ಕಾಂಗ್ರೇಸ್ ಸೋಲಿಗೆ ಕಾರಣ ಯಾರು ? Part -3

ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೋತದ್ದು ಏಕೆ..?
ಸೋಲಿನ ಆತ್ಮಾವಲೋಕನ ಸಭೆ.

ಲೋಕಸಭೆಯ ಚುನಾವಣೆ ಎರಡು ತಿಂಗಳ ಹಿಂದೆ ಏ ಬೀ ವಿ ಪೀ ಘಟಕದ ಸ್ನೇಹಿತನೊಬ್ಬ ಕಾಲೇಜು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕಳಿಸಿದ್ದ. ತೆರೆದು ನೋಡಿದರೆ ಅಮೃತಕಾಲದ ಬಗ್ಗೆ ವಿಶೇಷ ಉಪನ್ಯಾಸ ನಿವೃತ್ತ ಹೆಡ್ ಮಾಸ್ತರ್ ರಿಂದ. ಖಡ್ಡಾಯ ಹಾಜರಾತಿ ಇರಬೇಕು ಎನ್ನುವ ಷರತ್ತು ವಿದ್ಯಾರ್ಥಿಗಳಿಗೆ ವಿಧಿಸಲಾಗಿತ್ತು.

ಇದು ಕಾಲೇಜುಗಳ ಕತೆ. ಸಾಗರದಲ್ಲಿ ಇಂದಿರಾ ಗಾಂಧಿ ಹೆಸರಿನಲ್ಲಿ ಡಿಗ್ರಿ ಕಾಲೇಜು ಇದೆ. ಮೂರು ಸಾವಿರ ವಿದ್ಯಾರ್ಥಿಗಳು ಓದುತ್ತಾ ಇದ್ದಾರೆ. ಕಳೆದ ಸಾರಿ ಕೋಳಿ ಕಜ್ಜಾಯ ವಿಚಾರದಲ್ಲಿ ಬಹಳ ಸುದ್ಧಿ ಆಗಿತ್ತು. ಅದಕ್ಕೂ ಮೊದಲು ಕಾಲೇಜು ಕಾರ್ಯಕ್ರಮದಲ್ಲಿ ಭಗವದ್ ಧ್ವಜ ಹಾರಿಸಿ ಸುದ್ಧಿ ಆಗಿತ್ತು. ಕಾಲೇಜಿನ ವಾತಾವರಣ ಹೇಗಿದೆ ಎನುವುದರ ಆಂತರಿಕ ವರದಿ ತರಿಸಿಕೊಂಡರೆ ಭೂತಮುಖಿ ಖಾಯಂ ಉಪನ್ಯಾಸಕ ವರ್ಗ ಒಂದು ಕಡೆಯಾದರೆ ಮೇಲೆ ನಾನು ತಿಳಿಸಿದ ಅಮೃತಕಾಲದ ಉಪನ್ಯಾಸ ನೀಡುವ ನಿವೃತ್ತ ಮುಖ್ಯೋಪಾಧ್ಯಾಯರ ಮಗ ಸೇರಿ ಅವರ ಬೈಠಕ್ ಶಿಷ್ಯರುಗಳನ್ನು ಅಲ್ಲಿ ಅಥಿತಿ ಉಪನ್ಯಾಸಕರನ್ನಾಗಿ ಈ ಹಿಂದೆಯೇ ತುಂಬಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿ ವೇದಿಕೆ ಕಾರ್ಯಕ್ರಮ ಸೇರಿ ನಡೆಯುವ ಉಪನ್ಯಾಸಗಳ ಸಂಪನ್ಮೂಲ ವ್ಯಕ್ತಿಗಳನ್ನು ಇವರು ನಿರ್ವಹಿಸುತ್ತಾರೆ. ಕಾಲೇಜಿನ 85% ವಿದ್ಯಾರ್ಥಿಗಳು ಅಹಿಂದ ಸಮುದಾಯಕೆ ಸೇರಿದವರು. ಬಹತೇಕ ಅಥಿತಿ ಉಪನ್ಯಾಸಕರ ಯೋಚನಾಕ್ರಮ ಮತ್ತು ರಾಜಕೀಯ ಹಿತಾಸಕ್ತಿ ಮತ್ತು ಅಜೆಂಡಾವನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ.

