

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಿಷ್ಟು!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಬಂಧನವಾಗಿದ್ದು, ಆರೋಪಿ ನಂಬರ್ 1 ಆಗಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಗೆ ಮೂಲ ಕಾರಣವೇ ಪವಿತ್ರಾ ಗೌಡ ಎನ್ನಲಾಗಿದೆ.

ಪವಿತ್ರಾ ಗೌಡ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಬಂಧನವಾಗಿದ್ದು, ಆರೋಪಿ ನಂಬರ್ 1 ಆಗಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಗೆ ಮೂಲ ಕಾರಣವೇ ಪವಿತ್ರಾ ಗೌಡ ಎನ್ನಲಾಗಿದೆ.
ಜೈಲಿನಲ್ಲಿರುವ ಪವಿತ್ರಾ ಗೌಡ ಬಗ್ಗೆ ಆಕೆಯ ಮಾಜಿ ಪತಿ ಸಂಜಯ್ ಸಿಂಗ್ ಮಾತನಾಡಿದ್ದಾರೆ. ನಾನು ಹಾಗೂ ಪವಿತ್ರಾ ಗೌಡ ದೂರವಾಗಿ 12 ವರ್ಷಗಳಾಗಿವೆ. ನನಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವಾಗಲಿ, ಸಂಬಂಧವಾಗಲಿ ಇಲ್ಲ ಎಂದಿದ್ದಾರೆ. ‘ನಾವಿಬ್ಬರೂ ಬೆಂಗಳೂರಿನಲ್ಲಿಯೇ ಮೊದಲು ಪರಿಚಯವಾಗಿದ್ದವು. ಮದುವೆಯಾದವು, ಆದರೆ ನಮ್ಮಿಬ್ಬರ ವೃತ್ತಿಗಳು ಬೇರೆ ಬೇರೆ ಆಗಿದ್ದವು. ನಾನು ಐಟಿ ಉದ್ಯಮದವನು, ಅವರ ಸಿನಿಮಾ ಕ್ಷೇತ್ರದವರು. ನಮ್ಮಿಬ್ಬರ ನಡುವೆ ಇದೇ ಕಾರಣಕ್ಕೆ ಹೊಂದಾಣಿಕೆ ಕೊರತೆ ಇತ್ತು. ಪರಸ್ಪರರಿಗೆ ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ ಹಾಗಾಗಿ ವಿಚ್ಛೇದನ ಪಡೆದುಕೊಂಡೆವು ಎಂದಿದ್ದಾರೆ ಸಂಜಯ್ ಸಿಂಗ್.
ಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಸಿಂಗ್, ‘ಮಗಳೊಂದಿಗೆ ಬಹಳ ಕಡಿಮೆ ಮಾತನಾಡಿದ್ದೇನೆ. ಈ 12 ವರ್ಷಗಳಲ್ಲಿ ನಾನು ಒಂದೆರಡು ಬಾರಿಯಷ್ಟೆ ನನ್ನ ಮಗಳ ಬಳಿ ಮಾತನಾಡಿದ್ದೇನೆ. ನನ್ನ ಹಾಗೂ ಪವಿತ್ರಾರ ವಿಚ್ಛೇದನಕ್ಕೆ ವೃತ್ತಿ ಬೇರೆಯಾಗಿರುವುದೇ ಮೂಲ ಕಾರಣ ಆಗಿತ್ತು. ಬೇರೆಯೇನಲ್ಲ ಎಂದಿದ್ದಾರೆ ಸಂಜಯ್ ಸಿಂಗ್.

ನಾನು ಅವಳನ್ನ ಚಿನ್ನು ಅಂತ ಕರೆಯುತ್ತಿದ್ದೆ. ಅವಳು ಸಂಜಯ್ ಅನ್ನುತ್ತಿದ್ದಳು. ನಾವಿಬ್ಬರು ಜೊತೆಗೆ ಇರಲು ಸಾಧ್ಯವಿಲ್ಲ. ನಾನು ಮತ್ತು ದರ್ಶನ್ ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್ ಕೊಡು ಎಂದು ಹೇಳಿದ್ದಳು. ನಾನು ಸರಿ ಎಂದು ಡಿವೋರ್ಸ್ ಕೊಟ್ಟೆ. ಬಳಿಕ ಆಕೆ ದರ್ಶನ್ ಜೊತೆ ಜೀವನ ಮಾಡಲು ಶುರು ಮಾಡಿದಳು.
ಆ ಬಳಿಕ ಆಕೆ ಮದುವೆ ಆಗಿದ್ದಾಳೋ ಇಲ್ವೋ ಗೊತ್ತಿಲ್ಲ. ಯಾಕೆಂದರೆ ನನಗೆ ಅವರ ಮೇಲೆ ಯಾವುದೇ ಆಸಕ್ತಿ ಇಲ್ಲ. ಆದರೆ ಬಹಳ ದಿನಗಳ ಬಳಿಕ ಒಮ್ಮೆ 2017, 2018ರಲ್ಲಿ ಮಗಳನ್ನು ನೋಡಲು ನಾನು ಬೆಂಗಳೂರಿನಲ್ಲಿ ಭೇಟಿಯಾದೆ. ಆದಾದ ನಂತರ ನಾನು ಇಲ್ಲಿಯವರೆಗೂ ಮಗಳನ್ನು ನೋಡಲೇ ಇಲ್ಲ. ಅವರ ಮೂಡ್ ಅನ್ನು ಯಾಕೆ ಹಾಳಮಾಡಬೇಕು ಅಂತ ಸುಮ್ಮನಾದೆ.
ನನಗೆ ಪವಿತ್ರ ಗೌಡ ತುಂಬಾ ಚೆನ್ನಾಗಿ ಗೊತ್ತು. ಬೈ ಮಿಸ್ ಇದು ಆಗಿರಬಹುದು. ಅವಳು ಮೆದುಳಿನಿಂದ ಬಹಳ ಸ್ಟ್ರಾಂಗ್ ಇದ್ದಾಳೆ. ಹೃದಯದಿಂದ ಬಹಳ ಸಾಫ್ಟ್ ಇದ್ದಾಳೆ. ಏನೋ ತಪ್ಪುಆಗಿದೆ. ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಅವಳು. ಒಬ್ಬರನ್ನ ಕೊಲೆ ಮಾಡ್ತಾರೆ ಇದು ಸುಳ್ಳು ಎಂದು ಹೇಳಿದ್ದಾರೆ. (ಕಪ್ರ.ಕಾಮ್)
