ನಾಟಿ ಹಬ್ಬವೊಂದು ಗಮನ ಸೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಂಚಳ್ಳಿಯಲ್ಲಿ. ಸಾಂಪ್ರದಾಯಿಕ ಹಬ್ಬಗಳನ್ನು ಕೇಳಿ, ನೋಡಿರುವ ಜನರಿಗೆ ಇದೇನು ನಾಟಿ ಹಬ್ಬ ಎನ್ನುವ ಪ್ರಶ್ನೆ ಏಳಬಹುದು. ಹೌದು ಈ ಕೆಳಗಿನ ವಿಡಿಯೋ ಗಳನ್ನು ನೋಡಿ. ವೈಟ್ ಕಾಲರ್ ಜಾಬ್ ಮಾಡುವ ಜನರು ಗದ್ದೆಗಿಳಿದಂತೆ ಕಾಣುತ್ತಿದೆಯಲ್ಲವೆ?
ಹೌದು ನಿಮ್ಮ ಗ್ರಹಿಕೆ ಸರಿ ಇಲ್ಲಿರುವ ಬಹುತೇಕ ಜನರು ಪ್ರತಿದಿನ ತಮ್ಮ ಕಚೇರಿಗಳಲ್ಲಿ ಕೂತು ಆಧುನಿಕ ವಸ್ತ್ರ ತೊಟ್ಟು ಕ್ಷೇತ್ರದಲ್ಲಿ ಓಡಾಡುವವರೇ. ಇವರಿಗೆ ಕೆಸರ ಗದ್ದೆಗೆ ಇಳಿಸಿದ್ದು ಶಿರಸಿಯ ಸ್ಕೋಡವೇಸ್ ಸಂಸ್ಥೆ. ಸರ್ಕಾರೇತರ ಸಂಸ್ಥೆಯಾಗಿರುವ ಸ್ಕೋಡವೇಸ್ ರೈತ ಉತ್ಫಾದಕ ಕಂಪನಿ, ಸರ್ಕಾರಿ ಯೋಜನೆಗಳ ಅನುಷ್ಠಾನ ಮಾಡುವ ಸಂಸ್ಥೆ.
ಪರಿಸರ ರಕ್ಷಣೆ, ಬೀಜ ಸಂರಕ್ಷಣೆ, ಸಾವಯವ ಕೃಷಿ, ಸಹಜ ಕೃಷಿ ಉತ್ತೇಜಿಸುವ ಈ ಸಂಸ್ಥೆ ಸರ್ಕಾರ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳ ಸಹಕಾರದಿಂದ ತಮ್ಮ ಸರಸ್ವತಿ ಫಾರ್ಮ್ ನಲ್ಲಿ ನಾಟಿ ಹಬ್ಬ ಆಯೋಜಿಸಿತ್ತು. ನಾಟಿ ಹಬ್ಬದಲ್ಲಿ ಪಾಲ್ಗೊಂಡ ಅನೇಕರು ಇಲ್ಲಿ ರೈತರಾಗಿ, ಕೃಷಿ ಅಧ್ಯಯನಾರ್ಥಿಗಳಾಗಿ ಇಲ್ಲಿ ತೊಡಗಿಕೊಂಡರು.
ಈ ವಿನೂತನ ಪ್ರಯೋಗಕ್ಕೆ ಪೂರಕವಾಗಿ ಅಗೆಪೂಜೆ, ಗೋಗ್ರಾಸ ಅರ್ಪಣೆ ಆಯೋಜಿಸಿದ್ದ ಸಂಸ್ಥೆ ಕೃಷಿ ಸಾಂಪ್ರದಾಯಿಕತೆಗೆ ಒತ್ತು ಕೊಟ್ಟಿತ್ತು. ಜೊತೆಗೇ ಇಲ್ಲಿ ಕೃಷಿಯ ಆಧುನಿಕರಣವನ್ನೂ ಕಾಣಬಹುದಿತ್ತು. ಸಾಂಪ್ರದಾಯಿಕ ಮತ್ತು ಯಾಂತ್ರಿಕ ಕೃಷಿ ಪರಿಚಯಿಸುತ್ತಲೇ ಯುವಜನರಲ್ಲಿ ಕೃಷಿ ಕಾಯಕದ ಮಹತ್ವ ಮತ್ತು ಸೊಗಸು ಪರಿಚಯಿಸುವುದು ಸ್ಕೋಡ್ ವೇಸ್ ನ ಉದ್ದೇಶವಾಗಿತ್ತು. ನೂರಾರು ಜನರು ಪಾಲ್ಗೊಂಡು ಈ ನಾಟಿ ಹಬ್ಬವನ್ನು ಸಂಬ್ರಮಿಸಿದ್ದು ಈ ದಿನದ ವಿಶೇಶವಾಗಿತ್ತು.