ಸಾಗರದ ಬಿಸಿಎಂ ಹಾಸ್ಟೆಲ್ಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಇದ್ದಾರೆ. ಹಾಸ್ಟೆಲ್ ಅಂದರೆ ಕೇವಲ ಅನ್ನ ನೆರಳಿನ ಜಾಗ ಅಲ್ಲ. ಮೀನು ಮಾಂಸ ತಿನ್ನುವ ಹೆಚ್ಚಿನ ಜನ ಇರುವ ಈ ಹಾಸ್ಟೆಲ್ ಗಳಲ್ಲಿ ಬಿಜೆಪಿ ಯ ವಿದ್ಯಾರ್ಥಿ ಸಂಘಟನೇ ಏ ಬೀ ವಿ ಪೀ ಯ ಸಂಘಟನಾ ಭಾಗ ಆದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಹಾಸ್ಟೆಲ್ ನಿರ್ವಹಣೆ ಗೆ ಬಿಜೆಪಿ ಕಡೆಯಿಂದ ಪ್ರತ್ಯೇಕ ಆಕ್ಷನ್ ಪ್ಲಾನ್ ಇತ್ತು.

ಇದು ಸಾಗರದ ಕತೆ.

ಶಿವಮೊಗ್ಗದ ಗಾಜನೂರು ಸೇರಿ ಬಹತೇಕ ವಸತಿ ಶಾಲೆಗಳಲ್ಲಿ ಒಂದು ತರಗತಿಯನ್ನ ವಿಚಾರಗಳನ್ನು ತುಂಬಲು ಮೀಸಲು ಇಡಲಾಗಿದೆ. ನನಗೆ ಗೊತ್ತಿರುವ ಹಲವು ವಿದ್ಯಾರ್ಥಿಗಳು ನೀಡಿದ ಮಾಹಿತಿ ಪ್ರಕಾರ ಎಂಟರಿಂದ ಪೀ ಯು ತನಕ ವಾರಕ್ಕೆ ಎರಡು ದಿನ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬಲಿಷ್ಠ ನಾಯಕತ್ವ ( ಮೋದಿ ನಾಯಕತ್ವ) ಬಗ್ಗೆ ತರಗತಿ ಇರುವಂತೆ ನೋಡಿಕೊಳ್ಳಲಾಗುತ್ತ ಇದೆ. ಈಗಿನ ಎಂಟನೇ ತರಗತಿ ವಿದ್ಯಾರ್ಥಿ ಎಂದರೆ ಮುಂದಿನ ಚುನಾವಣೆಯ ಮತದಾರ ವರ್ಗ.

ಕರಾವಳಿಯಲ್ಲಿ ಮಾಡಿದ ಪ್ರಯೋಗ ಇದು
ಈಗ ಮಲೆನಾಡಲ್ಲಿ ವಿಸ್ತಾರಿಸಲಾಗಿದೆ. ಕುಂದಾಪುರದಲ್ಲಿ ಡಿಗ್ರಿ ಓದಲು ಹೋದ ನನ್ನ ಸ್ನೇಹಿತನ ಮಗಳು ಪ್ರತಿ ಬಾರಿ ಚುನಾವಣೆಯಲ್ಲಿ ಗುಪ್ತವಾಗಿ ಸಂಘೀ ಆಗಿ ಕೆಲಸ ಮಾಡುತ್ತಾಳೆ. ಅವಳ ಅಜ್ಜ ಗೆ ಭೂಮಿ ಅಮ್ಮನಿಗೆ ಕೆಲಸಾ ಎರಡನ್ನೂ ಕಾಗೋಡು ತಿಮ್ಮಪ್ಪನವರೇ ಕೊಟ್ಟಿದ್ದಾರೆ.. !! ಇವರ ಸಂಖ್ಯೆ ಪ್ರತಿ ಊರಲ್ಲಿ ಇದೆ. ಕರಾವಳಿ ಕಾಲೇಜುಗಳ ಮಾದರಿ ಮಲೆನಾಡಿಗೆ ವಿಸ್ತಾರ ಮಾಡಲಾಗಿದೆ.


