

ತೆಂಗಿನ ಹ್ಯಾಡಾ ಬಿದ್ದು ವಿದ್ಯುತ್ ತಂತಿ ತುಂಡಾದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತನಾದ ದುರ್ಘಟನೆ ಸಿದ್ಧಾಪುರ ಮನ್ಮನೆಯಲ್ಲಿ ಸೋಮುವಾರ ಸಾಯಂಕಾಲ ನಡೆದಿದೆ.
ಮೆಣಸಿಯಿಂದ ಮನೆಮನೆಗೆ ಕೂಲಿ ಹಣ ತರಲು ತೆರಳಿದ್ದ ದೇವರಾಜ್ ರಾಮಾ ನಾಯ್ಕ ತನ್ನ ಹಣ ಪಡೆದು ಮನೆಮನೆಯ ರಮೇಶ್ ನಾಯ್ಕರ ಮನೆಯಿಂದ ಮೆಣಸಿಗೆ ಮರಳುತಿದ್ದಾಗ ಮನಮನೆಯ ಕಾನಕೇರಿ ಬಳಿ ತೆಂಗಿನ ಮರದ ಟೊಂಗೆ ಬಿದ್ದು ವಿದ್ಯುತ್ ಮಾರ್ಗ ತುಂಡಾಗುತ್ತಲೇ ದೇವರಾಜ್ ಮೈ ಮೇಲೆ ಬಿದ್ದಿದೆ. ಹೀಗೆ ತಗುಲಿದ ಕರೆಂಟ್ ಶಾಕ್ ನಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಫತ್ರೆಗೆ ಸಾಗಿಸಿದರಾದರೂ ವೈದ್ಯರು ಅವರು ಮೃತರಾಗಿರುವುದನ್ನು ಧಡಪಡಿಸಿದರು. ಈ ಬಗ್ಗೆ ಮೃತ ದೇವರಾಜ್ ತಂದೆ ದೂರು ದಾಖಲಿಸಿದ್ದಾರೆ.
