

ಹುಬ್ಬಳ್ಳಿ ಮೂಲದ ಕೊಟ್ರೇಶ ತನ್ನ ಸಂಬಂಧಿ ಅವಿವಾಹಿತೆಯೊಂದಿಗೆ ರಾತ್ರಿಯೆಲ್ಲಾ ಸುತ್ತಾಡಿ ನಂತರ ಸಿದ್ಧಾಪುರ ಸಮೀಪದ ಕಸ್ತೂರು ಬಳಿ ಅದೇ ಮಹಿಳೆಯೊಂದಿಗೆ ಜಗಳವಾಡಿ, ಬಲಾತ್ಕಾರಕ್ಕೆ ಪ್ರಯತ್ನಿಸಿದ ಘಟನೆಯೊಂದು ಕಳೆದ ರವಿವಾರ ಸಿದ್ಧಾಪುರದಲ್ಲಿ ನಡೆದಿದೆ. ರೇಣುಕಾ ಮಲ್ಲಪ್ಪ ಪಟ್ಟೇದ ನೀಡಿರುವ ದೂರಿನ ಪ್ರಕಾರ ಸಿ.ಆರ್.ಪಿ.ಎಫ್. ಯೋಧ ಕೊಟ್ರೇಶ ಧಾರವಾಡ ಜಿಲ್ಲೆಯ ಅಣ್ಣೀಗೇರಿ ಯವನಾಗಿದ್ದು ಈ ಯೋಧನ ಹೆಂಡತಿಯ ಬಾಣಂತನಕ್ಕೆ ಕೆಲಸಕ್ಕೆ ಹೋಗಿದ್ದ ಈ ಅವಿವಾಹಿತೆಗೆ ಹುಬ್ಬಳ್ಳಿಯಿಂದ ಸುಳ್ಳು ಕಾರಣ ಹೇಳಿ ಎತ್ತಾಕಿಕೊಂಡು ಬಂದ ಯೋಧ ಸಿದ್ಧಾಪುರದ ಕಸ್ತೂರು ಬಳಿ ಬಲಾತ್ಕಾರಕ್ಕೆ ಪ್ರಯತ್ನಿಸಿ ಕೊಲೆ ಯತ್ನ ಮಾಡಿದ ಎಂಬುದು ದೂರು.
ಸತ್ಯ- ವಾಸ್ತವ ನಿಗೂಢವಾದರೂ ಪೊಲೀಸ್ ದೂರಿನ ನಂತರ ಚರ್ಚೆಯಾದದ್ದೆಂದರೆ….. ಯೋಧ ಅವಿವಾಹಿತೆ ರೇಣುಕಾರನ್ನು ಉಪಾಯದಿಂದಲೋ ಸಮ್ಮತಿ ಪಡೆದೊ ಕರದುಕೊಂಡು ಹುಬ್ಬಳ್ಳಿಯಿಂದ ಸಿದ್ಧಾಪುರದ ವರೆಗೆ ನೂರಾರು ಕಿಲೋ ಮೀಟರ್ ಲಾಂಗ್ ರೈಡ್ ಮಾಡಿಸಿದ್ದಾನೆ. ನಶೆಯಲ್ಲಿ ಇಬ್ಬರ ನಡುವೆ ಆಗಬಾರದ್ದೆಲ್ಲಾ ಆಗಿಹೋಗಿದೆಕೊನೆಗೆ ಸ್ನೇಹಿತೆಯೋ, ದೂರದ ಸಂಬಂಧಿಯೋ ಆದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದಾಗ ಚಾಣಾಕ್ಷತನದಿಂದ ಬಚಾವಾದ ರೇಣುಕಾ ಪೊಲೀಸ್ ದೂರು ನೀಡಿದ್ದಾಳೆ.
ಸೇವೆಯಲ್ಲಿರುವ ಯೋಧ ಹೀಗೆ ಪರಿಚಿತ ಮಹಿಳೆಯನ್ನು ಅಟ್ಟಾಡಿಸಿ ಹೊಡೆದಿರುವುದು ಅಪರಾಧ. ಒಂದು ವೇಳೆ ಈ ಸ್ನೇಹದ ಜಗಳದ ವೇಳೆ ಪ್ರಾಣಾಪಾಯವಾಗಿದ್ದರೆ…. ಇದೇ ವ್ಯಭಿಚಾರಿ ಯೋಧ ಕೊಲೆಗಾರನಾಗುತಿದ್ದನಲ್ಲವೆ?
