ಸಿದ್ಧಾಪುರ ತಾಲೂಕಿನ ಮಳೆ ಸಂತ್ರಸ್ತರು,ಪ್ರವಾಹ ಬಾಧಿತರಿಗೆ ಸೂಕ್ತ ಪರಿಹಾರ ನೀಡಲು ರಾಜ್ಯಪಾಲರಿಗೆ ಮನವಿ ಮೂಲಕ ಆಗ್ರಹಿಸಿರುವ ಬಿ.ಜೆ.ಪಿ. ರಾಜ್ಯ ಸರ್ಕಾರ ಬಾಧಿತರಿಗೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದೆ.
ಸಿದ್ಧಾಪುರ ತಹಸಿಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿರುವ ಬಿ.ಜೆ.ಪಿ. ಮಳೆ ಸಂತ್ರಸ್ತರಿಗೆ ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್. ಪರಿಹಾರ ಮಾತ್ರ ನೀಡುತ್ತಿದೆ. ಬಾಧಿತರಿಗೆ ನೀಡುತ್ತಿರುವ ಪರಿಹಾರ ಅಲ್ಪವಾಗಿದ್ದು ಅದನ್ನೂ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿರುವ ಬಿ.ಜೆ.ಪಿ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ಕ್ರಮಜರುಗಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದೆ.