ಸಾಲು ಸಾಲು ಸೋಲುಗಳ ನಂತರ ಕನ್ನಡ ಸಿನಿ ದುನಿಯಾದಲ್ಲಿ ಮುಂಗಾರುಮಳೆ ಮತ್ತೆ ಸುರಿಯುತ್ತಿರುವಂತಿದೆ. ಇದೇ ತಿಂಗಳು ಬಿಡುಗಡೆಯಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಫಸಲಿನ ನಿರೀಕ್ಷೆ ಮೂಡಿಸುತ್ತಿವೆ.
ಕೃಪ್ರಸ ಚಿತ್ರ ಶ್ರೀಮಂತರ ಅದ್ಧೂರಿ ಚಿತ್ರ, ನಾಯಕ ಕೃಷ್ಣ ಕೃಷ್ಣ ಸಮೂಹದ ಮುಖ್ಯಸ್ಥ ಇರುವುದೆಲ್ಲವ ಬಿಟ್ಟು ಆಶ್ರಮದೆಡೆಗೆ ನಡೆಯುವ ಕೃಷ್ಣ ಅಲ್ಲಿಯ ಮಾನವೀಯತೆಗೆ ಮರುಳಾಗುತ್ತಾನೆ! (ರೆ). ಮಧ್ಯದಲ್ಲಿ ದ್ವೇಶದ ಫ್ಲಾಶ್ ಬ್ಯಾಕ್ ಚಿತ್ರದಲ್ಲಿ ಶ್ರೀಮಂತಿಕೆಯನ್ನು ಒದೆಯುವ ಕೃಷ್ಣ ಆಶ್ರಮ, ಮಂತ್ರಮಾಂಗಲ್ಯ, ಸಾಮೂಹಿಕ ವಿವಾಹಕ್ಕೆ ಮುನ್ನುಡಿ ಬರೆಯುತ್ತಾನೆ.
ಚಿತ್ರ ವಿಭಿನ್ನವಾಗಿ ನಿಲ್ಲುವುದೇ ಇಲ್ಲಿ…. ಶೀಮಂತ ಉದ್ಯಮಿ ಸರಳ ಮನಸ್ಸಿಗೆ ಮನಸೋಲುತ್ತಾನೆ ಅದ್ಧೂರಿ ಮದುವೆ ಪ್ರತಿಷ್ಠೆಳಿಗೆ ಮಣೆ ಹಾಕದೆ ಮಂತ್ರಮಾಂಗಲ್ಯ ಪ್ರತಿಪಾದಿಸುತ್ತಾನೆ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಾನೆ. ಮೌಲ್ಯದ ಮೂಲಕ ಜನಸಾಮಾನ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಈ ಪ್ರಯತ್ನ ಚಿತ್ರವನ್ನು ಮೇಲಕ್ಕೇರಿಸಿದೆ. ಉಳಿದಂತೆ ಮಸಾಲೆ, ಕಾಮಿಡಿ ಕಲಸುಮೇಲುಆಗರ ಈ ಚಿತ್ರದ ನಾಯಕ ಮುಂಗಾರು ಮಳೆಯ ಹೀರೋನಂತೆ ಪಟಪಟನೆ ಮಾತನಾಡುತ್ತಾನೆ. ಈತನೂ ಹಣ ದೌಲತ್ತು ಮರೆತು ಮನುಷ್ಯತ್ವ ಹುಡುಕುತ್ತಾನೆ. ಪ್ರತಿಕಾರ, ಸೇಡು ಹೊತ್ತುಕೊಂಡು ಕುಣಿಯುವುದಿಲ್ಲ. ಸ್ವಲ್ಪ ಸೈನ್ಸು, ವೈದ್ಯಕೀಯ ಮಾಹಿತಿಪೂರ್ಣ ಇಷ್ಟು ಸಾಕಲ್ಲವೆ ಸಿನೆಮಾ ಗೆಲ್ಲಲು. ಹಲವು ಸೋಲುಗಳು ಈ ಸಿಂಪಲ್ ಫಿಲಾಸಫಿ ಮರೆತ ಪರಿಣಾಮ. ಕೃಷ್ಣಂ ಪ್ರಣಯ ಸಖಿ ಕುಟುಂಬ ಸಹಿತ ನೋಡಿ ರಿಫ್ರೆಶ್ ಆಗಲು ಒಂದು ಸದಾವಕಾಶ.