ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ ಮೂಲಕ ಹೊಸ ದಾರಿ, ಭವಿಷ್ಯಕ್ಕೆ ಮಾರ್ಗಸೂಚಿಯಾಗುತ್ತದೆ. ಹೋರಾಟ ಅಸಹಾಯಕರಿಗೆ ಶಕ್ತಿ ತುಂಬಿ ಸರ್ಕಾರವನ್ನು ಎಚ್ಚರಿಸುತ್ತ ಆಡಳಿತ ಹಳಿ ತಪ್ಪದಂತೆ ಜೀವನ್ಮುಖಿ ಆಗುವತ್ತ ಪ್ರಯತ್ನಿಸುತ್ತದೆ.
ಸಾಹಿತ್ಯ,ಸಾಂಸ್ಕೃತಿಕತೆ, ಚಿಂತನೆ, ಹೋರಾಟದ ಮನೋಭಾವದ ವ್ಯಕ್ತಿ ಮತಾಂಧನಾಗಲಾರ.
೨೦೨೪ ರ ಲೋಕಸಭಾ ಚುನಾವಣೆಯ ಮೊದಲು ಎನ್,ಡಿ.ಎ. ಗೆ ಪರ್ಯಾಯವಾಗಿ ಇಂಡಿಯಾ ಸಂಘಟನೆಯಾಗುತಿತ್ತು. ಇಂಡಿಯಾಕ್ಕೆ ಕೂಡಾ ಎನ್.ಡಿ.ಎ. ರೀತಿಯಲ್ಲಿಯೇ ಅಧಿಕಾರ, ಅವಕಾಶ ಬೇಕಿತ್ತು. ಈ ಎರಡು ಗುಂಪುಗಳು ಸೈದ್ಧಾಂತಿಕವಾಗಿ ಭಿನ್ನವಾದರೂ ಆಡಳಿತ, ಯಜಮಾನಿಕೆ ವಿಚಾರದಲ್ಲಿ ಭೇದವಿಲ್ಲ.
ಈ ಇಂಡಿಯಾ ಒಕ್ಕೂಟದ ಜೊತೆಗೆ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಪ್ರೇಮಿಗಳ ಸಂಘಟನೆಗಳು ದೇಶದಾದ್ಯಂತ ಕೆಲಸ ಮಾಡುತಿದ್ದವಲ್ಲ ಅವುಗಳಿಗೆ ಅರ್ಜಂಟಾಗಿ ಅಧಿಕಾರದ ದರ್ದಿರಲಿಲ್ಲ ಆದರೆ ಅವರಿಗೆ ಮತಾಂಧತೆ, ಸರ್ವಾಧಿಕಾರಗಳ ಅಪಾಯದ ಅರಿವಿತ್ತು. ಪರಿವಾರ ಭಾರತೀಯ ಬಹುತ್ವವನ್ನು ಹಿಮ್ಮೆಟ್ಟಿಸಿ ಧಾರ್ಮಿಕ ಕುಟಿಲತೆಯ ಮೂಲಕ ಅರಾಜಕತೆ ಸೃಷ್ಟಿಸಿ ಲಾಭ ಪಡೆಯಲು ಮಾಡುವ ಉಪಾಯಗಳ ಸ್ಫಷ್ಟತೆ ಇತ್ತು.
ನೆರೆಯ ಶ್ರೀಲಂಕಾ ದಿವಾಳಿಯ ಹೊಸ್ತಲಿಗೆ ಬಂದಿತ್ತು, ಪಾಕ್, ಬಾಂಗ್ಲಾಗಳು ಧಾರ್ಮಿಕ ಅವಿವೇಕದ ವಾಸ್ತವ ಪರಿಸ್ಥಿತಿಗೆ ಉದಾಹರಣೆಯಂತಿದ್ದವು. ಚೀನಾ, ರಷ್ಯಾ ಸೇರಿದಂತೆ ಅನೇಕ ದೇಶಗಳ ನಿರಂಕುಶ ಪ್ರಭುತ್ವ ಭವ್ಯ ಭಾರತವನ್ನು ಎಚ್ಚರಿಸುತಿತ್ತು.
