


ಸೇತುವೆ ಕುಸಿತ: ಕೊನೆಗೂ ಒಂದು ವಾರದ ನಂತರ ಕಾಳಿ ನದಿಯಿಂದ ಲಾರಿ ಹೊರತೆಗೆದ ಜಿಲ್ಲಾಡಳಿತ
ಆಗಸ್ಟ್ 7ರಂದು ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಆಗಸ್ಟ್ 14 ರಂದು ಟ್ರಕ್ ಅನ್ನು ನದಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು.


ಲಾರಿ ಹೊರತೆಗೆದ ಜಿಲ್ಲಾಡಳಿತ
ಕಾರವಾರ: ಕಾರವಾರದ ಹೊರವಲಯದಲ್ಲಿ 42 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದು ಕಾಳಿ ನದಿಗೆ ಬಿದ್ದಿದ್ದ ಟ್ರಕ್ ಅನ್ನು ಒಂದು ವಾರದ ನಂತರ ಗುರುವಾರ ಉತ್ತರ ಕನ್ನಡ ಜಿಲ್ಲಾಡಳಿತ ಕೊನೆಗೂ ಹೊರತೆಗೆದಿದೆ.
ಆಗಸ್ಟ್ 7ರಂದು ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಆಗಸ್ಟ್ 14 ರಂದು ಟ್ರಕ್ ಅನ್ನು ನದಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ದಿನಗಳ ಕಾರ್ಯಾಚರಣೆ ಬಳಿಕ ಕೊನೆಗೂ ಗುರುವಾರ ಸಂಜೆ ಕ್ರೇನ್ ಮೂಲಕ ಲಾರಿಯನ್ನು ಹೊರ ತರಲಾಗಿದೆ.
ಯಲ್ಲಾಪುರ ಮೂಲದ ಕಂಪನಿಗೆ ಸೇರಿದ ಕ್ರೇನ್ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಸ್ಥಳೀಯ ಸಿದ್ದಿ ಯುವಕ ಸಣ್ಯಾ ಮತ್ತು ಈಶ್ವರ ಮಲ್ಪೆ ಮತ್ತು ತಂಡ ಲಾರಿಗೆ ಹಗ್ಗ ಕಟ್ಟಲು ನೀರಿಗೆ ಧುಮುಕಿದ್ದರು. ಡೈವರ್‌ಗಳು ಮತ್ತು ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಪೊಲೀಸರು ಒಂಬತ್ತು ಗಂಟೆಗಳ ಕಾರ್ಯಾಚರಣೆಯ ನಂತರ ಟ್ರಕ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. (kp.c)
