ರಾಮಕೃಷ್ಣ ಹೆಗಡೆ ಚಾಣಾಕ್ಷತೆಯಲ್ಲಿ ಅವರ ಜಾತ್ಯಾತೀತತೆಯೂ ಒಂದು ಅದು ಅವರ ಸೋಲಿಗೂ ಕಾರಣವಾಗಿತ್ತು ಎಂದು ವಿಶ್ಲೇಷಿಸಿದವರು ಬಹುಮುಖಿ ಮಹಾಬಲಮೂರ್ತಿ ಕೂಡ್ಲಕೆರೆ.
ಅವರು ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮೀತಿ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಮತ್ತು ಜಾತ್ಯಾತೀತತೆ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೋಲನ್ನು ಗೆಲುವಾಗಿ ಪರಿವರ್ತಿಸಬಲ್ಲ ಪ್ರತಿಭಾವಂತ ಹೆಗಡೆ ಪ್ರಧಾನಿ ಆಗದಿರುವುದು ದೇಶಕ್ಕೇ ಹಾನಿ ಎಂದರೆ ತಪ್ಪಲ್ಲ ಮುಗುಳ್ನಗೆಯಲ್ಲಿ ನೂರು ಅರ್ಥ ಪ್ರಕಟಿಸುತಿದ್ದ ಹೆಗಡೆ ಮಂಡಲ್ ಆಯೋಗದ ವರದಿಯನ್ನು ಬೆಂಬಲಿಸಿದ್ದಕ್ಕೆ ಅವರದೇ ಆದ ಕಾರಣಗಳಿದ್ದವು ಎಂದರು.
ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಮಹಾಬಲಮೂರ್ತಿ ಅಂದಿನ ಪತ್ರಿಕೆಗಳ ಕಾಲದಲ್ಲಿ ಪ್ರಸಿದ್ಧರಾಗಿದ್ದ ರಾಮಕೃಷ್ಣ ಹೆಗಡೆ ಇಂದಿನ ಡಿಜಿಟಲ್ ಯುಗದಲ್ಲಿ ಅಂತರಾಷ್ಟ್ರೀಯ ವ್ಯಕ್ತಿಯಾಗಿ ವಿಜೃಂಬಿಸುತಿದ್ದರು ಎಂದು ಹೆಗಡೆಯವರ ಬುದ್ಧಿವಂತಿಕೆಯನ್ನು ಕೊಂಡಾಡಿದರು.
ಈ ಸಮಾರಂಭಕ್ಕೆ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದ ಶಿಕ್ಷಣ ಪ್ರಸಾರಕ ಸಮೀತಿಯ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ರಾಜಕೀಯದಲ್ಲಿದ್ದೂ ರಾಜಕೀಯ ಅಪಸವ್ಯಗಳನ್ನು ಮೀರಿದ್ದ ರಾಮಕೃಷ್ಣ ಹೆಗಡೆ ಬಹುಮುಖಿ ಆಗಿದ್ದರು ಎಂದು ವಿವರಿಸಿದರು.
ವೇದಿಕೆಯಲ್ಲಿದ್ದ ಗಣ್ಯರು ಮತ್ತು ಬಾಲಪ್ರತಿಭೆಯನ್ನು ಸನ್ಮಾನಿಸಿ ಗೌರವಿಸಿದ ಸಂಘಟಕರು ರಾಮಕೃಷ್ಣ ಹೆಗಡೆಯವರ ಜನ್ಮದಿನವನ್ನು ಸ್ಮರಣೀಯವಾಗಿಸಿದರು.