ಎರಡು ಅವಧಿಗೆ ಭಾರತ ಆಳಿದ ಪರಿವಾರ ಸರ್ವಾಧಿಕಾರಿಯನ್ನು ಸೃಷ್ಟಿಸುತ್ತಿರುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿದ್ದವು. ಒಂದೆಡೆ ಇಂಡಿಯಾ ತನ್ನ ಆದ್ಯತೆಗನುಸಾರ ಸಂಘಟಿತವಾಗುತಿತ್ತು. ಇದಕ್ಕಿಂತ ಹೊರಗೆ ನೈಜ ದೇಶಪ್ರೇಮಿಗಳ ಬಿಡಿ ಗುಂಪುಗಳು ಭಾರತದ ಸರ್ವಾಧಿಕಾರಿ, ಮತಾಂಧ ಪರಿವಾರದ ಏಕಸ್ವಾಮ್ಯದ ಅಪಾಯಗಳ ಬಗ್ಗೆ ಎಚ್ಚರಿಸುತಿತ್ತು.
ಹಿಂದಿನ ಪ್ರಧಾನಿಯ ಅಹಂಕಾರ, ಹೇಗೆ ಸರ್ವಾಧಿಕಾರದತ್ತ ಮುಖಮಾಡಿತ್ತೆಂದರೆ….ನಾನೇ ನಿಜ ದೇಶಪ್ರೇಮಿ, ನಾನೇ ಭರವಸೆ, ನಾನೇ ದೇವಧೂತ! ಹೀಗೆ ನಾನೇ ಎನ್ನುವುದು ಪರಿವಾರದ ಸಾಂಸ್ಥಿಕ ರೂಪ ಪಡೆದು ಭಾರತದ ಬಹುತ್ವ ಅಪಾಯದ ಹಂತ ಮುಟ್ಟಿತ್ತು.
ಹೀಗೇಕಾಯ್ತು ಎಂದರೆ ಪ್ರಧಾನ ಮಂತ್ರಿ ವೀರಾವೇಶದಿಂದ ಮಾತನಾಡತೊಡಗಿದ್ದರು. ಮಾಧ್ಯಮಗಳನ್ನು ದಮನಿಸಿದ ಪ್ರಮ ಅದರ ಅಂಗವಾಗಿ ಮಾಧ್ಯಮಗಳನ್ನು ಖರೀದಿಸಿದ್ದರು. ಮಾಧ್ಯಮಗಳು ಸರ್ವಾಧಿಕಾರಿಯನ್ನು ಹೊಗಳದೆ ಬಿಡಲು ಸಾಧ್ಯವೆ?
ಈ ಸನ್ನಿ ಬೇರೆ ಬೇರೆ ಹಂತ ದಾಟಿ ಯುವ ಮನಸ್ಸುಗಳಲ್ಲಿ ನಂಜು ತುಂಬತೊಡಗಿತ್ತು. ಇನ್ನೇನು ಸರ್ವಾಧಿಕಾರಿ ಗೆದ್ದೇ ಬಿಟ್ಟ ಭಾರತ ಕೂಡಾ ಮತ್ತೊಂದು ಕೋರಿಯಾ, ರಷ್ಯಾ, ಚೀನಾ… ಆಗೇಹೋಯ್ತು ಎನ್ನುವಷ್ಟರಲ್ಲಿ ಇಂಡಿಯಾ ಕೂಟ ಮತ್ತು ಪ್ರಜಾಪ್ರಭುತ್ವ ಪ್ರೇಮಿ, ಸಂವಿಧಾನ ರಕ್ಷಕ ಪ್ರಗತಿಪರರು ಹೋರಾಟಕ್ಕಿಳಿದರು ಇದರಿಂದಾಗಿ ಭಾರತ ಬಚಾವಾಯಿತು.
ನೀವೇ ನೋಡಿ ಪಕ್ಕಾ ಜಾತ್ಯಾತೀತ ಬದ್ಧತೆಯ ಬೆರಳೆಣಿಕೆಯ ಮುಖಂಡರು,ನಾಯಕರನ್ನು ಬಿಟ್ಟರೆ ಈ ಬಾರಿ ಕೂಡಾ ಮೋದಿ ಎನ್ನುವ ಮಾತು ಪರಿವಾರ ದಾಟಿ ಬಿ.ಜೆ.ಪಿ. ಸುತ್ತಿ ಜನಸಾಮಾನ್ಯರ ತಲೆಗೆ ಹೊಕ್ಕಲು ಹೊಂಚು ಹಾಕುತಿತ್ತು.
