಟೆ….?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *