ರಸ್ತೆಯ ಮೇಲೆ ಅರ್ಧ ಕಡಿದ ಮರದ ಬೊಡ್ಡೆಗೆ ಕಾರ್ ಬಡಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಿದ್ಧಾಪುರ ಆಡುಕಟ್ಟಾ ಬಳಿ ನಡೆದಿದೆ. ಮೃತವ್ಯಕ್ತಿ ಯನ್ನು ಹಲಗೇರಿಯ ೫೯ ವರ್ಷದ ದೇವರಾಜ್ ಅಜ್ಯಯ್ಯ ನಾಯ್ಕ ಎಂದು ಗುರುತಿಸಲಾಗಿದೆ.
ದೇವರಾಜ್ ನಾಯ್ಕ ಕುಟುಂಬ ಹಲಗೇರಿಯಿಂದ ಆಡುಕಟ್ಟಾ ಮಾರ್ಗವಾಗಿ ಸಾಗರ ಕಡೆ ತೆರಳುತಿದ್ದಾಗ ಅರ್ಧ ಕಡಿದ ಮರದ ಬೊಡ್ಡೆಗೆ ಬಡಿಯಿತು. ಆಗ ಆದ ಗಂಭೀರ ಗಾಯದಿಂದ ದೇವರಾಜ್ ನಾಯ್ಕ ಗಂಭೀರವಾಗಿ ಗಾಯಗೊಂಡು ಸಿದ್ಧಾಪುರ ಆಸ್ಫತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು.
ಕಾರ್ ಚಲಾಯಿಸುತಿದ್ದ ಹೇಮಂತಕುಮಾರ್ ಹಾಗೂ ಜಾನಕಿ ನಾಯ್ಕ (ಮೃತರ ಪತ್ನಿ) ರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅತಿಯಾದ ಮಳೆಯ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.