ದೇಶದ ಚುನಾವಣೆ ಮತಾಂಧರು, ಅಹಂಕಾರಿಗಳ ನೆತ್ತಿಯ ಮೇಲೆ ಗುದ್ದು ಕೊಟ್ಟಿದೆ. ಹಮ್ ದೋನೋ ಹಮಾರೆ ದೋನೋ ಎನ್ನುತ್ತಾ ದೇಶಪ್ರೇಮದ ಸೋಗಿನಲ್ಲಿ ದುರಾಚಾರ ನಡೆಸುತಿದ್ದ ಮೋದಿ-ಶಾ ಎಂಬ ಅಂತರಾಷ್ಟ್ರೀಯ ಮತಾಂಧ ದುಷ್ಟರ ಧ್ವನಿಯನ್ನೇ ಕಸಿದ ೨೦೨೪ ರ ಚುನಾವಣೆ ಉತ್ತರ ಪ್ರದೇಶದಲ್ಲಿ ರಾಮನ ಹೆಸರಿನಲ್ಲಿ ರಾಜಕೀಯ ವ್ಯಭಿಚಾರ ಮಾಡಿದ ಸಂಘಿ ಶನಿಗಳನ್ನು ಗೊ ಬ್ಯಾಕ್ ಎಂದು ತಿರಸ್ಕರಿಸಿದೆ.
ರಾಜ್ಯದಲ್ಲಿ ಬಿ.ಜೆ.ಪಿ. ೧೯ ಸ್ಥಾನಗಳನ್ನು ಗಳಿಸಿದಿದೆಯಾದರೂ ಅದು ಕಳೆದುಕೊಂಡಿದ್ದು ೮ ಸ್ಥಾನಗಳನ್ನು! ಹಾಗೆಯೇ ರಾಜ್ಯದಿಂದ ಕರಾವಳಿಗೆ ಬಂದರೆ ಇಲ್ಲಿ ಕೂಡಾ ಬಿ.ಜೆ.ಪಿ.ಯ ಮತಗಳಿಕೆ ಪ್ರಮಾಣ ತಗ್ಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಸೋಲಿಗೆ ಕಾರಣ ಕಾಂಗ್ರೆಸ್ ಶಾಸಕರು ಎನ್ನುವ ವಿಷಯ ಈಗ ಗಲ್ಲಿ ಗಲ್ಲಿ ಗಳಲ್ಲಿ ಚರ್ಚೆಯಾಗುತ್ತಿದೆ.
ಎಲ್ಲಕ್ಕಿಂತ ಮೊದಲು ಡಾ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಕಾರಣ ರಾಜ್ಯದ ಸಾಕ್ಷರತಾ ಸಚಿವ ಮಧು ಬಂಗಾರಪ್ಪ. ಉತ್ತರ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟಿಸುತಿದ್ದ ಮಧು ಬಂಗಾರಪ್ಪ ತನ್ನ ಪ್ರಭಾವದಿಂದ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ತನ್ನ ಅಕ್ಕ ಗೀತಾ ಶಿವರಾಜ್ ಕುಮಾರ್ ರಿಗೆ ಬುಕ್ ಮಾಡಿಕೊಂಡರು. ಶಿವಮೊಗ್ಗದಲ್ಲಿ ಈಡಿಗರ ಕೋಟಾದ ದೀವರಿಗೆ ಟಿಕೇಟ್ ಫಿಕ್ಸಾಗುತಿದ್ದಂತೆ ಉತ್ತರ ಕನ್ನಡದಲ್ಲಿ ದೀವರ ಅವಕಾಶ ಕಳೆದುಹೋಯಿತು!
ಈ ಜಾತಿ ರಾಜಕಾರಣದ ಲೆಕ್ಕಾಚಾರದಲ್ಲಿ ಉತ್ತರ ಕನ್ನಡದ ಅವಕಾಶ ಕಳೆದುಕೊಂಡ ದೀವರಿಗೆ ಡಾ. ಅಂಜಲಿ ನಿಂಬಾಳ್ಕರ್ ಒಪ್ಪಿಗೆಯೋ? ವಿರೋಧವೋ ಒಟ್ಟೂ ತಮ್ಮ ಸಾಂಪ್ರದಾಯಿಕ ರಾಜಕೀಯ ವಿರೋಧಿಗಳಾದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಸೋಲಬೇಕಿತ್ತು. ಆದರೆ, ಮತದಾರರ ಬಳಿ ಸುಳ್ಳ ಮೋದಿ ಬೇಡ ಇಲ್ಲಿಯ ನಿಷ್ಪ್ರಯೋಜಕ ಹೆಗಡೆಗಳು ಬೇಡ ಎಂದು ಪ್ರಚಾರಕ್ಕೆ ಹೋದರೆ ಡಾ. ಅಂಜಲಿ,ಕಾಂಗ್ರೆಸ್ ಯಾಕೆ ಬೇಕು ಎನ್ನುವ ಉತ್ತರವೇ ಬರುತ್ತಿರಲಿಲ್ಲ.!
ಅನಕ್ಷರಸ್ಥ, ಜನದ್ರೋಹಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಬೇಕು, ಡಾ. ಅಂಜಲಿ ಬೇಕು. ಕಪಟ ಮೋದಿ, ಮತಾಂಧ ಬಿ.ಜೆ.ಪಿ. ಬೇಡ ಎನ್ನುವ ವಿವೇಕದ ಶಿಕ್ಷಣವೇ ಇರಲಿಲ್ಲ. ಇದರಿಂದಾಗಿ ಕಾಮ್ ಚೋರ್ ಬಿ.ಜೆ.ಪಿ. ಅಸಮರ್ಥ ಅಭ್ಯರ್ಥಿ ಎದುರು ಡಾ. ಅಂಜಲಿ ಸೋತರು.
ಹೀಗೆ ಕಾಂಗ್ರೆಸ್ ಸೋಲು ಜನವಿರೋಧಿ ಸಂಘಿ ಬಿ.ಜೆ.ಪಿ. ಗೆಲುವಿಗೆ ನೂರಾ ಒಂದು ಕಾರಣಗಳಿವೆ! ಆದರೆ ಈ ಭಾಗದಲ್ಲಿ ಕಾರವಾರದಲ್ಲಿ ಕಾಂಗ್ರೆಸ್ ತಿರಸ್ಕ್ರತವಾಗಲು ಕಾರಣ ಅಲ್ಲಿಯ ಶಾಸಕ ಸತೀಶ್ ಶೈಲ್ ಎನ್ನುವ ಸತ್ಯವನ್ನು ಇಡೀ ಜಿಲ್ಲೆ ಚರ್ಚಿಸುತ್ತಿದೆ.
ಕಾಂಗ್ರೆಸ್ ಸಂಸ್ಕೃತಿ, ಸಂಸ್ಕಾರಗಳಿಲ್ಲದ ಸತೀಶ್ ಶೈಲ್ ತನ್ನ ಪೂರ್ವಾಶ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಪುಡಾರಿ!. ಅವರ ಚರಿತ್ರೆ ಭಯಾನಕ ಎನ್ನುವ ವಿಷಯ ಬೇರೆ.
ಅಶೋಕ್ ಸಿಂಘಾಲ್ ರನ್ನು ಒಮ್ಮೆ ಮನೆಗೆ ಕರಸಿಕೊಂಡಿದ್ದ ಸತೀಶ್ ಶೈಲ್ ದುರಂಹಕಾರಿ. ಆಯಾ ಹೆಗಡೆ, ಗಯಾ ಹೆಗಡೆಗಳ ಚೆಡ್ಡಿ ದೋಸ್ತ್ ಆಗಿದ್ದ ಈ ಕೊಂಕಣೆ ಮರಾಠನಿಗೆ ಹೆಗಡೆಗಳು ಟಿಕೇಟ್ ಕೊಡಿಸಲಿಲ್ಲ! ರಾಜಕೀಯ ವಿದ್ಯಮಾನಗಳ ವೇಗದಲ್ಲಿ ಹಣದಿಂದ ಓಡಿದ ಸತೀಶ್ ಶೈಲ್ ಒಮ್ಮೆ ಕಾಂಗ್ರೆಸ್ ಟಿಕೇಟ್ ಖರೀದಿಸಿದ್ದ ಭೂಪ! ನಂತರ ಬದಲಾದ ಪರಿಸ್ಥಿತಿಯಲ್ಲಿ ಕಾಮ್ ಚೋರ್ ಹರಾಮ್ ಕೋರ್ ಹೆಗಡೆಗಳ ಅನೈತಿಕ ದೋಸ್ತಿಯಿಂದ ಸ್ವತಂತ್ರವಾಗಿ ಗೆದ್ದಿದ್ದ ಶೈಲ್ ಮತಾಂಧ ಅಹಂಕಾರಿಯಾಗಿ ಬದಲಾದ.
ಈ ಹಳೆ ಹಾದರದ ಇತಿಹಾಸದ ಶೈಲ್ ಹಿಂದೆ ಅನಂತಕುಮಾರ ಹೆಗಡೆಗೂ ಪರೋಕ್ಷವಾಗಿ ಸಹಕರಿಸುತಿದ್ದ ಗುರುತರ ಆರೋಪವಿದೆ! ಈ ಬಾರಿ ಬಿ.ಜೆ.ಪಿ. ಹೆಗಡೆಗೆ ನೆರವಾದ ಸತೀಶ್ ಶೈಲ್ ಕಾರವಾರ ಕ್ಷೇತ್ರದಲ್ಲಿ ಪ್ರಚಾರವನ್ನೇ ಮಾಡಿಲ್ಲ. ತನ್ನ ಕಡುವೈರಿ ರೂಪಾಲಿ ನಾಯ್ಕ ಅನಂತಕುಮಾರ ಬಣದಲ್ಲಿದ್ದಾಗ ವಿಶ್ವೇಶ್ವರ ಹೆಗಡೆ ಜೊತೆ ಸ್ನೇಹದಿಂದಿದ್ದ ಸತೀಶ್ ಶೈಲ್ ವಿಶ್ವೇಶ್ವರ ಹೆಗಡೆ ದೋಸ್ತಿ ಬಳಸಿ ರೂಪಾಲಿಗೆ ವಿರೋಧಿಸಲು ಹೋಗಿ ಕಾಂಗ್ರೆಸ್ ಗೂ ದ್ರೋಹ ಬಗೆದುಬಿಟ್ಟ.