ಕಾಂಗ್ರೆಸ್ ಸೇರಿದಂತೆ ಬಿ.ಜೆ.ಪಿ., ಪರಿವಾರ ವಿರೋಧಿಸುವ ಪಕ್ಷ, ಪಂಗಡಗಳು ನಿಧಾನವಾಗಿ ಬಿ.ಜೆ.ಪಿ. ವಿರೋಧಿಗಳು ಮೋದಿ ವಿರೋಧಿಸಬಾರದು ಎನ್ನತೊಡಗಿದ್ದರು!?. ಉತ್ತರ ಕನ್ನಡ ಶಿವಮೊಗ್ಗಗಳಲ್ಲಂತೂ ಅನೇಕರು ಮೋದಿ ಮತ್ತು ಅನಂತಕುಮಾರ ಹೆಗಡೆ ವಿರೋಧಿಸಬಾರದು, ಮೋದಿ ಮತ್ತು ರಾಘವೇಂದ್ರರನ್ನು ವಿರೋಧಿಸಬಾರದು ಎಂದು ರಕ್ಷಣಾತ್ಮಕ ಆಟ ಶುರುಹಚ್ಚಿದ್ದರು.
ಎದ್ದೇಳು ಭಾರತದ ಅಂಗ ಎದ್ದೇಳು ಕರ್ನಾಟಕ ಸಂಘಟನೆ ಉತ್ತರ ಭಾರತದಲ್ಲಿ ಬಿ.ಜೆ.ಪಿ. ಸೋಲುತ್ತೆ, ಬಿ.ಜೆ.ಪಿ. ೨೦೦ ಸ್ಥಾನಗಳನ್ನೂ ಗೆಲ್ಲಲ್ಲ ಎನ್ನುತ್ತಾ ಅರಿವು ಮೂಡಿಸುತಿದ್ದಾಗ ಪರಿವಾರದ ಮನಸ್ಥಿತಿಯ ಬಿ.ಜೆ.ಪಿ., ಬಿ.ಜೇಪಿ ಏತರರು ಕೂಡಾ ಮೋದಿ ಎನ್ನುತ್ತಾ ಭಜನೆಯಲ್ಲಿ ತೊಡಗಿದ್ದರು. ಶಿವಮೊಗ್ಗ, ಉತ್ತರ ಕನ್ನಡಗಳಲ್ಲಿ ರಾಘವೇಂದ್ರ, ಕಾಗೇರಿ ವಿಶ್ವೇಶ್ವರ ಹೆಗಡೆ ಸೋಲು ಬಯಸುತಿದ್ದವರು ಮೋದಿ ಬರಬೇಕು ಎನ್ನುತಿದ್ದರು!
ಹೀಗೆ ಭಾರತ ಜರ್ಮನಿ ಪ್ರೇರಿತ, ಇಟಲಿ ಮನಸ್ಥಿತಿಯ ಪರಿವಾರದ ಸಂಘಿ ಸನ್ನಿಗೊಳಗಾಗಿ ಹಾಳಾಯಿತು ಎನ್ನುವಷ್ಟರಲ್ಲಿ ನಿಜ ದೇಶಪ್ರೇಮಿಗಳು ರಾಜಕೀಯ ಹೋರಾಟ, ಸಾಂಸ್ಕೃತಿಕ ಸಂಘಟನೆ, ಸಾಹಿತ್ಯ, ಪ್ರಚಾರ, ಆದೋಲನಗಳ ಮೂಲಕ ದೇಶ ಉಳಿಸಿದರು.ಬಹುಹಿಂದೆ ಜರ್ಮನಿ, ಜಪಾನ್, ಅಮೇರಿಕಾ ಸೇರಿದಂತೆ ಅಂದಿನ ಧಾರ್ಮಿಕ ಪ್ರಭುತ್ವದ ಸರ್ವಾಧಿಕಾರಿಗಳು, ನಿರಂಕುಶ ಆಡಳಿತಗಳನ್ನು ಹಿಮ್ಮೆಟ್ಟಿಸಿದ್ದ ಸಾಹಿತ್ಯ, ಹೋರಾಟ, ಸಂಘಟನೆ, ಜನಾಂದೋಲನಗಳು ಈಗ ಭಾರತವನ್ನು ಉಳಿಸಿದವು.
