.. ಶಿ ಕ್ಷಕರು ಘನತೆ, ಗೌರವದಿಂದಿದ್ದರೆ ಯಾವ ಎತ್ತರಕ್ಕೂ ಏರಬಹುದು ಎಂದು ಡಾ. ರಾಧಾಕೃಷ್ಣನ್ ತೋರಿಸಿದ್ದಾರೆ ಎಂದು ಬಣ್ಣಿಸಿರುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸರ್ಕಾರಿ ಶಾಲೆಗಳ ಶಿಕ್ಷಕರು, ಶಿಕ್ಷಿಕಿಯರು ತಮ್ಮ ಸಾಧನೆಯಿಂದ ಸರ್ಕಾರದ ಗೌರವ ಉಳಿಸುತಿದ್ದಾರೆ ಎಂದಿದ್ದಾರೆ. ಶಿರಸಿ-ಸಿದ್ಧಾಪುರಗಳಲ್ಲಿ ಪ್ರತ್ಯೇಕವಾಗಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು ನಿವೃತ್ತ ಮತ್ತು ಸಾಧಕ ಶಿಕ್ಷಕರನ್ನು ಗೌರವಿಸಿ ಪ್ರತಿಭಾವಂತರನ್ನು ಅಭಿನಂದಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಆಗಿರುತ್ತವೆ ಆದರೆ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರದ ನಡುವೆ ನಮ್ಮ ಗುಣಮಟ್ಟ ಕಾಣಿಸುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕಲಿತವರು, ಕಲಿಯುತ್ತಿದ್ದವರು ಉನ್ನತ ಸಾಧನೆ ಮಾಡುವ ಮೂಲಕ ಸರ್ಕಾರದ ಗೌರವ ಕಾಪಾಡುತಿದ್ದಾರೆ ಎಂದರು.
ನಿವೃತ್ತ ಶಿಕ್ಷಕರು, ಪ್ರಶಸ್ತಿ ವಿಜೇತರು, ಸಾಧಕರು, ಪ್ರತಿಭಾವಂತರನ್ನು ಅಭಿನಂದಿಸಿ ಮಾತನಾಡಿದ ಅವರು ಇವರೆಲ್ಲ ಹೊಸ ಪೀಳಿಗೆಗೆ ಮಾರ್ಗದರ್ಶಕರು ಎಂದು ಕೊಂಡಾಡಿದರು.