


ಸಿದ್ದಾಪುರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು ೧೧೨ ವ್ಯವಸ್ಥೆ ಸರಿ ಇರದಿರುವುದೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಆ.೧೨ ರ ಸೋಮುವಾರ ಅವರಗುಪ್ಪಾ ವಿಠ್ಠಲ್ ನಾಯ್ಕರ ಮನೆಯ ಲಕ್ಷಾಂತರ ಮೌಲ್ಯದ ಸಿಪ್ಪೆ ಗೋಡು ಅಡಿಕೆ ಕದ್ದ ಕಳ್ಳರು ಕಳ್ಳತನಕ್ಕೆ ರಾತ್ರಿ ಸಮಯ ಬಳಸಿಕೊಂಡಿದ್ದಾರೆ.

ಇದೇ ತಿಂಗಳು ಕಡಕೇರಿ ಉಮೇಶ್ ನಾಯ್ಕರ ಮನೆಯ ಸಿಪ್ಪೆಗೋಟು ಕದ್ದ ಕಳ್ಳರ ಪತ್ತೆ ಈ ವರೆಗೆ ಆಗಿಲ್ಲ.

ಸಿದ್ದಾಪುರದ ಗ್ರಾಮೀಣ ಪ್ರಧೇಶ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಡಿಕೆ, ಬಂಗಾರ ಕಳ್ಳತನಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ೧೧೨ ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಪೊಲೀಸ್ ಸಿಬ್ಬಂದಿಗಳನ್ನು ತಾಲೂಕಿನಿಂದ ತಾಲೂಕಿಗೆ ಬದಲಿಸಿ ನೈತಿಕ ಸ್ಥೈರ್ಯ ಕುಂದಿಸುತ್ತಿರುವುದು ಈ ಬೆಳವಣಿಗೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.


