


ಸಿದ್ದಾಪುರ. ತಾಲೂಕಿನ ಕ್ರಿಯಾಶೀಲ ನಾಟಕ ತಂಡವಾದ ಒಡ್ಡೋಲಗ ಹಿತ್ತಲಕೈ ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಯು ಕಳೆದ ವಾರಾಂತ್ಯದಲ್ಲಿ ಕವಲಕೊಪ್ಪದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ ಮೂರು ದಿನಗಳ ಪರಿಯಂತ ವಿಶಿಷ್ಟವಾಗಿ ನಡೆಯಿತು.

ತಾಳಮದ್ದಳೆ, ನಾಟಕ, ಸಂಗೀತ, ಯಕ್ಷಗಾನ ರಂಗಪ್ರಯೋಗ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಜರುಗಿದವು. ಮೊದಲ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಶೃಂಗೇರಿ ಶಂಕರ ಮಠ ಸಿದ್ದಾಪುರದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ ಒಡ್ಡೋಲಗ ತಂಡವು ಗಣಪತಿ ಹಿತಲಕೈ ಅವರ ನೇತೃತ್ವದಲ್ಲಿ ಸಾಂಸ್ಕೃತಿಕವಾಗಿ ಅತ್ಯಮೂಲ್ಯ ಕೊಡುಗೆಗಳನ್ನು ಸಮಾಜಕ್ಕೆ ನೀಡಿದೆ. ಎಂದರು ಮುಖ್ಯ ಅತಿಥಿಗಳಾಗಿ ಡಿ.ಜಿ. ಹೆಗಡೆ ಕೆರೆಹೊಂಡ, ಡಾ. ರವಿ ಹೆಗಡೆ ಹೂವಿನ ಮನೆ, ಸತೀಶ್ ಹೆಗಡೆ ದಂಟಕಲ್ ಮುಂತಾದವರು ಭಾಗವಹಿಸಿದ್ದರು.
ಮೊದಲ ದಿನ ರಾಮಾಂಜನೇಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ್ ಭಾಗವತ ಯಲ್ಲಾಪುರ, ಅರ್ಥದಾರಿಗಳಾಗಿ ಜಬ್ಬಾರ ಸಮೊ, ಪವನ್ ಕಿರಣಕೆರೆ, ಡಿ.ಜಿ. ಹೆಗಡೆ ಕೆರೆಹೊಂಡ, ಮಹೇಶ್ ಭಟ್ ಉಮ್ಮಚಗಿ, ವಿನಾಯಕ ಹೆಗಡೆ ಕವಲಕೊಪ್ಪ ಭಾಗವಹಿಸಿದ್ದರು. ಎರಡನೆಯ ದಿನ ಶಾಸ್ತ್ರೀಯ ಸಂಗೀತ ಜುಗಲ್ಬಂದಿ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಹಿರೇಹದ್ದ, ನಾಗರಾಜ ಹೆಗಡೆ ಶಿರ್ನಾಲೆ, ಗಣೇಶ್ ಭಾಗ್ವತ ಗುಂಟ್ಕಲ್, ಮೇಧಾ ಭಟ್ ಅಗ್ಗೆರೆ, ವಾಣಿ ಹೆಗಡೆ ಗೊಂಟನಾಳ, ಅಜಯ್ ಹೆಗಡೆ ವರ್ಗಾಸರ, ಅನೀಶ್ ಹೆಗಡೆ ಹಿರೇಹದ್ದ ಪಾಲ್ಗೊಂಡಿದ್ದರು.
ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೂರನೆಯ ದಿನ ಸಮಾರೋಪ ಸಮಾರಂಭದಲ್ಲಿ ಎನ್.ವಿ. ಹೆಗಡೆ ಮುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ವಿನಾಯಕ ಹೆಗಡೆ ಕವಲಕೊಪ್ಪ, ನಾಗರಾಜ್ ಮತ್ತಿಗಾರ್, ಅನಂತ ಹೆಗಡೆ ಗೊಂಟನಾಳ, ರಮೇಶ ಹೆಗಡೆ ಹಾರ್ಸಿಮನೆ, ಎಂ.ಕೆ. ನಾಯ್ಕ ಹೊಸಳ್ಳಿ ಒಡನಾಡಿಗಳ ನುಡಿ ಆಡಿದರೆ, ದತ್ತಮೂರ್ತಿ ಭಟ್ ಶಿವಮೊಗ್ಗ ಸಾಂಸ್ಕೃತಿಕ ಸಂಸ್ಥೆ- ಸಂಘಟನೆ -ಸಾಧನೆ ಎಂಬ ವಿಷಯದ ಕುರಿತು ಮಾತನಾಡಿದರು. ಸ್ವಾಗತಿಸಿ ಪರಿಚಯಿಸಿದ ಗಣಪತಿ ಹೆಗಡೆ ಹಿತ್ತಲಕೈ ಕಳೆದ 25 ವರ್ಷಗಳಲ್ಲಿ ತಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಬೆಂಬಲಿಸಿದ ಕಲಾವಿದರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಮತ್ತು ಬೆಂಗಳೂರು ಇವರ ಸಹಕಾರವನ್ನು ಸ್ಮರಿಸಿದರು .
ಭಾಸ್ಕರ ಹೆಗಡೆ ಮುತ್ತಿಗೆ ನಿರೂಪಿಸಿದರು. ನಂತರ ಶಾಸ್ತ್ರೀಯ ಯಕ್ಷಮೇಳ ಉಡುಪಿ ಋತುಪರ್ಣ ಎಂಬ ಯಕ್ಷಗಾನ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಶಶಿಕಿರಣ್ ಮಣಿಪಾಲ್, ಕೂಡ್ಲಿ ದೇವದಾಸರಾವ್ ಪಾಡಿಗಾರು ಲಕ್ಷ್ಮಿನಾರಾಯಣ ಉಪಾಧ್ಯ ಹಾಗೂ ಪಾತ್ರಧಾರಿಗಳಾಗಿ ಗುರುರಾಜ್ ಮಾರ್ಪಳ್ಳಿ, ಪ್ರತೀಶ್ ಕುಮಾರ್ ಬ್ರಹ್ಮಾವರ, ಶ್ರೀನಿವಾಸ ಐತಾಳ ಪಾದೂರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಒಡ್ಡೋಲಗ ತಂಡದ ಸದಸ್ಯರು, ಸುತ್ತಮುತ್ತಲಿನ ಸಂಸ್ಕೃತಿ ಪ್ರೇಮಿಗಳು, ಸಿದ್ದಿವಿನಾಯಕ ದೇವಸ್ಥಾನದ ಭಕ್ತ ಮಂಡಳಿಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಒಡ್ಡೋಲಗದಿಂದ ಹವ್ಯಾಸಿ ಕಲಾವಿದ ನಂದನ್ ಹೆಗಡೆ ಮಘೇಗಾರ್ ರನ್ನು ಸನ್ಮಾನಿಸಿ,ಗೌರವಿಸಲಾಯಿತು.
