

ಸಿದ್ಧಾಪುರದ ವಿಚಾರಗಳು ಈಗ ಜಿಲ್ಲೆಯ ಗಮನ ಸೆಳೆಯುತ್ತಿವೆ. ಮೂವತ್ತು ವರ್ಷಗಳಿಂದ ನೇಪಥ್ಯದಲ್ಲಿದ್ದ ಸಿದ್ಧಾಪುರ ಮತ್ತೆ ಸೌಂಡು ಮಾಡುತ್ತಿದೆಯೊ? ಅಥವಾ ತಟ್ಟಿ ಬಡಿದು ಹುಲಿ ಹೆದರಿಸುವ ಕೆಲಸ ನಡೆಯುತ್ತಿದೆಯೆ ಎನ್ನುವ ಅನುಮಾನ ಕಾಡುವಂತಾಗಿದೆ.
ಸಿದ್ಧಾಪುರಕ್ಕೆ ಬಂದ ಪ್ರಾಮಾಣಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಒಬ್ಬರಾಗಿರುವ ಎಂ. ಎಚ್. ನಾಯ್ಕ ರ ಅವಧಿಯಲ್ಲಿ ಬಿ.ಇ.ಓ. ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಗುಮಾಸ್ತರೊಬ್ಬರ ಮಿತಿಮೀರಿದ ಲಂಚಗುಳಿತನದ ಬಗ್ಗೆ ಲೋಕಾಯುಕ್ತ ವರೆಗೆ ತಲುಪಿದ ದೂರಿನಿಂದಾಗಿ ಸಿದ್ಧಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಲೋಕಾಯುಕ್ತರ ಗುರಿಯಾಗಿದ್ದ ಅಧಿಕಾರಿ ಅಂದು ಕಚೇರಿಯಲ್ಲಿ ಇಲ್ಲದಿರುವುದು ಲೋಕಾಯುಕ್ತ ದಾಳಿಯ ವಿಶ್ವಾ ರ್ಹತೆಯನ್ನು ಪ್ರಶ್ನಿಸುವಂತಿದೆ.
ಇದೇ ದಿನ ಸಿದ್ಧಾಪುರ ತಾಲೂಕಾ ಆಸ್ಫತ್ರೆಯ ಮೇಲೆ ಕೂಡಾ ಲೋಕಾಯುಕ್ತ ದಾಳಿ ನಡೆದಿರುವುದು ಗಾಳಿ ಸುದ್ದಿಯಾಗಿ ಚರ್ಚೆಯಲ್ಲಿದೆ.
ತಾಲೂಕಾ ಆಸ್ಫತ್ರೆ ವ್ಯವಸ್ಥೆ ಬಗ್ಗೆ ಹೆಚ್ಚಿನ ತಕರಾರುಗಳಿಲ್ಲ ಅಲ್ಲಿ ಕೂಡಾ ಒಬ್ಬ ಅಧಿಕಾರಿಯನ್ನು ಗುರಿ ಮಾಡಿ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೂಡಾ ಲೋಕಾಯುಕ್ತರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎನ್ನಲಾಗುತ್ತಿದೆ.
ಸಿದ್ಧಾಪುರ ತಾಲೂಕಾ ಆಸ್ಫತ್ರೆಯ ವ್ಯವಸ್ಥಾಪಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕರನ್ನು ಗುರಿ ಮಾಡಿದ ಲೋಕಾಯುಕ್ತ ತನಿಖೆಯ ಹಿಂದೆ ಒಬ್ಬನೇ ವ್ಯಕ್ತಿ ಇರುವುದು ಸ್ಫಷ್ಟವಾಗಿದ್ದು ಈ ವ್ಯಕ್ತಿ ಬಿ.ಜೆ.ಪಿ. ಪ್ರೇರಿತ ಮನುಷ್ಯ ಎನ್ನಲಾಗುತ್ತಿದೆ.
ತಹಸಿಲ್ಧಾರ ಕಚೇರಿ ಮತ್ತು ಉಪನೋಂದಣಾಧಿಕಾರಿಗಳ ಕಛೇರಿ ಬಿಟ್ಟು ಸೇವಾ ಕ್ಷೇತ್ರದ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿಯಾಗಿರುವುದು ಗುಡ್ಡ ಅಗೆದು ಇಲಿಕೂಡಾ ಸಿಗದಂತಾಗಿದೆ ಎನ್ನುವ ಅಭಿಪ್ರಾಯ ಕೇಳುವಂತಾಗಿದೆ.
