ಸಿದ್ದಾಪುರ
ಒಂದು ಸೂರು ನೂರು ಸೇವೆ ಧ್ಯೇಯವಾಕ್ಯದಡಿ ಶಿರಸಿ ವಿಭಾಗದ ಅಂಚೆ ಇಲಾಖೆ ವತಿಯಿಂದ ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಆ.೧೨ರಿಂದ ೧೭ರವರೆಗೆ ಅಂಚೆ ಸಂಪರ್ಕ ಅಭಿಯಾನ ಮತ್ತು ಬೃಹತ್ ಆಧಾರ್ ತಿದ್ದುಪಡಿ ಮೇಳವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿದ್ದಾಪುರ ಮುಖ್ಯ ಅಂಚೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.