


ಇದೊಂದು ವಿಚಿತ್ರ ಪ್ರಕರಣ ಕಾರವಾರದ ಸಾಯಿಕಟ್ಟಾ ಮೂಲಮನೆಯಲ್ಲಿ ಗಣಪತಿ ತರಲು ತಾನು ನೌಕರಿ ಮಾಡುತಿದ್ದ ಹಾವೇರಿ ಯಿಂದ ಕಾರವಾರಕ್ಕೆ ಬರುತ್ತಾನೆ ಸಂದೇಶ್ ಬೋರ್ಕರ್ ಇವನ ಹತ್ತಿರದ ರಕ್ತ ಸಂಬಂಧಿಗಳಾದ ಮನೀಶ್ ಬೋರ್ಕರ್,ರಥನ್ ಬೋರ್ಕರ್,ಪ್ರಶಾಂತ್ ಬೋರ್ಕರ್, ಸಂತೋಷ, ಮತ್ತು ಕಿರಣ ಬೋರ್ಕರ್ ಕೂಡಾ ಶಿರಸಿಯಿಂದ ಕಾರವಾರಕ್ಕೆ ಬರುತ್ತಾರೆ.

ಸಾಯಿಕಟ್ಟಾದ ಮೂಲಮನೆಯಲ್ಲಿ ಹಬ್ಬದ ತಯಾರಿಯೂ ನಡೆದು ರೂಢಿಯಂತೆ ಗಣಪತಿಯ ಪ್ರತಿಷ್ಠಾಪನೆಯೂ ನಡೆಯುತ್ತದೆ. ಪ್ರತಿವರ್ಷ ಹೀಗೇ ಗಣಪತಿ ಹಬ್ಬ ಆಚರಿಸುವ ಈ ಯುವಕರು ಈ ವರ್ಷ ಕೂಡಾ ಎಲ್ಲರ ಯಥಾನುಶಕ್ತಿ ಹಣಕಾಸಿನ ಸಂಗ್ರಹದೊಂದಿಗೆ ಸಡಗರದಿಂದ ಗಣೇಶ್ ಚತುರ್ಥಿ ಪ್ರಾರಂಭಿಸಿ ಲೆಕ್ಕಾಚಾರದ ಮಾತುಕತೆ ಪ್ರಾರಂಭಿಸುತ್ತಾರೆ. ಆಗ. ಪ್ರಾರಂಭವಾಗುವ ಗಲಾಟೆ ಕೈ ಮಿಲಾಯಿಸುವ ವರೆಗೆ ಮುಂದುವರಿಯುತ್ತದೆ. ಅಣ್ಣ-ತಮ್ಮಂದಿರ ಮಕ್ಕಳ ನಡುವಿನ ಈ ಗಲಾಟೆ ವಿಪರೀತವಾಗುತ್ತ ಇವರಲ್ಲೊಬ್ಬ ಹಣ್ಣು ಕತ್ತರಿಸುವ ಚಾಕುವಿನಿಂದ ಸಂದೇಶನ ಎದೆಗೆ ಇರಿದು ಬಿಡುತ್ತಾನೆ ನೋಡನೋಡುತ್ತಾ ಸಂದೇಶ ನೆಲಕ್ಕುರುಳಿ ಬೀಳುತ್ತಾನೆ.
ಹಾವೇರಿ ಸರ್ವೇ ಇಲಾಖೆ ನೌಕರ ಸಂದೇಶ ನೆಲಕ್ಕುರುಳುತ್ತಲೇ ವಾತಾವರಣವೇ ಬದಲಾಗುತ್ತೆ.
ಸಂದೇಶ ಕೊಲೆಯ ಆರೋಪದ ಮೇಲೆ ಒಂದೇ ಕುಟುಂಬದ ೫ ಜನರು ಜೈಲು ಸೇರುತ್ತಾರೆ. ಕಾರವಾರ ಮೂಲದವರಲ್ಲದ ಈ ಕುಟುಂಬ ಅನೇಕ ವರ್ಷಗಳಿಂದ ಕಾರವಾರದ ಸಾಯಿಕಟ್ಟಾದಲ್ಲಿ ನೆಲೆಸಿದೆ. ಇವರ ಮೂಲ ಊರು ಶಿರಸಿ, ಶಿರಸಿಯಲ್ಲೇ ಇವರ ಕುಟುಂಬ, ಸಂಬಂಧಿಗಳೆಲ್ಲಾ ನೆಲೆಸಿದ್ದಾರೆ. ಮೃತನಾದ ಸಂದೇಶ ಹಾವೇರಿಯ ನೌಕರ, ಉಳಿದವರು ಶಿರಸಿಯ ನಿವಾಸಿಗಳು ಕೇವಲ ಎಂಟು ಸಾವಿರ ರೂಪಾಯಿಗಳಿಗಾಗಿ ಸಹೋದರರ ನಡುವೆ ನಡೆದ ಜಗಳ ಹಬ್ಬದ ದಿವಸವೇ ಅವಗಢಕ್ಕೆ ಕಾರಣವಾಗಿದ್ದು ಹಾವೇರಿಯಿಂದ ಕಾರವಾರದ ವರೆಗೆ ಚರ್ಚೆಯ ವಿಷಯವಾಗಿದೆ.