ಈಗ ಹೇಳಿ ಕಾಂಗ್ರೆಸ್, ಜೆ.ಡಿ.ಎಸ್. ಅಥವಾ ಇತರ ಬಿ.ಜೆ.ಪಿ.ಯೇತರ ಪಕ್ಷಗಳು ನಾಡಿನ ಜೀವಪರ ಧ್ವನಿಗಳ ಸಹಕಾರಕ್ಕೆ ನಿಂತವೆ? ಈಗ ಸಂಘ ಪರಿವಾರ ಮೆಲ್ಲಗೆ ಪ್ರಮ ಅಹಂಕಾರಿಯಾಗಿದ್ದರು,ಸೌಜನ್ಯ ವಿರಲಿಲ್ಲ, ವಿನಯ ಕಳೆದುಕೊಂಡಿದ್ದರು. ಮಣಿಪುರಕ್ಕೆ ಹೋಗಲಿಲ್ಲ ಇತ್ಯಾದಿ ಆಕ್ಷೇಪಿಸುತ್ತಾ ನಮ್ಮ ಸಹಕಾರವಿಲ್ಲದೆ ಮೋದಿ-ಶಾ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಿದೆ.
ಇದೇ ಮೋದಿ-ಶಾ ಗಳನ್ನು ಬೆಳೆಸಿದ ಪರಿವಾರ ಭಾರತದಲ್ಲಿ ಕೋಮುವಾದ ಹರಡಲಿಲ್ಲವೆ? ರಾಜಕೀಯ, ಚುನಾವಣಾ ಗೆಲುವಿನ ಕಾರಣಕ್ಕೆ ಪರಿವಾರ ಪರೋಕ್ಷವಾಗಿ ನಿರ್ಧೇಶಿಸಿ ಮಾಡಿಸಿದ ಕೊಲೆಗಳೆಷ್ಟು? ಈಗ ಕೊಲೆಗಾರರನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ಪಾಲಿದೆ ಎಂದರೆ ಜನತೆ ನಿಮ್ಮನ್ನು ದೇಶಪ್ರೇಮಿಗಳೆಂದು ಒಪ್ಪಿಕೊಳ್ಳಲು ಸಾಧ್ಯವೆ? ನೈಜ ದೇಶಪ್ರೇಮಿಗಳನ್ನು ದೇಶದ್ರೋಹಿಗಳೆಂದು ಬಿಂಬಿಸಿ ಜನರನ್ನು ವಂಚಿಸಿ ಮೋದಿ-ಶಾ ಜೋಡಿ ಪರಿವಾರ ಗದ್ದುಗೆಗೆ ಏರಿದ್ದಲ್ಲವೆ?
ಅಮೇರಿಕಾದಂತೆ ಯುದ್ಧ ಉತ್ತೇಜಿಸಿ, ಸಮರಕ್ಕೆ ವೀಳ್ಯ ಕೊಟ್ಟು ಕೊನೆಗೆ ಯುದ್ಧ ಅಪಾಯ ಎನ್ನುವ ಬೂಟಾಟಿಕೆ ಮತ್ತು ಸಂಘ ಪರಿವಾರ ಈಗ ಎತ್ತುತ್ತಿರುವ ತಕರಾರಿನ ಸೊಲ್ಲಿನಲ್ಲಿ ಯಾವ ಪ್ರಾಮಾಣಿಕತೆಯೂ ಇಲ್ಲ. ಬಿ.ಜೆ.ಪಿ.ಗಳಲ್ಲದ, ಸಂಘಿಗಳಲ್ಲದ ಮೋದಿ ಅಭಿಮಾನಿಗಳು ಅವರು ಕಾಂಗ್ರೆಸ್ ನಲ್ಲಿರಲಿ, ಯಾವುದೇ ಗುಂಪಿನಲ್ಲಿರಲಿ ಅವರು ನಯವಂಚಕರು. ಬಿ.ಜೆ.ಪಿ. ಮೋದಿ ಬೇಕು. ಸ್ಥಳೀಯ ಬಿ.ಜೆ.ಪಿ. ಅಭ್ಯರ್ಥಿಗಳು ಬೇಡ ಎನ್ನುವ ಅವಕಾಶವಾದಿ ಡರ್ಪೋಕುಗಳು ಈ ಬಾರಿ ಲಜ್ಜೆಬಿಟ್ಟು ರಣಾಂಗಣಕ್ಕಿಳಿದಿದ್ದರೆ ಪರಿವಾರ ಸೋಲುವುದನ್ನು ಇಂಡಿಯಾ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿರಲಿಲ್ಲ. ನಾಯ್ಡು, ನಿತೀಶ್ ಕುಮಾರ್, ದೇವೇಗೌಡ, ಕುಮಾರಸ್ವಾಮಿ ಇಂಡಿಯಾ ಸೋಲಿಸಿ ಭಾರತವನ್ನು ಕೊಲೆಗಡುಕನ ಕೈ ಗೆ ಒಪ್ಪಿಸಿದ್ದಕ್ಕೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ. ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.