


ಸಾಮಾಜಿಕ ಪರಿವರ್ತನೆ ವಿಚಾರದಲ್ಲಿ ನಾರಾಯಣಗುರುಗಳು ಮತ್ತು ದೇವರಾಜ್ ಅರಸು ಒಂದೇ ನಾಣ್ಯದ ಎರಡು ಮುಖಗಳು ಎಂದು ಗ್ಯಾ ರಂಟಿ ಅನುಷ್ಠಾನ ಸಮೀತಿ ತಾಲೂಕಾ ಅಧ್ಯಕ್ಷ ಕೆ. .ಜಿ.ನಾಗರಾಜ್ ಹೇಳಿದ್ದಾರೆ. ಸಿದ್ಧಾಪುರದ ತಾ.ಪಂ. ಸಭಾಭವನದಲ್ಲಿ ನಡೆದ ದೇವರಾಜ್ ಅರಸು ಮತ್ತು ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳು ನೈತಿಕ ಶಕ್ತಿ ಕೊಟ್ಟರೆ, ದೇವರಾಜ್ ಅರಸು ಆರ್ಥಿಕ ಶಕ್ತಿ ತುಂಬಿದರು ಇವು ಸಾಮಾಜಿಕ ಪರಿವರ್ತನೆಯ ದಾರಿಗಳು ಎಂದರು.

ವಿಶೇಶ ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಸಾಧಕರನ್ನು ಸ್ಮರಿಸಲು ಒಂದು ನೆಪ ಬೇಕು ಇಬ್ಬರು ಸಾಧಕರ ಜನ್ಮದಿನಗಳು ಒಂದೇ ದಿನ ಬಂದಿದ್ದು ಕಾಕತಾಳೀ ಯವಾದರೂ ಇಬ್ಬರೂ ಭೂಮಿತೂಕದ ಸಾಧಕರಾಗಿರುವುದು ವಿಶೇಶ ಎಂದರು.
ಇದೇ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿಭಾವಂತರು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

