


ಸಿದ್ಧಾಪುರ ಹೆಗ್ಗೋಡುಮನೆ ಕೊಲೆ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ೨೫ ಸಾವಿರ ದಂಡ ಮತ್ತು ಸಂತ್ರಸ್ತ ಮಕ್ಕಳಿಗೆ ೫೦ ಸಾವಿರ ರೂಪಾಯಿ ಪರಿಹಾರ ಸೂಚಿಸಿ ತೀರ್ಪು ನೀಡಿದೆ.
ಆರೋಪಿ ಮಂಜುನಾಥ ಕೆರಿಯಾ ಚೆನ್ನಯ್ಯ ಮೇ ೨೦, ೨೦ ೨೨ ರಂದು ಕ್ಷುಲ್ಲಕ ಕಾರಣಕ್ಕೆ ಹೆಂಡತಿ ನಾಗರತ್ನ ಳನ್ನು ಕತ್ತಿಯಿಂದ ಕಡಿದು ಕೊಂದಿದ್ದನು. ಈ ಪ್ರಕರಣ ದಾಖಲಿಸಿಕೊಂಡ ಸಿದ್ಧಾಪುರ ಪೊಲೀಸರು ಪಿ.ಆಯ್. ಕುಮಾರ ಕೆ ನೇತೃತ್ವದಲ್ಲಿ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನಗರ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ೨೫ ಸಾವಿರ ದಂಡ ಹೇರಿ ತೀರ್ಪು ನೀಡಿದ್ದಾರೆ.
ಮೃತ ಮಹಿಳೆಯ ಮಗಳು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಆಗಿದ್ದಳು.
ಮೇ ೨೦ ೨೦೨೨ ರ ಬೆಳಿಗ್ಗೆ ಸಮಯದಲ್ಲಿ ಪಕ್ಕದ ಮನೆಯವರೊಂದಿಗೆ ಮಾತನಾಡುತಿದ್ದ ನಾಗರತ್ನ ಚೆನ್ನಯ್ಯ ಬಳಿ ಗಂಡ ಮಂಜುನಾಥ ಆಧಾರ ಕಾರ್ಡ್ ಕೇಳಿದ್ದನ್ನು ಕೊಡಲಿಲ್ಲ ಎನ್ನುವ ಕಾರಣಕ್ಕೆ ಕುಡಿದು ಜಗಳ ತೆಗೆದು ಬೆಳಿಗ್ಗೆ ೧೧ ಗಂಟೆಯ ಸಮಯಕ್ಕೆ ಹೂವು ಹೆಣೆಯುತಿದ್ದ ನಾಗರತ್ನಳ ಕುತ್ತಿಗೆಗೆ ಕತ್ತಿಯಿಂದ ಹೊಡೆದು ನಾಗರತ್ನಳನ್ನು ಬಚಾವು ಮಾಡಲು ಬಂದ ಮಗಳ ಎದುರೇ ಆರೋಪಿ ಮಂಜುನಾಥ ಹೆಂಡತಿಯ ಕತ್ತು ಕತ್ತರಿಸಿ ಪರಾರಿಯಾಗಿದ್ದ. ಸ್ಥಳೀಯರ ಸಹಕಾರದಿಂದ ಆಸ್ಫತ್ರೆಗೆ ಸಾಗಿಸುವ ವೇಳೆ ನಾಗರತ್ನ ಸಾವನ್ನಪ್ಪಿದ್ದಳು.