ಮೂಲತ: ಕಾಂಗ್ರೆಸ್ಸಿಗಳಾದ ರೂಪಾಲಿ ನಾಯ್ಕ ಈ ಹೆಗಡೆಗಳು, ಶೈಲ್ ರೀತಿ ಅಹಿಂದ್ ವಿರೋಧಿ ಮತಾಂಧೆಯಲ್ಲ.ಬಿ.ಜೆ.ಪಿಯಲ್ಲಿ ಕೂಡಾ ರಾಷ್ಟ್ರೀಯ ಸುಳ್ಳುಕೋರರ ಬಣ ಸೇರದ ರೂಪಾಲಿ ಹಿಡಿದ ಕೆಲಸ ಪಟ್ಟು ಹಿಡಿದು ಮಾಡುವ ಗಂಡಸ್ಥನದ ಹೆಣ್ಣು! ಈ ಭೂಮಿತೂಕದ ಹೆಣ್ಣಿನೆದುರು ಸೋತಿದ್ದ ನವಟಂಕಿ ಸತೀಶ್ ಶೈಲ್ ರೂಪಾಲಿ ನಾಯ್ಕ ವಿರೋಧಿಸುತ್ತಲೇ ಸಂಘಿ ಕಳ್ಳರ ರಾತ್ರಿ ದೋಸ್ತಿಯ ಪರಿಣಾಮ ಪಕ್ಷಕ್ಕೂ ದ್ರೋಹ ಮಾಡಿದರು, ಹಾಗಾಗಿ ಕಾರವಾರ ಕ್ಷೇತ್ರದಲ್ಲಿ ಬಿ.ಜೆ.ಪಿ. ಗೆ ಲೀಡ್ ದೊರೆಯಿತು.
ತಾನೊಬ್ಬ ಅಸಮರ್ಥ ಎನ್ನುವುದನ್ನು ಒಪ್ಪಿಕೊಳ್ಳತ್ತಲೇ ಮೋದಿ ಗೆ ಓಟು ಕೊಡಿ ಎಂದು ಕೇಳಿದ ಹೆಗಡೆ ಕಾಂಗ್ರೆಸ್ ನ ನಮಕ್ ಹರಾಮ್ ಮೃಧು ಹಿಂದುತ್ವವಾದಿಗಳನ್ನು ಬಳಸಿಕೊಂಡು ಸಂಸತ್ ಪ್ರವೇಶಿಸಲು ನಾಚಿಕೊಂಡಿಲ್ಲ. ಡಾ. ಅಂಜಲಿ ನಿಂಬಾಳಕರ್ ಕಳ್ಳ ಶೈಲ್ ನಿಗೆ ರಣದೀಪ್ ಸುರ್ಜೆವಾಲಾರಿಂದ ಉಗಿಸುವ ಬದಲು ರಾಜಕೀಯ ಸೋಗಿನ ಹಿಂದುತ್ವವಾದಿ ನಯವಂಚಕರೊಂದಿಗಿನ ಅನೈತಿಕ ದೋಸ್ತಿಯನ್ನು ಕತ್ತರಿಸಿದ್ದರೆ ಗೆಲ್ಲುತಿದ್ದರೇನೋ? ಸತೀಶ್ ಶೈಲ್ ನಂಥ ಕಳ್ಳ ಸಂಘಿ ಕಾಂಗ್ರೆಸ್ಸಿಗರು, ವಿದ್ಯೆ, ವಿನಯ, ಸಂಸ್ಕಾರ, ರಾಜಕೀಯದ ಎ.ಬಿ.ಸಿ.ಡಿ. ಅರಿಯದ ಕಾಂಗ್ರೆಸ್ನ ಕ್ವಾಟರ್-ಬಿರಿಯಾನಿ ಕಾರ್ಯಕರ್ತರಿಂದಾಗಿ ಕಾಂಗ್ರೆಸ್ ಗೆ ಸೋಲಾಗಿದೆ. ಮೃಧು ಹಿಂದುತ್ವವಾದಿ ಕಾಂಗ್ರೆಸ್ ನಯವಂಚಕರು, ಬುದ್ದಿಗೇಡಿ ಅನಕ್ಷರಸ್ಥ ಕಾಂಗ್ರೆಸ್ ಕಾರ್ಯಕರ್ತರ ಶುದ್ಧೀಕರಣದಿಂದ ಮಾತ್ರ ಕಾಂಗ್ರೆಸ್ ಉಳಿಸಬಹುದೇನೋ?