ಸಿದ್ಧಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಚರಂಡಿ ದುರಸ್ತಿ, ನೀರಿನ ಪೋಲು ತಡೆ ಹಾಗೂ ರಸ್ತೆ ನಿರ್ವಹಣೆಗಳನ್ನು ಅದ್ಯತೆಯ ಮೇಲೆ ಮಾಡಲು ಸೂಚಿಸಿದರು.
ಪ.ಪಂ. ನ ಹೊಸೂರು ೧೨,೧೩ ನೇ ವಾರ್ಡ್ ಮತ್ತು ಕೊಂಡ್ಲಿ ಭಾಗದ ರಸ್ತೆ ನಿರ್ವಹಣೆ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಸಭೆಯ ನಂತರ ಕೆಲವು ಪ್ರದೇಶಗಳ ಭೇಟಿ ಮಾಡಿದ ಶಾಸಕರು ಸ್ಥಳೀಯರು ತಮ್ಮ ಬಳಿ ದೂರು ನೀಡದಂತೆ ಜನರ ಅಹವಾಲುಗಳಿಗೆ ಸ್ಪಂದಿಸಲು ಆದೇಶಿಸಿ ಸಾರ್ವಜನಿಕರ ಸಹಕಾರದಿಂದ ತೆರಿಗೆ ವಸೂಲಾತಿಯನ್ನೂ ಹೆಚ್ಚಿಸಲು ಸಲಹೆ ನೀಡಿದರು.
ತಕ್ಷಣದ ಅನಿವಾರ್ಯತೆ, ಆಗಲೇಬೇಕಾದ ಅವಶ್ಯ ಕೆಲಸಗಳ ಬಗ್ಗೆ ಶೀಘ್ರ ಕಾರ್ಯಾರಂಭಕ್ಕೆ ಸೂಚಿಸಿದ ಶಾಸಕರು ಸರ್ಕಾರ, ಅಧಿಕಾರಿಗಳಿಂದ ಆಗಬೇಕಾದ ಕೆಲಸಗಳನ್ನು ಸಮಯ ಪಡೆಯದೆ ಮಾಡಿಕೊಡುವ ಭರವಸೆ ನೀಡಿದರು.