ಗುರುವಾರ ಮುಗದೂರಿನಲ್ಲಿ ಮಂತ್ರಮಾಂಗಲ್ಯ ಮದುವೆ

ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರ ಪಾಲಿಗೆ ಆಶ್ರಯ ತಾಣವಾದ ಸಿದ್ದಾಪುರ ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ವಾರ್ಷಿಕೋತ್ಸವ ಹಾಗೂ ಮಂತ್ರ ಮಾಂಗಲ್ಯ ವಿವಾಹ ಮಹೋತ್ಸವ ಜುಲೈ 18 ರಂದು ಜರುಗಲಿದೆ.
ಈ ಕುರಿತು ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಕಳೆದ 10 ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿದ್ದು ಅನಾಥ ಸ್ಥಿತಿಯಲ್ಲಿರುವವರು, ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಅಸಹಾಯಕರ ಸೇವೆ ಮಾಡುತ್ತಿದ್ದೇವೆ. ಪ್ರತಿ ವರ್ಷದಂತೆ ಜುಲೈ 18 ರಂದು ಮಧ್ಯಾಹ್ನ 12 ಗಂಟೆಗೆ ಆಶ್ರಮದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಅನಾಥ ಸ್ಥಿತಿಯಲ್ಲಿ ಅನಾರೋಗ್ಯ ಪೀಡಿತರಾಗಿ ನಮ್ಮ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಹೊನ್ನವಾರದ ದಿವ್ಯಾ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಈರಣ್ಣ ಗುಣಮುಖರಾಗಿದ್ದು, ಕಳೆದ ಕೆಲ ತಿಂಗಳಿನಿಂದ ಒಬ್ಬರನೊಬ್ಬರು ಪ್ರೀತಿಸುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಇಬ್ಬರಿಗೂ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಏರ್ಪಡಿಸಲಾಗಿದೆ. ತಾಲೂಕಿನ ಜನತೆ ಈ ಸರಳ ಸಮಾರಂಭಕ್ಕೆ ಆಗಮಿಸಿ ಆಶೀರ್ವದಿಸುವಂತೆ ನಾಗರಾಜ ನಾಯ್ಕ ಕೋರಿದ್ದಾರೆ.
ಈ ವೇಳೆ ಆಶ್ರಮದ ಮೇಲ್ವಿಚಾರಕಿ ಮಮತಾ ನಾಯ್ಕ ಹಾಜರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿಕ್ಷಕರ ದಿನಾಚರಣೆ… ರಂಜಿಸಿದ ಶಿಕ್ಷಕಿಯರು

ಸಿದ್ದಾಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮೂಹ ಗಾನ, ಡೊಳ್ಳು ನೃತ್ಯಗಳು ಪ್ರೇಕ್ಷಕರನ್ನು...

ಘನತೆ, ಗೌರವದಿಂದ ಯಾವ ಎತ್ತರಕ್ಕೂ ಹೋಗಬಹುದು… ಭೀಮಣ್ಣ ನಾಯ್ಕ

.. ಶಿ ಕ್ಷಕರು ಘನತೆ, ಗೌರವದಿಂದಿದ್ದರೆ ಯಾವ ಎತ್ತರಕ್ಕೂ ಏರಬಹುದು ಎಂದು ಡಾ. ರಾಧಾಕೃಷ್ಣನ್‌ ತೋರಿಸಿದ್ದಾರೆ ಎಂದು ಬಣ್ಣಿಸಿರುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ...

ಶಿಕ್ಷಕರ ದಿನಾಚರಣೆ: 31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ; ಪಟ್ಟಿ ಬಿಡುಗಡೆ ಮಾಡಿದ Education department

ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಶಿಕ್ಷಕರ ಪಟ್ಟಿ ಬಿಡುಗಡೆಯಾಗಿದ್ದು ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ 25 ಸಾವಿರ...

25ನೇ ವರ್ಷಕ್ಕೆ ಕಾಲಿಟ್ಟ ಒಡ್ಡೋಲಗ ಹಿತ್ತಲಕೈ,ಮರುಕಳಿಸಿದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ –

ಸಿದ್ದಾಪುರ. ತಾಲೂಕಿನ ಕ್ರಿಯಾಶೀಲ ನಾಟಕ ತಂಡವಾದ ಒಡ್ಡೋಲಗ ಹಿತ್ತಲಕೈ ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಯು ಕಳೆದ ವಾರಾಂತ್ಯದಲ್ಲಿ ಕವಲಕೊಪ್ಪದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *