


ಧರ್ಮಸ್ಥಳ ನಿತ್ಯಾನಂದ ಮಠದ ಆಶ್ರಯದಲ್ಲಿ ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ನಿರಂತರ ೩೬ ದಿನಗಳ ಸಾಂಸ್ಕೃತಿಕ ಹಬ್ಬ ನಡೆಸಲಾಗುತ್ತಿದೆ.
ಈ ಬಗ್ಗೆ ಇಂದು ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಕರೆದ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಲಾಯಿತು.
ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ತನ್ನ ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತವನ್ನು ಇಲ್ಲಿ ನಡೆಸುತ್ತಿದೆ.
ಜುಲೈ ೨೧ ರಿಂದ ಪ್ರಾರಂಭವಾಗುವ ಶ್ರೀಗಳ ಚಾತುರ್ಮಾಸ್ಯ ವೃತಾರಂಭದಿಂದ ಪ್ರಾರಂಭವಾಗಿ ಆಗಸ್ಟ್ ೩೦ರ ವರೆಗೆ ನಡೆಯುವ ಚಾತುರ್ಮಾಸದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ವೃತ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ೨೧ ಜುಲೈ ನಿಂದ ಆಗಸ್ಟ್ ೨೪ ರ ವರೆಗೆ ಪ್ರತಿದಿನ ಸಾಯಂಕಾಲ ನಿರಂತರ ೩೬ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಉತ್ಸವಗಳ ಅಂಗವಾಗಿ ಯಕ್ಷಗಾನ, ಧಾರ್ಮಿಕ ಪಠಣಗಳು ನಡೆಯಲಿದ್ದು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕಲಾವಿದರು, ತಂಡಗಳು ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಕಲಾವಿದರು,ಮೇಳಗಳು ಭಾಗವಹಿಸಲಿವೆ.
ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡಿನ ಜನಪ್ರತಿನಿಧಿಗಳ ತಂಡವೇ ಪಾಲ್ಗೊಳ್ಳಲಿದೆ.

