ಹೊರ ಊರಿನಿಂದ ಬಂದ ಪ್ರವಾಸಿಗರ ತಂಡ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಿ, ಅಪಘಾತ ಮತ್ತು ಹಲ್ಲೆ ಮಾಡಿದ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ ೩೧ರ ಶುಕ್ರವಾರ ಸಾಯಂಕಾಲ ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ಕಾರು ಚಲಾಯಿಸಿಕೊಂಡು ಬರುತಿದ್ದ ನೇರಲಮನೆ ನಾಗರಾಜ್ ನಾಯ್ಕ ಕೋಲಶಿರ್ಸಿಯವರ ಕಾರಿಗೆ ಅಪಘಾತಮಾಡಿದ್ದಲ್ಲದೆ ಅವಾಚ್ಛವಾಗಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಕೆಲವು
ಪ್ರವಾಸಿಗರ ಮೇಲೆ ಕಾಳೇನಳ್ಳಿಯ ರಾಜಶೇಖರ್ ಗಣಪತಿ ನಾಯ್ಕ ದೂರು ನೀಡಿದ್ದಾರೆ.
ಪುನೀತ್ ನಾಯ್ಕ ನಿಡಗೋಡು ಮತ್ತು ಶೇಖರ್ ನಾಯ್ಕ ೧೬ ನೇ ಮೈಲುಕಲ್ಲು ಬಾಧಿತರಾಗಿದ್ದುಬೊಲೇರೋ ವಾಹನ ಕೆ.ಎ.೦೧,ಎಂ.ಟಿ.೨೬೩೭ ನ ಇಬ್ಬರು ಹಾಗೂ ಕಿಯಾಕೆ.ಎ.೫೧, ಎಂಟಿ ೨೧೫೨ಕಾರಿನ ೧೨ ಜನರು ಸೇರಿ ಕೋಲಶಿರ್ಸಿ ನಾಗರಾಜ್ ನಾಯ್ಕರ ಕಾರಿಗೆ ಹಾನಿ ಮಾಡಿದ್ದಲ್ಲದೆ ಸ್ಥಳೀಯರಿಗೆ ಹೊಡೆದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ.
ಆರೋಪಿಗಳು ಪ್ರವಾಸಕ್ಕೆ ಬಂದ ಬೆಂಗಳೂರಿನ ಮೂಲದ ವ್ಯಕ್ತಿಗಳಾಗಿದ್ದು ಅವರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.