ನಾವು ಊರಲ್ಲಿ ಚುನಾವಣೆ ಮುನ್ನ ದಿನಗಳಲ್ಲಿ ಕಾಂಗ್ರೆಸ್ ಮತ ಹಾಕಿ ಎಂದು ಕೇಳುತ್ತಾ ಇರುವುದು ಇದೆ ವಿದ್ಯಾರ್ಥಿಗಳು ಮತ್ತು ಇವರ ಪೋಷಕರ ಬಳಿ. ಪಾಪ ಕೆಲ ಪೋಷಕರು ಮನೆಯಲ್ಲಿ ಹೊಸ ತಲೆಮಾರಿನವರ ಈ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಆಗದೇ ಸುಮ್ಮನೆ ಆಗಿದ್ದಾರೆ. ಮತ್ತೆ ಕೆಲ ಅಮ್ಮಂದಿರು ಮಕ್ಕಳ ಮಾತು ಕೇಳಿ ಸುಮ್ಮನೆ ವೋಟು ಹಾಕಿ ಬಂದಿದ್ದಾರೆ. ಬಿಜೆಪಿ ಗೆ
ಬೀ ವೈ ರಾಘವೇಂದ್ರ ಎನ್ನುವ ವ್ಯಕ್ತಿಗತ ಕ್ಯಾರೆಕ್ಟ್ ರ್
ಹೊರತಾಗಿ ನಡೆಯುತ್ತಾ ಇರುವ ಸಂಗತಿಗಳು ಇವು.


ಇನ್ನು ಶಿವಮೊಗ್ಗ ಕಾಂಗ್ರೆಸ್ ವಾರ್ ರೂಮ್ ಎನ್ನುವುದು ಅದ್ಬುತ ಮೇಧಾವಿಗಳಿಂದ ಕೂಡಿದೆ. ಅವರ ಪ್ರಕಾರ ಭಾಗ್ಯ ಕೊಟ್ಟ ಕಾರಣ ಹೆಣ್ಣು ಮಕ್ಕಳ ವೋಟು ಎನ್ನುವುದು ನೂರಕ್ಕೆ ನೂರು ಬೀಳುತ್ತದೆ ಅವರ ಪ್ರಕಾರ ಬಿಜೆಪಿ ಕಾರ್ಯಕರ್ತನ ಹೆಂಡತಿಯ ಮತ ಕೂಡಾ ಕಾಂಗ್ರೆಸ್ ಬಂದರೇ ಅಚ್ಚರಿ ಇಲ್ಲ. ಜಾತಿ ಲೆಕ್ಕಾ ಕೂಡಾ ಅಷ್ಟೇ ಸಲೀಸು ಈಡಿಗರು ಶೇಖಡಾ 90, ಅಲ್ಪ ಸಂಖ್ಯಾತ ನೂರಕ್ಕೆ ನೂರು, ಇತರೆ ಹಿಂದುಳಿದ ಜಾತಿಗಳು 70%,
ಎಸ್ ಸಿ ಎಸ್ ಟಿ ಖಾಯಂ. ಚುನಾವಣೆ ಮುನ್ನಾ ದಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.

ನಾವು ಗೆದ್ದಾಗಿದೆ.


ಕಟ್ಟ ಕಡೆಗೆ ನಮ್ಮ ದಂಡನಾಯಕರಾದ ಮಧು ಬಂಗಾರಪ್ಪನವರು. ಅವರಿಗೆ ಗೊತ್ತಿಲ್ಲದೇ ಇರುವುದು ಏನಿದೆ. ಅವರು ಸರ್ವಜ್ಞರು. ಯಾರಾದರೂ ಅವರಿಗೆ ಏನಾದ್ರೂ ಹೇಳಲು ಸಾಧ್ಯವೇ..? ಹೇಳಿದರೂ ಅವರು ಕೇಳಿಸಿ ಕೊಳ್ಳಬಹುದೇ..? ಛೇ.. ಸಾಧ್ಯವೇ ಇಲ್ಲ. ಅವರು ಹೇಳಿದ್ದನ್ನು ನಾವು ಕೇಳಬೇಕು ಅಷ್ಟೇ.

