


ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ೨೦೨೩-೨೪ ಆರ್ಥಿಕ ವರ್ಷದಲ್ಲಿ ೪ ಕೋಟಿ,೩೪ ಲಕ್ಷ ೧೮ ಸಾವಿರ ೬೨೫ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಈ ಲಾಭದಲ್ಲಿ ಶೇರುದಾರರಿಗೆ ಶೇ.೧೫ ಡಿವಿಡೆಂಟ್ ಕೊಡಲು ನಿರ್ಧರಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಆಡಳಿತ ಮಂಡಳಿ ಆ. ೨೪ ರ ಶನಿವಾರ ಮಧ್ಯಾಹ್ನ ಮೂರುಗಂಟೆಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯುವ ವಾರ್ಷಿಕ ಸಭೆಗೆ ಸದಸ್ಯರನ್ನು ಆಹ್ವಾನಿಸಿದೆ.

ಸಂಘದ ವಾರ್ಷಿಕ ವ್ಯವಹಾರ, ಆಯವ್ಯಯಗಳ ಕುರಿತು ವಿವರ ನೀಡಿದ ಆಡಳಿತ ಮಂಡಳಿ ರೈತರ ಸಹಕಾರ,ಪ್ರೋತ್ಸಾಹದಿಂದ ಸಂಘ ಪ್ರಗತಿಯಲ್ಲಿದ್ದು ಸದಸ್ಯರ ಹಿತಕ್ಕಾಗಿ ಸಂಘ ಮತ್ತು ಸದಾರ್ವಜನಿಕವಾಗಿ ಮಾಡಿದ ಕೆಲಸ, ಹೋರಾಟಗಳ ಬಗ್ಗೆ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ವಿವರಿಸಿದರು.
ಬೆಳೆನಷ್ಟ, ರೋಗ ಬಾಧೆಗೆ ಸಿಲುಕಿ ನಲುಗುತ್ತಿರುವ ರೈತರ ನೆರವಿಗೆ ಬರಲು ಸ್ಥಳೀಯ ಶಾಸಕ ಭೀಮಣ್ಣರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದಾಗಿ ತಿಳಿಸಿದರು.
