



ಕಾರವಾರ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಂಚಿಕೇರಿ ಬಳಿ ಮರವೊಂದು ಸ್ಕೂಟರ್ ಸವಾರನ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕಬ್ಬಿ ನಗದ್ದೆಯ ವಿನಾಯಕ ಮಂಜುನಾಥ ಗಡಿಗ ಎಂದು ಗುರುತಿಸಲಾಗಿದೆ. ಕರಾವಳಿ, ಮಲೆನಾಡುಗಳಲ್ಲಿ ಮಳೆ-ಗಾಳಿ ರಭಸದಿದ ಮುಂದುವರಿದಿರುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ-ಗಾಳಿ ಹಾನಿ ಮುಂದುವರಿದಿದ್ದು ಸಿದ್ಧಾಪುರ ನೆಜ್ಜೂರಿನಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದು ಇಬ್ಬರಿಗೆ ಸಾದಾ ಗಾಯ ಮತ್ತು ಒಬ್ಬ ಬಾಲಕನಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ನೆಜ್ಜೂರಿನ ೬೦ ವರ್ಷದ ಖಲೀಲ್ ಮೈದೀನ್ ಖಾನ್ ಮತ್ತು ಅವರ ಇಬ್ಬರು ಮೊಮ್ಮಕ್ಕಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಖಲೀಲ್ ಖಾನ್ ಮತ್ತು ಅಯೂಬ್ ಖಾನ್ ಸಾಗರ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಇನ್ನೊಬ್ಬ ಗಾಯಾಳು ಅಯಾನ್ ಖಾನ್ ಅಮ್ಜದ್ ಖಾನ್ ಶಿವಮೊಗ್ಗ ಮ್ಯಾಕ್ಸ್ ಆಸ್ಫತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಉತ್ತರ ಕನ್ನಡ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಬಾಧಿತರ ಚಿಕಿತ್ಸೆ ಇತ್ಯಾದಿ ಸೂಕ್ತ ವ್ಯವಸ್ಥೆಗೆ ಸಾಮಾಜಿಕ ಮುಖಂಡ ನಾಶಿರ್ ವಲ್ಲಿಖಾನ್ ಆಗ್ರಹಿಸಿದ್ದಾರೆ.
