

ಈ ಕ್ಷಣಕ್ಕೆ ೧೧ ಮುಂಜಾನೆ ಏಳು ಸುತ್ತಿನ ಮತ ಎಣಿಕೆ ನಂತರ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಮುನ್ನಡೆ ಸಂಖ್ಯೆ ೨೯೦ ಕ್ಕೆ ಇಳಿದಿದ್ದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ೨೨೫ ದಾಟಿ ೨೩೫ ಕ್ಕೇರಿದೆ.
ಮತದಾನೋತ್ತರ ಸಮೀಕ್ಷೆಗಳು ಎನ್.ಡಿ.ಎ. ಒಕ್ಕೂಟ ೩೫೦ ಸಂಖ್ಯೆಗಳನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿದ್ದವು. ಇಂದಿನ ಅರ್ಧ ಮತ ಎಣಿಕೆ ನಂತರ ಮುಖ್ಯವಾಹಿನಿ ಮಾಧ್ಯಮಗಳ ಬೂಟಾಟಿಕೆ ಬೆತ್ತಲಾಗಿದ್ದು ಮೋದಿ ನೇತೃತ್ವದ ಮತಾಂಧ ಶಕ್ತಿಗಳು ಮಾಧ್ಯಮಗಳನ್ನು ಖರೀದಿಸಿರುವುದಕ್ಕೆ ಸಾಕ್ಷಿ ದೊರೆತಿದೆ. ನೂರೈವತ್ತು ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಈ ಬಾರಿ ಕೂಡಾ ಹಿನ್ನಡೆ ಅನುಭವಿಸುತ್ತದೆ ಎಂದು ಚುನಾವಣೆ ನಂತರ ಹೇಳಿದ್ದರೆ ಇದೇ ಮುಖ್ಯವಾಹಿನಿ ಮಾಧ್ಯಮಗಳು ಚುನಾವಣೆ ಮೊದಲು ಎನ್.ಡಿ.ಎ. ೪೦೦ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದರು.
ಕರ್ನಾಟಕದಲ್ಲಿ ಉತ್ತರ ಕನ್ನಡ ಕ್ಷೇತ್ರದ ವಿಶ್ವೇಶ್ವರ ಹೆಗಡೆ (ಬಿ.ಜೆ.ಪಿ.) ಒಂದು ಲಕ್ಷ ಮತಗಳ ಭಾರಿ ಅಂತರ ಕಾಪಾಡಿಕೊಂಡರೆ, ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (ಜೆ.ಡಿ.ಎಸ್.) ಒಂದು ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಮುಂದಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿ ವಿರೋಧಿಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ದಲ್ಲಿ ಕಾಂಗ್ರೆಸ್ ಒಡಕು, ಜನಪ್ರತಿನಿಧಿಗಳ ದನದಾಹ, ಕಾಂಗ್ರೆಸ್ ಒಳಗಿನ ಮೃಧು ಹಿಂದುತ್ವವಾದಿ ನಮಕ್ ಹರಾಮ್ ಮುಖಂಡರಿಂದಾಗಿ ಮತಾಂಧ ಪಕ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ಹೊಸ್ತಿಲಿನತ್ತ ಸಾಗಿದ್ದಾರೆ.
ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕುಟುಂಬ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಂತಹಂತವಾಗಿ ಅನುಮಾನಿಸಿದ್ದು ಕೂಡಾ ಈ ಫಲಿತಾಂಶಕ್ಕೆ ಕಾರಣ ಎನ್ನಲಾಗಿದೆ.
