


ಮನೆ,ಕಛೇರಿಗಳ ಮುಂದಿರುತ್ತಿದ್ದ ಬೆಲೆಬಾಳುವ ಸೋಲಾರ್ ಬ್ಯಾಟರಿಗಳನ್ನು ಕಳ್ಳತನ ಮಾಡುತಿದ್ದ ಇಬ್ಬರು ಯುವಕರನ್ನು ಹೆಡೆಮುರಿ ಕಟ್ಟಿದ ಸಿದ್ಧಾಪುರ ಪೊಲೀಸರು ಅವರಿಂದ ಹಲವು ಬ್ಯಾಟರಿಗಳು ಮತ್ತು ಕಳ್ಳತನಕ್ಕೆ ಬಳಸುತಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಯುವ ಕಳ್ಳರನ್ನು ಕಾನಸೂರಿನ ಮಹಮ್ಮದ್ ಕೈಫ್ ಮತ್ತು ಶ್ರೀಧರ ಆಚಾರಿ ಎಂದು ಗುರುತಿಸಲಾಗಿದೆ.

ಮಹಮ್ಮದ್ ಕೈಫ್ ಅಬೂಬಕರ್ ಕಾನಸೂರಿನ ವಿದ್ಯಾರ್ಥಿಯಾಗಿದ್ದರೆ ಶ್ರೀಧರ ಆಚಾರಿ ವೆಲ್ಡಿಂಗ್ ಕೆಲಸ ಮಾಡುವ ಕಾನಸೂರು ಬಾಳೇಸರದ ಯುವಕ.
ಈ ಇಬ್ಬರು ಸ್ನೇಹಿತರು ಸಿದ್ಧಾಪುರ ಹಾರ್ಸಿಕಟ್ಟಾ ವಾಜಗದ್ದೆಯ ದೇವಸ್ಥಾನದ ಸೋಲಾರ್ ಬ್ಯಾಟರಿ ಹಾಗೂ ಸಿದ್ದಾಪುರ ಪ.ಪಂ. ನ ನೆಹರೂ ಮೈದಾನದ ಸೋಲಾರ್ ಬ್ಯಾಟರಿಗಳನ್ನು ಎಗರಿಸಿದ್ದರು.

ಗ್ರಾ.ಪಂ. ಹಾರ್ಸಿಕಟ್ಟಾ ಮತ್ತು ಸಿದ್ಧಾಪುರ ಪ.ಪಂ. ಅಧಿಕಾರಿಗಳ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಈ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

