ಹುಟ್ಟೂರಿನ ಮೋಹದ ಮುಂದೆ ಎಲ್ಲವೂ ತೃಣ ಸಮಾನ…
ಸಿದ್ಧಾಪುರದ ಪುನೀತ್ ರಾಜ್ ಕುಮಾರ್ ಆಶ್ರಯಧಾಮಕ್ಕೆ ಬಂದು ಸೇರಿದ್ಧ ಕೃಷ್ಣಕುಮಾರ್ ಮೂಲತ: ಛತ್ತೀಸ್ ಘಡದವನು. ಅಲ್ಲಿಂದ ಸಾವಿರಾರು ಕಿ.ಮೀ. ದೂರದ ಸಿದ್ಧಾಪುರಕ್ಕೆ ಮುಗದೂರಿನ ಆಶ್ರಯಧಾಮಕ್ಕೆ ಈ ವ್ಯಕ್ತಿಯನ್ನು ಕಳುಹಿಸಿದವರು ಭಟ್ಕಳದ ಜನರು. ಅದಕ್ಕಿಂತ ಹಿಂದೆ ಛತ್ತೀಸ್ ಘಡದಿಂದ ಈತ ಲಾರಿ ಮೇಲೆ ಬಂದು ಮದ್ರಾಸ್ ಸೇರಿ ನಂತರ ಉತರಕನ್ನಡಕ್ಕೆ ಬಂದವನು.
ತೀವೃಅಸ್ವಸ್ಥನಾಗಿ ಕ್ರಮೇಣ ಚೇತರಿಸಿಕೊಂಡ ಕೃಷ್ಣ ಇತ್ತೀಚೆಗೆ ತನ್ನ ಮೂಲದ ಬಗ್ಗೆ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ ಬಳಿ ಮಾತನಾಡಿದ್ದನಂತೆ! ನಂತರ ಆನ್ ಲೈನ್ ಹುಡುಕಾಟ ಪೊಲೀಸರ ಮಾಹಿತಿ ಎಲ್ಲಾ ಸೇರಿ ಇಂದು ಛತ್ತೀಸ್ ಘಡದಿಂದ ಸಿದ್ಧಾಪುರಕ್ಕೆ ಬಂದಿದ್ದ ಪೊಲೀಸ್ ರು, ಗ್ರಾಮದ ಮುಖ್ಯಸ್ಥ, ಕೃಷ್ಣನ ಸಹೋದರ ತಮ್ಮೂರಿನ ವ್ಯಕ್ತಿಯನ್ನು ಮರಳಿ ಕರೆದೊಯ್ದರು.