ಸರ್ವಾಧಿಕಾರ. ದಾಷ್ಠ್ಯ ಬೆಳೆಸಿಕೊಂಡಾಗ ಕಿವಿ ಮಂದ ಆಗುತ್ತದೆ. ಬುದ್ಧಿಗೆ ಮಂಕು ಕವಿಯುತ್ತದೆ. ಬಹಳ ಮುಖ್ಯವಾಗಿ ಸಂವೇದನೆಗಳನ್ನ ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ಕಳೆದು ಕೊಳ್ಳುತ್ತಾರೆ.

ಮಧು ಬಂಗಾರಪ್ಪ ತಮ್ಮನ್ನ ಮುರಿದು ಕಟ್ಟಿಕೊಳ್ಳಬೇಕು. ಈ ಸರಣಿ ಸೋಲುಗಳು ಇದನ್ನೇ ದ್ವನಿಸುತ್ತಾ ಇವೆ.

ಆಗ ಈ ಲೇಖನದಲ್ಲಿ ಮೇಲೆ ನಾನು ಉಲ್ಲೇಖ ಮಾಡಿದ ಎಲ್ಲಾ ಸಂಗತಿಗಳು ಅವರಿಗೆ ಅರ್ಥ ಆಗುತ್ತದೆ.


ಕೊನೆ ಮಾತು.
ಪಕ್ಷ ಟಿಕೆಟ್ ಕೊಟ್ಟಾಗ ಅದರ ಕಾರ್ಯಕರ್ತರು ದುಡಿಯುತ್ತಾರೆ. ನಾನೂ ಕೂಡಾ ಸಾಗರ ತಾಲ್ಲೂಕಿನ ಬಹು ಭಾಗ ನಮ್ಮ ನಾಯಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿಗಳು, ದುನಿಯಾ ವಿಜಯ್ ಜತೆ ಸುತ್ತು ಹಾಕಿ ಸಭೆಯಲ್ಲಿ ಪಾಲ್ಗೊಂಡೆ.

ಗೀತಾ ಮೇಡಂ ವೈಯಕ್ತಿಕವಾಗಿ ನನಗೆ ಚತುರ ಚರಿಷ್ಮ ರಾಜಕಾರಣಿ ನಮ್ಮ ಬಂಗಾರಪ್ಪ ಮಗಳಿಗಿಂತ ಎತ್ತರ ಏರಿದರೂ ಹಣ ಕೀರ್ತಿ ಎಲ್ಲವೂ ಇದ್ದರೂ ಮುಗ್ದತೆ ಉಳಿಸಿಕೊಂಡ ನಮ್ಮ ಮೇರು ನಟ ಅಣ್ಣಾವ್ರ ಸೊಸೆ ಯಾಗಿಯೆ ಕಂಡರು. ಅದಕ್ಕೆ ಅವರ ವ್ಯಕ್ತಿತ್ವ ಪೂರ್ಣವಾಗಿದೆ ಅನ್ನಿಸ್ತು. ಶಿವಣ್ಣ ಕೂಡಾ ಅಷ್ಟೇ ಎಲ್ಲೂ ಕೂಡಾ ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಘನತೆ ಕಳೆಯದೆ ನಡೆದರು.

ಇಷ್ಟು ಹೇಳಬೇಕಾದ ಮಾತು.
ಮೊನ್ನೆ ಸಾಗರದ ಆತ್ಮಾವಲೋಕನ ಸಭೆಯಲ್ಲಿ ಕಡಿಮೆ ಅವಕಾಶದಲ್ಲಿ ಆಡಿದ ಮಾತುಗಳು ಇವು.

(ದ್ವೀಪದ ಜಿ. ಟಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೀನು ಕಚ್ಚಿ ಸಾವು!

ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು! ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು...

ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ...

ಪ.ಪಂ. ರಸ್ತೆ, ಚರಂಡಿ ನಿರ್ವಹಣೆಗೆ ಆದ್ಯತೆ ನೀಡಲು ಶಾಸಕರ ಸೂಚನೆ

ಸಿದ್ಧಾಪುರ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು....

fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್‌ ಸೋಲು! ಕಾಂಗ್ರೆಸ್‌ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.

ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ...

ದುರಹಂಕಾರ ಪಟ್ಟವರನ್ನು ಶ್ರೀರಾಮನೇ 240 ಸೀಟುಗಳಿಗೆ ತಡೆದ: RSS ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ

ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *