

ವಿಪರೀತ ಮಳೆಯ ಕಾರಣದಿಂದ ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡು ದಿವಸಗಳ ಶಾಲಾ ರಜೆ ಘೋಶಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ವಾಡಿಕೆಯ ೨೬೦೦ ಮಿ.ಮೀ ವಾರ್ಷಿಕ ಮಳೆಯಲ್ಲಿ ೨೦೨೪ ರ ಜೂನ್-ಜುಲೈ ತಿಂಗಳುಗಳಲ್ಲಿ ೧೪೦೦ ಮಿ.ಮೀ. ಮಳೆ ಸುರಿದಿದೆ. ಈ ವಾರದ ವಿಪರೀತ ಮಳೆಯ ಕಾರಣದಿಂದ ಸೋಮುವಾರ- ಮಂಗಳವಾರ ಮಳೆ ರಜೆಯಾದರೆ ಬುಧವಾರ ಸಾರ್ವತ್ರಿಕ ಸರ್ಕಾರಿ ರಜೆ ಇದೆ. ಕರಾವಳಿ, ಮಲೆನಾಡಿನ ಉತ್ತರ ಕನ್ನಡ, ಶಿರಸಿ ಶೈಕ್ಷಣಿಕ ಜಿಲ್ಲೆಸೇರಿದಂತೆ ಈ ಭಾಗದಲ್ಲಿ ಸೋಮುವಾರ- ಮಂಗಳವಾರ ಮಳೆ ರಜೆಯಾದರೆ ಬುಧವಾರ ಸರ್ಕಾರಿ ರಜೆ ಹಾಗಾಗಿ ಸೋಮುವಾರದ ಮಳೆ ರಜೆ ಪಡೆಯದವರಿಗೆ ಈ ವಾರದ ಎರಡು ರಜೆಗಳಾದರೆ, ಸೋಮುವಾರ, ಮಂಗಳವಾರ ಮಳೆ ರಜೆ ಪಡೆದವರಿಗೆ ಸರ್ಕಾರಿ ರಜೆ ಸೇರಿ ಒಟ್ಟೂ ಮೂರು ರಜೆ!
